ಪುತ್ತೂರಿನ ಬಿಂದು ಕಂಪನಿಗೆ ಭೇಟಿ ನೀಡಿದ ಸ್ಪಿನ್ ದಿಗ್ಗಜ ಮುರುಳೀಧರನ್

ಮಂಗಳೂರು, ಜುಲೈ 22: ಶ್ರೀಲಂಕಾದ ಮಾಜಿ ಕ್ರಿಕೆಟಿಗ, ವಿಶ್ವ ಶ್ರೇಷ್ಠ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಭೇಟಿ ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಪುತ್ತೂರಿನ ಪಾನಿಯ ಕಂಪನಿ ಬಿಂದು ಉತ್ಪಾದನಾ ಘಟಕಕ್ಕೆ ಭೇಟಿ ನೀಡದ ಮುರುಳಿಧರನ್, ಬಿಂದು ಕಂಪನಿಯ ಮುಖ್ಯಸ್ಥ ಸತ್ಯ ಶಂಕರ್ ಭಟ್ ಅವರನ್ನು ಭೇಟಿ ಯಾಗಿ ಮಾತುಕತೆ ನಡೆಸಿದ್ದಾರೆ.
ಪುತ್ತೂರಿನ ನರಿಮೊಗರಿವಿನಲ್ಲಿರುವ ಬಿಂದು ಕಂಪೆನಿಯ ಉತ್ಪಾದನ ಘಟಕಕ್ಕೆ ಮುತ್ತಯ್ಯ ಮುರುಳೀಧರನ್ ಭೇಟಿ ನೀಡಿದರು. ಪಾನೀಯ ಉದ್ಯಮದಲ್ಲಿ ಆಸಕ್ತಿ ಹೊಂದಿರುವ ಮುತ್ತಯ್ಯ ಮುರುಳೀಧರನ್, ಆ ಬಗ್ಗೆ ಮಾತುಕತೆ ನಡೆಸಿದ್ದಾರೆ, ಮಾಹಿತಿ ಕಲೆ ಹಾಕಿದ್ದಾರೆ.
ಈಗಾಗಲೇ ಮುತ್ತಯ್ಯ ಮುರುಳೀಧರನ್ ಶ್ರೀಲಂಕಾದಲ್ಲಿ ಪಾನೀಯ ಉತ್ಪನ್ನಗಳ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದು, ಅದನ್ನು ಇನ್ನಷ್ಟ ಬೆಳೆಸುವ ದೃಷ್ಠಿಯಿಂದ ಬಿಂದು ಕಂಪನಿ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಬಿಂದು ಕಂಪೆನಿಯ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ ಸ್ಪಿನ್ ದಂತಕತೆ ವಿವಿಧ ಉತ್ಪನ್ನಗಳ ತಯಾರಿಕೆಯನ್ನು ವೀಕ್ಷಿಸಿದರು. ಬಿಂದು ಕಂಪೆನಿಯೂ ಪ್ಯಾಕೆಜ್ಡ್ ನೀರುಗಳ ತಯಾರಿಕ ಘಟಕವನ್ನು ಹೊಂದಿದೆ. ಅಲ್ಲದೇ, ಉತ್ತಮ ಗುಣಮಟ್ಟದ ವಿವಿಧ ರೀತಿಯ ಸೋಡಾ ಪಾನೀಯಗಳನ್ನು ತಯಾರಿಸುತ್ತಿದೆ. ಅಂಧ್ರ ಪ್ರದೇಶದ ಹೈದರಾಬಾದಿನಲ್ಲಿಯೂ ಬಿಂದು ಸಂಸ್ಥೆ ತಯಾರಿಕಾ ಘಟಕ ಹೊಂದಿದೆ.
ಬಿಂದು ಕಂಪನಿ ವಿವಿಧ ಮಾದರಿಯ ಜೀರಿಗೆ ಮತ್ತು ಶುಂಟಿಯಿಂದ ತಯಾರಿಸುವ ಪಾನೀಯಗಳಿಗೆ ಭಾರೀ ಬೇಡಿಕೆ ಇದೆ. ಈ ಬಗ್ಗೆ ಆಸಕ್ತಿಹೊಂದಿರುವ ಮುತ್ತಯ್ಯ ಮುರುಳೀಧರನ್ ಶ್ರೀಲಂಕಾದಲ್ಲಿಯೂ ಜೀರಿಗೆ ಹಾಗು ಶುಂಟಿಯಿಂದ ಪಾನೀಯ ತಯಾರಿಲು ಯೋಜನೆ ರೂಪಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications