
3 ಕೋಟಿ ರೂ.ಗೆ ಆರೆಂಜ್ ಆರ್ಮಿ ಪಾಲಾಗಿದ್ದ ಸಂದೀಪ್
28ರ ಹರೆಯದ ಸಂದೀಪ್ 2018ರಲ್ಲಿ ಐಪಿಎಲ್ ಹರಾಜಿನ ವೇಳೆ 3 ಕೋಟಿ ರೂ.ಗೆ ಆರೆಂಜ್ ಆರ್ಮಿ ಪಾಲಾಗಿದ್ದರು. ಆಗಿನಿಂದಲೂ ಸಂದೀಪ್ ಆರಂಭಿಕ ಓವರ್ ಎಸೆಯುತ್ತಿರುವ ಶರ್ಮಾ ತಂಡದ ಪ್ರಮುಖ ವಿಕೆಟ್ ಸರದಾರನಾಗಿ ಗುರುತಿಸಿಕೊಂಡಿದ್ದಾರೆ. ಎಸ್‌ಆರ್‌ಎಚ್‌ಗೆ ಸಂದೀಪ್ ಒಟ್ಟಿಗೆ 39 ವಿಕೆಟ್ ಪಡೆದಿದ್ದಾರೆ. ಐಪಿಎಲ್ ದ್ವಿತೀಯ ಆವೃತ್ತಿಯ ನಿಮಿತ್ತ ಸಂದೀಪ್ ಶೀಘ್ರ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಗೆ ಹಾರಲಿದ್ದಾರೆ. ಅಲ್ಲೇ ಎಚ್‌ಆರ್‌ಎಚ್ ತರಬೇತಿ ಆರಂಭಿಸಲಿದೆ. ಯುಎಇ ತಲುಪಿದ ನಂತರ ಆಟಗಾರರು ಆರು ದಿನಗಳ ಕ್ವಾರಂಟೈನ್ ಪಾಲಿಸಲಿದ್ದಾರೆ. ಸದ್ಯದ ಅಂಕಪಟ್ಟಿಯಲ್ಲಿ ಎಸ್‌ಶರ್‌ಎಚ್ ಕೊನೇ ಸ್ಥಾನದಲ್ಲಿದೆ. ಆಡಿರುವ ಏಳು ಪಂದ್ಯಗಳಲ್ಲಿ ಕೇವಲ 1 ಗೆಲುವು ದಾಖಲಿಸಿರುವ ಎಸ್‌ಆರ್‌ಎಚ್ ಹೀನಾಯ ಸ್ಥಿತಿಯಲ್ಲಿದೆ. ದ್ವಿತೀಯ ಹಂತದ ಐಪಿಎಲ್‌ನಲ್ಲಿ ಎಸ್‌ಆರ್‌ಎಚ್ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ.

