ಐಪಿಎಲ್ 2024 ಸಿದ್ಧತೆಗಳು ಪೂರ್ಣಗೊಂಡಿವೆ. ದುಬೈನಲ್ಲಿ ನಡೆದ ಹರಾಜಿನಲ್ಲಿ ತಮಗೆ ಬೇಕಿರುವ ಆಟಗಾರರನ್ನು ಬಿಡ್ ಮೂಲಕ ತಂಡಕ್ಕೆ ಸೇರಿಸಿಕೊಂಡಿವೆ. ಈ ಹರಾಜಿನಲ್ಲಿ ಎಲ್ಲರ ಗಮನ ಸೆಳೆದ ಆಟಗಾರ ಆಸ್ಟ್ರೇಲಿಯಾ ತಂಡಕ್ಕೆ ವಿಶ್ವ ಚಾಂಪಿಯನ್ ಪಟ್ಟವನ್ನು ತೊಡಿಸಿದ ನಾಯಕ ಪ್ಯಾಟ್ ಕಮಿನ್ಸ್..
ಹರಾಜಿನಲ್ಲಿ ಪ್ಯಾಟ್ ಕಮಿನ್ಸ್ ಅವರ ಹೆಸರು ಕೇಳಿ ಬರುತ್ತಿದ್ದಂತೆ ಫ್ರಾಂಚೈಸಿಗಳು ಇವರನ್ನು ಕೊಳ್ಳಲು ಬಿಡ್ಡಿಂಗ್ ಅಖಾಡಕ್ಕೆ ಇಳಿದರು. ನೋಡು ನೋಡುತ್ತಲೆ ಇವರ ಬೆಲೆ ಆಗಸದೆತ್ತರಕ್ಕೆ ಮುಟ್ಟುತ್ತಲೆ ಸಾಗಿತು. ಆದರೂ ಸನ್‌ರೈಸರ್ಸ್ ಹೈದರಾಬಾದ್ ಬಿಡ್ಡಿಂಗ್ ಅಖಾಡದಿಂದ ಹಿಂದೆ ಸರಿಯದೇ ಕೋಟಿ ಕೋಟಿ ಹಣವನ್ನು ಹೂಡಿತು.

ಆಸೀಸ್ ನಾಯಕನಿಗೆ ಎಸ್‌ಆರ್‌ಎಚ್ ತಂಡ 20.50 ಕೋಟಿ ನೀಡಿ ತಮ್ಮ ತಂಡಕ್ಕೆ ಸೇರಿಸಿಕೊಂಡಿತು. ಈ ಪ್ಲೇಯರ್ ಐಪಿಎಲ್ ಇತಿಹಾಸದ ಎರಡನೇ ದುಬಾರಿ ಆಟಗಾರ ಎಂಬ ಖ್ಯಾತಿ ತಮ್ಮದಾಗಿಸಿಕೊಂಡಿದ್ದಾರೆ. ಈ ಪ್ಲೇಯರ್ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ನೀಡಿದ ಪ್ರದರ್ಶನ ಐಪಿಎಲ್‌ನಲ್ಲಿ ಉಳಿದ ತಂಡಗಳಿಗೆ ನಡುಕ ಹುಟ್ಟಿಸಿದೆ.
ಮೆಲ್ಬೋರ್ನ್‌ನಲ್ಲಿ ನಡೆದ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ 5 ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದು, ಪಾಕ್ ಬ್ಯಾಟಿಂಗ್ ಬೆನ್ನೆಲೆಬು ಮುರಿದಿದ್ದಾರೆ.
ಬೌನ್ಸಿ ಪಿಚ್‌ನಲ್ಲಿ ಅಮೋಘ ದಾಳಿಯನ್ನು ಸಂಘಟಿಸಿರುವ ಪ್ಯಾಟ್ ಕಮಿನ್ಸ್ ಅಬ್ಬರಿಸಿದ್ದಾರೆ. ಈ ಮೂಲಕ ಐಪಿಎಲ್ 2024ರ ಮುನ್ನವೇ ಭರ್ಜರಿ ಫಾರ್ಮ್‌ಗೆ ಮರಳಿದ್ದು, ಬೇರೆ ತಂಡಗಳಿಗೆ ನಡುಕ ಹುಟ್ಟಿದ್ದಾರೆ.

ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಪಾಕಿಸ್ತಾನವನ್ನು 79 ರನ್‌ಗಳಿಂದ ಸೋಲಿಸಿದೆ. ಇದು ಈ ಸರಣಿಯಲ್ಲಿ ಆಸ್ಟ್ರೇಲಿಯಾ ಸಾಧಿಸಿದ ಸತತ ಎರಡನೇ ಗೆಲುವು. ಮೆಲ್ಬೋರ್ನ್‌ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 318 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 262 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಪಾಕಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ 264 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 237 ರನ್ ಗಳಿಸಿತು. ಈ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಪ್ಯಾಟ್ ಕಮ್ಮಿನ್ಸ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿದೆ. ಕಮಿನ್ಸ್ ಒಟ್ಟು 10 ವಿಕೆಟ್ ಪಡೆದಿದ್ದಾರೆ.
ಪಾಕಿಸ್ತಾನ ಗೆಲುವಿಗೆ 317 ರನ್‌ಗಳ ಅಗತ್ಯವಿತ್ತು. ಆದರೆ ತಂಡ 237 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗಿತ್ತು. ಈ ಇನ್ನಿಂಗ್ಸ್‌ನಲ್ಲಿ ಶಾನ್ ಮಸೂದ್ 60 ರನ್ ಗಳಿಸಿ ಔಟಾದರು. ಅವರು 7 ಬೌಂಡರಿಗಳನ್ನು ಬಾರಿಸಿದರು. ಬಾಬರ್ ಅಜಮ್ 41 ರನ್ ಗಳ ಇನ್ನಿಂಗ್ಸ್ ಗೆ ಜೋಶ್ ಹ್ಯಾಜಲ್ ವುಡ್ ಬ್ರೇಕ್ ಹಾಕಿದರು. ರಿಜ್ವಾನ್ 35 ರನ್ ಕೊಡುಗೆ ನೀಡಿದರು. ಸರಣಿಯಲ್ಲಿ ಪಾಕಿಸ್ತಾನ ತಂಡಕ್ಕೆ ಇದು ಸತತ ಎರಡನೇ ಸೋಲು. ಕಮ್ಮಿನ್ಸ್ 18 ಓವರ್‌ಗಳಲ್ಲಿ 49 ರನ್ ನೀಡಿ 5 ವಿಕೆಟ್ ಪಡೆದರು.