Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆರ್‌ಸಿಬಿಯ ಮಾಜಿ ಆಟಗಾರ ಕ್ರಿಸ್‌ ಮೊರಿಸ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ

Chriss moris

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಆಲ್‌ರೌಂಡರ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಮಾಜಿ ಆಟಗಾರ ಕ್ರಿಸ್ ಮೊರಿಸ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಾರೆ. ಇನ್ಮುಂದೆ ಅವರು ದೇಶೀಯ ಕ್ರಿಕೆಟ್‌ನ ಟೈಟನ್ಸ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

ಇಂದು ಕ್ರಿಸ್ ಮೊರಿಸ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ತನ್ನ ನಿವೃತ್ತಿ ಕುರಿತಾದ ವಿಚಾರವನ್ನ ಬಹಿರಂಗಪಡಿಸಿದ್ದು, ವೃತ್ತಿಜೀವನದಲ್ಲಿ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ಎಂದು ತಿಳಿಸಿದ್ದಾರೆ.

"ಇಂದು ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳುತ್ತಿದ್ದೇನೆ. ನನ್ನ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ದೊಡ್ಡ ಅಥವಾ ಸಣ್ಣ ಪಾತ್ರ ನಿರ್ವಹಿಸಿರುವ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಇದು ಒಂದು ರೀತಿಯ ಮೋಜಿನ ಪ್ರಯಾಣವಾಗಿತ್ತು! ಇದೀಗ ಟೈಟನ್ಸ್‌ ತಂಡದೊಂದಿಗೆ ಹೊಸ ಜೀವನವನ್ನು ಆರಂಭಿಸುತ್ತಿರುವುದಕ್ಕೆ ಖಷಿಯಾಗುತ್ತಿದೆ," ಎಂದು ಮೊರಿಸ್‌ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಮೂರು ಸ್ವರೂಪಗಳಲ್ಲಿ ಪ್ರೋಟೀಸ್‌ಗಾಗಿ 69 ಪಂದ್ಯಗಳಲ್ಲಿ ಭಾಗವಹಿಸಿದ ಮೋರಿಸ್ 94 ವಿಕೆಟ್‌ಗಳನ್ನು ಪಡೆದರು. ಕೆಳ ಕ್ರಮಾಂಕದಲ್ಲಿ ಪ್ರತಿಭಾನ್ವಿತ ಹಿಟ್ಟರ್ ಕೂಡ ಆಗಿದ್ದ ಇವರು , ತಮ್ಮ ಆಲ್‌ರೌಂಡರ್ ಪರ್ಫಾಮೆನ್ಸ್ ಅನ್ನು ದೊಡ್ಡ ಮಟ್ಟಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸಲು ವಿಫಲಗೊಂಡರು. ಇವರು ಒಟ್ಟು 774 ಅಂತರರಾಷ್ಟ್ರೀಯ ರನ್‌ಗಳನ್ನು ಗಳಿಸಿದ್ದಾರೆ.

ಕಳೆದ 2021ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಕ್ರಿಸ್‌ ಮಾರಿಸ್‌ ರಾಜಸ್ಥಾನ್‌ ರಾಯಲ್ಸ್‌ ತಂಡದ ಪರ ಆಡಿದ್ದರು. ಇದಕ್ಕೂ ಹಿಂದಿನ ಆವೃತ್ತಿ ಅಂದರೆ 2020ರ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದರು. ಅಂದ ಹಾಗೆ 2019ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಕೊನೆಯ ಬಾರಿ ದಕ್ಷಿಣ ಆಫ್ರಿಕಾ ತಂಡವನ್ನು ಕೊನೆಯ ಬಾರಿ ಮಾರಿಸ್‌ ಪ್ರತಿನಿಧಿಸಿದ್ದರು.

2021ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಕ್ರಿಸ್‌ ಮಾರಿಸ್‌ 16.25 ಕೋಟಿ ರೂ.ಗಳನ್ನು ತಮ್ಮ ಜೇಬಿ ಗಿಳಿಸಿಕೊಂಡಿದ್ದರು. ಆ ಮೂಲಕ ಐಪಿಎಲ್ ಟೂರ್ನಿಯಲ್ಲಿ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದರು.

2012ರಲ್ಲಿ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಮೊರಿಸ್, 2013ರಲ್ಲಿ ಪಾಕಿಸ್ತಾನ ವಿರುದ್ಧ ಏಕದಿನ ಕ್ರಿಕೆಟ್ ಪಾದಾರ್ಪಣೆ ಮಾಡಿದ್ರು, ಇಂಗ್ಲೆಂಡ್ ವಿರುದ್ಧ 2017ರಲ್ಲಿ ಕೊನೆಯ ಟೆಸ್ಟ್‌ ಪಂದ್ಯವನ್ನಾಡಿದ್ರು.

Story first published: Tuesday, January 11, 2022, 17:09 [IST]
Other articles published on Jan 11, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+