ಟಿ20 ಕ್ರಿಕೆಟ್‌ನಲ್ಲಿ 159 ವಿಕೆಟ್ ದಾಖಲೆ
ಐಪಿಎಲ್ 2021ರ ಆರಂಭಿಕ ಹಂತದಲ್ಲಿ ಸಂದೀಪ್ ಮೂರು ಪಂದ್ಯಗಳಲ್ಲಿ ಕೇವಲ 1 ವಿಕೆಟ್ ಪಡೆದು ಪರದಾಡಿದ್ದರು. ಆದರೆ ದ್ವಿತೀಯ ಹಂತದ ವೇಳೆ ಸಂದೀಪ್ ಬಲಿಷ್ಠ ಕಮ್‌ಬ್ಯಾಕ್ ಮಾಡುವ ಸಾಧ್ಯತೆಯಿದೆ. 2015ರಲ್ಲಿ ಸಂದೀಪ್‌ಗೆ ಜಿಂಬಾಬ್ವೆ ವಿರುದ್ಧದ ಟಿ20 ವೇಳೆ ಭಾರತೀಯ ತಂಡಕ್ಕೆ ಕರೆ ನೀಡಲಾಗಿತ್ತು. ಈ ವೇಳೆ ಸಂದೀಪ್ 2 ಪಂದ್ಯಗಳಲ್ಲಿ 1 ವಿಕೆಟ್ ಪಡೆದಿದ್ದರು. ಇನ್ನು ಟಿ20 ಕ್ರಿಕೆಟ್‌ನಲ್ಲಿ ಸಂದೀಪ್ ಉತ್ತಮ ಬೌಲಿಂಗ್ ದಾಖಲೆ ಹೊಂದಿದ್ದಾರೆ. 143 ಟಿ20 ಪಂದ್ಯಗಳನ್ನಾಡಿರುವ ಸಂದೀಪ್ 159 ವಿಕೆಟ್ ಮುರಿದಿದ್ದಾರೆ. 2011/12ರ ಇಸವಿಯಲ್ಲಿ ದೇಶಿ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ಸಂದೀಪ್ 44 ಪ್ರಥಮದರ್ಜೆ ಕ್ರಿಕೆಟ್ ಮತ್ತು 49 ಲಿಸ್ಟ್ 'ಎ' ಕ್ರಿಕೆಟ್ ಪಂದ್ಯಗಳನ್ನಾಡಿದ್ದಾರೆ.

ಐಪಿಎಲ್ ದ್ವಿತೀಯ ಹಂತದ ಪಂದ್ಯಗಳು ಆರಂಭ
ಐಪಿಎಲ್ ಆರಂಭಿಕ ಹಂತದಲ್ಲಿ ಭಾರತದಲ್ಲಿ ಒಟ್ಟು 29 ಪಂದ್ಯಗಳು ನಡೆದಿದ್ದವು. ಆ ಬಳಿಕ ಐಪಿಎಲ್ ಫ್ರಾಂಚೈಸಿಗಳಲ್ಲಿ ಕೋವಿಡ್ ಪ್ರಕರಣಗಳು ಕಾಣಿಸಿಕೊಂಡಿದ್ದರಿಂದ ಟೂರ್ನಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಹಾಗೆ ನಿಲ್ಲಿದ ಪಂದ್ಯಗಳಲ್ಲಿ ಇನ್ನು 31 ಪಂದ್ಯಗಳು ಯುಎಇಯಲ್ಲಿ ನಡೆಯಲಿದೆ. ನಡೆಯಲಿರುವ 31 ಪಂದ್ಯಗಳಲ್ಲಿ 13 ಪಂದ್ಯಗಳು ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿವೆ. ಮೊದಲ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯಗಳು ಇದೇ ಸ್ಟೇಡಿಯಂನಲ್ಲಿ ನಡೆಯಲಿವೆ. ಶಾರ್ಜಾ ಸ್ಟೇಡಿಯಂನಲ್ಲಿ 10 ಪಂದ್ಯಗಳು ನಡೆಯಲಿವೆ. ಇದರಲ್ಲಿ ದ್ವಿತೀಯ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯ ಸೇರಿದೆ. ಐಪಿಎಲ್ ದ್ವಿತೀಯ ಹಂತದ ಐಪಿಎಲ್ ಪಂದ್ಯಗಳ ವೇಳೆ ಒಟ್ಟು 7 ಡಬಲ್ ಹೆಡ್ಡರ್ ಪಂದ್ಯಗಳು ನಡೆಯಲಿವೆ. ಸುಮಾರು 27 ದಿನಗಳ ಕಾಲ ದ್ವಿತೀಯ ಹಂತದ ಐಪಿಎಲ್ ನಡೆಯಲಿದೆ. ಅಂದ್ಹಾಗೆ ಐಪಿಎಲ್ ದ್ವಿತೀಯ ಹಂತದ ಉದ್ಘಾಟನಾ ಪಂದ್ಯದಲ್ಲಿ ಅಂದರೆ ಸೆಪ್ಟೆಂಬರ್ 19ಕ್ಕೆ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ.


Click it and Unblock the Notifications












