For Quick Alerts
ALLOW NOTIFICATIONS  
For Daily Alerts
 

Trisha Chetty: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟರ್ ತ್ರಿಶಾ ಚೆಟ್ಟಿ

South African Women Cricketer Trisha Chetty Has Announced Retirement From International Cricket

ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡದ ವಿಕೆಟ್‌ಕೀಪರ್-ಬ್ಯಾಟರ್ ತ್ರಿಶಾ ಚೆಟ್ಟಿ ಅವರು ಶುಕ್ರವಾರ, ಮಾರ್ಚ್ 17ರಂದು ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು.

34 ವರ್ಷದ ಕ್ರಿಕೆಟರ್ ತ್ರಿಶಾ ಚೆಟ್ಟಿ ನಿರಂತರವಾಗಿ ಬೆನ್ನುನೋವಿನಿಂದ ಬಳಲುತ್ತಿದ್ದರು. ತಮ್ಮ 16 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ 200ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿದ ಅವರು ವಿದಾಯ ಹೇಳಿದರು.

ಈ ಕುರಿತು ನಿರ್ಧಾರ ಪ್ರಕಟಿಸಿದ ತ್ರಿಶಾ ಚೆಟ್ಟಿ, "ಇದೀಗ ನಾನು ನನ್ನ ಶೂ ಮತ್ತು ಗ್ಲೌಸ್‌ಗಳನ್ನು ನೇತುಹಾಕುವ ಸಮಯ ಬಂದಿದೆ. ನಾನು ಕ್ರಿಕೆಟ್‌ಗೆ ಮರಳಲು ಎಲ್ಲ ರೀತಿಯಾಗಿ ಪ್ರಯತ್ನಿಸಿದೆ. ಆದರೆ, ನನ್ನಿಂದ ಸಾಧ್ಯವಾದಷ್ಟು ದೂರವಾಗಿ ಸಾಗಿದೆ. ನನ್ನ ದೇಹವು ಆಟಕ್ಕೆ ಮರಳಲು ಅವಕಾಶ ನೀಡುತ್ತಿಲ್ಲ ಎಂದು ಸೂಚಿಸುತ್ತಿದೆ. ಹೀಗಾಗಿ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ಸಮಯ ಬಂದಿದೆ," ಎಂದು ತಿಳಿಸಿದ್ದಾರೆ.

ತನ್ನ ಕ್ರಿಕೆಟ್ ವೃತ್ತಿಜೀವನವು ಮುಗಿಯುತ್ತಿದೆ ಎಂದು ನಂಬಲಾಗುತ್ತಿಲ್ಲ. ಕ್ರಿಕೆಟ್ ವೃತ್ತಿಜೀವನವು ನನ್ನ ಜೀವನವನ್ನು ಬದಲಾಯಿಸಿದ ಅನುಭವವಾಗಿದೆ ಎಂದು ದಕ್ಷಿಣ ಆಫ್ರಿಕಾ ಸ್ಟಾರ್ ಆಟಗಾರ್ತಿ ತ್ರಿಶಾ ಚೆಟ್ಟಿ ಮನದಾಳ ವ್ಯಕ್ತಪಡಿಸಿದ್ದಾರೆ.

South African Women Cricketer Trisha Chetty Has Announced Retirement From International Cricket

"ನಿವೃತ್ತಿ ತೆಗೆದುಕೊಳ್ಳುತ್ತಿರುವುದು ನನಗೆ ಸುಲಭದ ನಿರ್ಧಾರವಾಗಿರಲಲ್ಲ ಮತ್ತು ಈಗಲೂ ನನ್ನ ಕ್ರಿಕೆಟ್ ವೃತ್ತಿಜೀವನವು ಮುಗಿದಿದೆ ಎಂದು ನಾನು ನಂಬಲು ಸಾಧ್ಯವಿಲ್ಲ. ಆದರೆ, ಕ್ರಿಕೆಟ್ ವೃತ್ತಿಜೀವನವು ನನ್ನ ಜೀವನವನ್ನು ಬದಲಾಯಿಸಿದ ಅನುಭವವಾಗಿದೆ".

"ನಾನು ಪೂರ್ಣ ಮನಸ್ಸಿನಿಂದ ಹಿಂತಿರುಗಿ ನೋಡಿದರೆ, ಕ್ರಿಕೆಟ್ ನನಗೆ ಜೀವನ, ಶಿಸ್ತು, ವೃತ್ತಿಪರ ಮತ್ತು ತಂಡದ ಆಟಗಾರ್ತಿಯಾಗಿರುವುದು ಹೇಗೆ ಎಂದು ಕಲಿಸಿದೆ. ಇದಕ್ಕಾಗಿ ನಾನು ಯಾವಾಗಲೂ ಕ್ರಿಕೆಟ್‌ಗೆ ಕೃತಜ್ಞಳಾಗಿರುತ್ತೇನೆ. ನಾನು ನಿವೃತ್ತಿಯ ನಂತರದ ನನ್ನ ಜೀವನಕ್ಕೆ ಪರಿವರ್ತನೆಯಾಗುತ್ತೇನೆ," ಎಂದು ತ್ರಿಶಾ ಚೆಟ್ಟಿ ಹೇಳೀದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಔಟಾದ ವಿಶ್ವದಾಖಲೆ ಹೊಂದಿದ ತ್ರಿಶಾ ಚೆಟ್ಟಿ
ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡದ ವಿಕೆಟ್ ಕೀಪರ್-ಬ್ಯಾಟರ್ ತ್ರಿಶಾ ಚೆಟ್ಟಿ 2007ರಲ್ಲಿ ಪಾಕಿಸ್ತಾನದ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಚೊಚ್ಚಲ ಪ್ರವೇಶ ಮಾಡಿದರು.

ಡರ್ಬನ್‌ನಲ್ಲಿ ಜನಿಸಿದ ತ್ರಿಶಾ ಚೆಟ್ಟಿ 50 ಓವರ್‌ಗಳ ಮಾದರಿಯಲ್ಲಿ ಅತಿ ಹೆಚ್ಚು ಬಾರಿ ಔಟಾದ (182) ವಿಶ್ವ ದಾಖಲೆಯನ್ನು ಹೊಂದಿದ್ದಾರೆ. ಅವರು ಏಕದಿನ ಕ್ರಿಕೆಟ್‌ನಲ್ಲಿ 2700ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ ಮತ್ತು 16 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಅನುಭವಿ ಕ್ರಿಕೆಟರ್ ತ್ರಿಶಾ ಚೆಟ್ಟಿ ಒಂದೇ ಸರಣಿಯಲ್ಲಿ ಅಂದರೆ, 2014- 2016/17ರ ಐಸಿಸಿ ಮಹಿಳಾ ಚಾಂಪಿಯನ್‌ಶಿಪ್‌ನಲ್ಲಿ ಅತಿ ಹೆಚ್ಚು ಔಟ್ ಮಾಡಿದ (23) ವಿಕೆಟ್ ಕೀಪರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಮಹಿಳಾ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಕ್ಯಾಚ್‌ಗಳು (131) ಮತ್ತು ಜಂಟಿಯಾಗಿ ಅತಿ ಹೆಚ್ಚು ಸ್ಟಂಪಿಂಗ್ (51) ಮಾಡಿದ ವಿಕೆಟ್ ಕೀಪರ್ ಎಂಬ ದಾಖಲೆಯನ್ನು ತ್ರಿಶಾ ಚೆಟ್ಟಿ ಹೊಂದಿದ್ದಾರೆ.

Story first published: Friday, March 17, 2023, 23:50 [IST]
Other articles published on Mar 17, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+