ಸೆಮಿಫೈನಲ್ ಗೂ ಮುನ್ನ ಸ್ಪೆಷಲ್ ಸೆಂಚುರಿ ಬಾರಿಸಿದ ಧೋನಿ
ಮೆಲ್ಬೋರ್ನ್, ಮಾ.19: ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರು ನಾಕೌಟ್ ಹಂತದ ಮೊದಲ ಪಂದ್ಯದ ಗಡಿ ದಾಟಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧ ಸುಲಭ ಜಯ ದಾಖಲಿಸಿದ ಭಾರತ ಸೆಮಿಫೈನಲ್ ತಲುಪಿದೆ. ಸೆಮಿಫೈನಲ್ ಪ್ರವೇಶದೊಂದಿಗೆ ನಾಯಕ ಧೋನಿ ಅವರು ಸ್ಪೆಷಲ್ ಸೆಂಚುರಿ ಬಾರಿಸಿದ್ದಾರೆ.
ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಮಿಂಚಿ ಬಾಂಗ್ಲಾ ವಿರುದ್ಧ 109 ವಿಕೆಟ್ ಗಳ ಜಯ ದಾಖಲಿಸಿತು. ಭಾರತದ ಬೌಲರ್ ಗಳು ಸತತ 7 ಬಾರಿ ಎದುರಾಳಿ ತಂಡವನ್ನು ಆಲೌಟ್ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದರು.
ಬಾಂಗ್ಲಾ ವಿರುದ್ಧ ಜಯದೊಂದಿಗೆ ಧೋನಿ ಅವರು ನಾಯಕನಾಗಿ 100ನೇ ವಿಜಯ ದಾಖಲಿಸಿದರು. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೂರನೇ ಹಾಗೂ ಭಾರತದ ಮೊದಲ ಕ್ರಿಕೆಟ್ ಕ್ಯಾಪ್ಟನ್ ಎನಿಸಿಕೊಂಡಿದ್ದಾರೆ.

ಧೋನಿ ಅವರಿಗಿಂತ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಹಾಗೂ ಅಲಾನ್ ಬಾರ್ಡರ್ ಮುಂದಿದ್ದಾರೆ. ಭಾರತದ ಪರ ಮಹಮ್ಮದ್ ಅಜರುದ್ದೀನ್ ಅವರು 174 ಪಂದ್ಯಗಳಲ್ಲಿ 90 ಜಯ ಸಾಧಿಸಿರುವ ಧೋನಿ ಅವರ ಹಿಂದೆ ಇದ್ದಾರೆ. [ಧೋನಿ ಅಭಿಮಾನಿಗಳಿಗೆ ಈ ಸುದ್ದಿ ಇಷ್ಟವಾಗಲ್ಲ!]
2007ರಲ್ಲಿ ಏಕದಿನ ಕ್ರಿಕೆಟ್ ತಂಡದ ನಾಯಕರಾಗಿ ಅಧಿಕಾರ ವಹಿಸಿಕೊಂಡ ಧೋನಿ ಅವರು ದಾಖಲೆಯ 11 ವಿಶ್ವಕಪ್ ಪಂದ್ಯಗಳನ್ನು ಜಯಸಿದ ನಾಯಕ ಎನಿಸಿದ್ದಾರೆ. ಈ ವಿಶ್ವಕಪ್ ನಲ್ಲಿ ಸತತ 7 ಜಯ ದಾಖಲಿಸಿದ್ದಾರೆ. ಐಸಿಸಿ ಆಯೋಜನೆ ಮೂರು ಪ್ರಮುಖ ಟೂರ್ನಿಗಳಾದ ವಿಶ್ವಕಪ್ ಟಿ20 (2007), ವಿಶ್ವಕಪ್ (2011) ಹಾಗೂ ಚಾಂಪಿಯನ್ ಟ್ರೋಫಿ (2013) ಗಳನ್ನು ಧೋನಿ ನಾಯಕತ್ವದಲ್ಲೇ ಗೆದ್ದಿದ್ದನ್ನು ಮರೆಯುವಂತಿಲ್ಲ.
ಅತಿ ಹೆಚ್ಚು ಜಯ ದಾಖಲಿಸಿರುವ ಯಶಸ್ವಿ ನಾಯಕರ ಪಟ್ಟಿ
* ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) : 230 ಪಂದ್ಯ-165 ಗೆಲುವು- 51 ಸೋಲು- ಗೆಲುವಿನ ಪ್ರತಿಶತ 76%
* ಅಲಾನ್ ಬಾರ್ಡರ್ (ಆಸ್ಟ್ರೇಲಿಯಾ) : 178 ಪಂದ್ಯ-107 ಗೆಲುವು- 67 ಸೋಲು- ಗೆಲುವಿನ ಪ್ರತಿಶತ 61%
* ಎಂಎಸ್ ಧೋನಿ (ಭಾರತ) : 177 ಪಂದ್ಯ-100 ಗೆಲುವು- 62 ಸೋಲು- ಗೆಲುವಿನ ಪ್ರತಿಶತ 60%
* ಹ್ಯಾನ್ಸಿ ಕ್ರೊನಿಯೆ (ದಕ್ಷಿಣ ಆಫ್ರಿಕಾ) : 138 ಪಂದ್ಯ-99 ಗೆಲುವು- 35 ಸೋಲು- ಗೆಲುವಿನ ಪ್ರತಿಶತ 73%
* ಸ್ಟೀಫನ್ ಫ್ಲೆಮಿಂಗ್ (ನ್ಯೂಜಿಲೆಂಡ್) : 218 ಪಂದ್ಯ-98 ಗೆಲುವು- 106 ಸೋಲು- ಗೆಲುವಿನ ಪ್ರತಿಶತ 48%
ಒನ್ ಇಂಡಿಯಾ ಸುದ್ದಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications