Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ದ. ಆಫ್ರಿಕಾ vs ವೆಸ್ಟ್ ಇಂಡೀಸ್: ಮೊದಲ ಟೆಸ್ಟ್ 2ನೇ ದಿನದಾಟ, Live ಸ್ಕೋರ್

South Africa vs West Indies 1st Test day 2 Live score and Highlights, Centurion

ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ ಇಂಡೀಸ್ ತಂಡಗಳ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದ ಎರಡನೇ ದಿನದಾಟ ಆರಂಭವಾಗಿದೆ. ಮೊದಲ ದಿನದಾಟದಲ್ಲಿ ದಕ್ಷಿಣ ಆಫ್ರಿಕಾ ತಮಡ ಭರ್ಜರಿ ಆರಂಭ ಪಡೆದಿದ್ದು ಮೇಲುಗೈ ಸಾಧಿಸಿದೆ. ಆರಂಭಿಕ ಆಟಗಾರ ಐಡೆನ್ ಮಾರ್ಕ್ರಮ್ ಭರ್ಜರಿ ಶತಕ ಸಿಡಿಸಿದರೆ ಮಾಜಿ ನಾಯಕ ಡೀನ್ ಎಲ್ಗರ್ 71 ರನ್‌ಗಳ ಕೊಡುಗೆ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ ಭರ್ಜರಿ 141 ರನ್‌ಗಳ ಕೊಡುಗೆ ನೀಡಿದ ಪರಿಣಾಮ ದಕ್ಷಿಣ ಆಫ್ರಿಕಾ ಮೊದಲ ದಿನದಾಟದಲಿ ಮೇಲುಗೈ ಸಾಧಿಸಿತು.

ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರರನ್ನು ಹೊರತುಪಡಿಸಿ ಉಳಿದ ಬ್ಯಾಟರ್‌ಗಳಿಂದ ನೆರವು ದೊರೆಯದ ಕಾರಣ ನಿರೀಕ್ಷಿತ ಯಶಸ್ಸು ಪಡೆಯಲು ಸಾಧ್ಯವಾಗಲಿಲ್ಲ. ಐಡೆನ್ ಮಾರ್ಕ್ರಮ್ ಅವರ ಅಮೋಘ ಆಟ ಮೊದಲ ದಿನದ ಹೈಲೈಟ್ಸ್. 174 ಎಸೆತಗಳನ್ನು ಎದುರಿಸಿದ ಮಾರ್ಕ್ರಮ್ 115 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು.

Live score ಹೀಗಿದೆ

1
55681

ಮೊದಲ ದಿನದಾಟದ ಅಂತ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 314 ರನ್‌ಗಳಿಸಿ 8 ವಿಕೆಟ್ ಕಳೆದುಕೊಂಡಿತ್ತು. ಮಾರ್ಕೋ ಜಾನ್ಸನ್ ಹಾಗೂ ಗೆರಾಲ್ಡ್ ಕೊಟ್ಜೀ ಎರಡನೇ ದಿನಕ್ಕೆ ಕ್ರೀಸ್ ಕಾಯ್ದಿರಿಸಿ ಬ್ಯಾಟಿಂಗ್ ಆರಂಭಿಸಿದ್ದಾರೆ. ಇನ್ನು ಮೊದಲ ದಿನದಾಟದಲ್ಲಿ ವೆಸ್ಟ್ ಇಂಡೀಸ್ ಪರವಾಗಿ ಅಲ್ಜಾರಿ ಜೋಸೆಫ್ ಅದ್ಭುತ ಬೌಲಿಂಗ್ ಪ್ರದರ್ಶಿಸಿದ್ದಾರೆ. ದಕ್ಷಿಣ ಆಫ್ರಿಕಾದ ಮೂರು ವಿಕೆಟ್ ಕಬಳಿಸಿದ್ದು ಉಳಿದಂತೆ ಕೇಮರ್ ರೋಚ್, ಕೇಲ್ ಮೇಯರ್ಸ್, ಶೆನಾನ್ ಗೇಬ್ರಿಯಲ್ ಹಾಗೂ ಜೇಸನ್ ಹೋಲ್ಡರ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.

ದಕ್ಷಿಣ ಆಫ್ರಿಕಾ ಆಡುವ ಬಳಗ: ಡೀನ್ ಎಲ್ಗರ್, ಐಡೆನ್ ಮಾರ್ಕ್ರಾಮ್, ಟೋನಿ ಡಿ ಜೋರ್ಜಿ, ಟೆಂಬಾ ಬವುಮಾ (ನಾಯಕ), ಕೀಗನ್ ಪೀಟರ್ಸನ್, ಹೆನ್ರಿಚ್ ಕ್ಲಾಸೆನ್ (ವಾಕ್), ಸೆನುರಾನ್ ಮುತುಸ್ಯಾಮಿ, ಮಾರ್ಕೊ ಜಾನ್ಸೆನ್, ಅನ್ರಿಚ್ ನಾರ್ಟ್ಜೆ, ಕಗಿಸೊ ರಬಾಡ, ಜೆರಾಲ್ಡ್ ಕೋಟ್ಜಿ

ಬೆಂಚ್: ಕೇಶವ್ ಮಹಾರಾಜ್, ಸೈಮನ್ ಹಾರ್ಮರ್, ವಿಯಾನ್ ಮುಲ್ಡರ್, ರಯಾನ್ ರಿಕೆಲ್ಟನ್

ವೆಸ್ಟ್ ಇಂಡೀಸ್ ತಂಡ: ಕ್ರೈಗ್ ಬ್ರಾಥ್‌ವೈಟ್ (ನಾಯಕ), ಟಾಗೆನರೈನ್ ಚಂದ್ರಪಾಲ್, ರೇಮನ್ ರೈಫರ್, ಜೆರ್ಮೈನ್ ಬ್ಲಾಕ್‌ವುಡ್, ಕೈಲ್ ಮೇಯರ್ಸ್, ರೋಸ್ಟನ್ ಚೇಸ್, ಜೋಶುವಾ ಡಾ ಸಿಲ್ವಾ (ವಿಕೆಟ್ ಕೀಪರ್), ಜೇಸನ್ ಹೋಲ್ಡರ್, ಅಲ್ಜಾರಿ ಜೋಸೆಫ್, ಕೆಮರ್ ರೋಚ್, ಶಾನನ್ ಗೇಬ್ರಿಯಲ್

ಬೆಂಚ್: ಗುಡಕೇಶ್ ಮೋಟಿ, ಡೆವೊನ್ ಥಾಮಸ್, ಅಲಿಕ್ ಅಥಾನಾಜೆ, ಅಕೀಮ್ ಜೋರ್ಡಾನ್

Story first published: Wednesday, March 1, 2023, 13:39 [IST]
Other articles published on Mar 1, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+