ಕೇಪ್ಟೌನ್, ಜನವರಿ 30: ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಪಾಕಿಸ್ತಾನ ಕೇಪ್ಟೌನ್ನಲ್ಲಿ ಬುಧವಾರ (ಜನವರಿ 30) ನಡೆದ ಆತಿಥೇಯ ಆಫ್ರಿಕಾ ವಿರುದ್ಧದ 5ನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ 7 ವಿಕೆಟ್ ಸೋಲನುಭವಿಸಿದೆ. ಈ ಪಂದ್ಯದೊಂದಿಗೆ ಐದು ಪಂದ್ಯಗಳ ಏಕದಿನ ಸರಣಿ 3-2ರಿಂದ ಆತಿಥೇಯರ ಹಿಡಿತದಲ್ಲಿದೆ.
ಸ್ಕೋರ್ಕಾರ್ಡ್ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಪಾಕಿಸ್ತಾನ, ಫಖರ್ ಝಮಾನ್ 70, ಇಮಾದ್ ವಾಸಿಮ್ 47 ರನ್ ಬೆಂಬಲದೊಂದಿಗೆ 50 ಓವರ್ನಲ್ಲಿ 8 ವಿಕೆಟ್ ಕಳೆದು 240 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಆಫ್ರಿಕಾ ಕ್ವಿಂಟನ್ ಡಿ ಕಾಕ್ 83, ಫಾ ಡು ಪ್ಲೆಸಿಸ್ ಮತ್ತು ರಾಸ್ಸೀ ವಾನ್ ಡೆರ್ ಡಸೆನ್ ಅಜೇಯ 50 ರನ್ ನೆರವಿನೊಂದಿಗೆ 40 ಓವರ್ನಲ್ಲಿ 3 ವಿಕೆಟ್ ಕಳೆದು 241 ರನ್ ಪೇರಿಸಿತು.
ಪಾಕ್ ಇನ್ನಿಂಗ್ಸ್ ವೇಳೆ ಡ್ವಾಯ್ನ್ ಪ್ರಿಟೋರಿಯಸ್ ಮತ್ತು ಆಂಡಿಲೆ ಫೆಹ್ಲುಕ್ವೇವೊ ತಲಾ 2 ವಿಕೆಟ್ ನೊಂದಿಗೆ ಮಿಂಚಿದರು. ಆಫ್ರಿಕಾ ಆಟಗಾರ ಕ್ವಿಂಟನ್ ಡಿ ಕಾಕ್ ಪಂದ್ಯಶ್ರೇಷ್ಠರೆನಿಸಿದರೆ, ಪಾಕಿಸ್ತಾನ ಆಟಗಾರ ಇಮಾಮ್ ಉಲ್ ಹಖ್ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.
ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್ (ವಿ.ಕೆ.), ಹಾಶಿಮ್ ಅಮ್ಲಾ, ರೀಜಾ ಹೆಂಡ್ರಿಕ್ಸ್, ಫಾ ಡು ಪ್ಲೆಸಿಸ್ (ಸಿ), ರಸ್ಸೀ ವಾನ್ ಡೆರ್ ಡಸೆನ್, ವಿಲ್ಲೆಮ್ ಮುಲ್ಡರ್, ಡುವಾಯ್ನ್ ಪ್ರಿಟೋರಿಯಸ್, ಆಂಡಿಲೆ ಫೆಹಲ್ಕ್ವೇವೊ, ಕಾಗಿಸೊ ರಬಾಡ, ಡೇಲ್ ಸ್ಟೇಯ್ನ್, ಇಮ್ರಾನ್ ತಾಹಿರ್.
ಪಾಕಿಸ್ತಾನ ತಂಡ: ಇಮಾಮ್ ಉಲ್ ಹಕ್, ಫಖರ್ ಜಮಾನ್, ಬಾಬರ್ ಅಝಾಮ್, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್ (ಸಿ), ಮೊಹಮ್ಮದ್ ರಿಜ್ವಾನ್ (ವಿಕೆ), ಇಮಾದ್ ವಾಸಿಮ್, ಶದಾಬ್ ಖಾನ್, ಮೊಹಮ್ಮದ್ ಅಮೀರ್, ಶಾಹೈನ್ ಅಫ್ರಿದಿ, ಉಸ್ಮಾನ್ ಖಾನ್.