Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಸ್‌ಆರ್‌ಹೆಚ್‌ ಬೌಲರ್ ಟಿ. ನಟರಾಜನ್‌ಗೆ ತಂದೆಯಾದ ಸಂಭ್ರಮ

SRH Pacer T Natarajan And His Wife Blessed With A Baby

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಶುಕ್ರವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ಆರು ವಿಕೆಟ್‌ಗಳಿಂದ ಗೆಲುವು ಸಾಧಿಸಿ ಕ್ವಾಲಿಫೈಯರ್ ಪ್ರವೇಶಿಸಿತು. ಮತ್ತೊಂದೆಡೆ ಸೋತ ಆರ್‌ಸಿಬಿ ಈ ಬಾರಿಯು ಕಪ್ ಗೆಲ್ಲಲು ಸಾಧ್ಯವಾಗದೆ ನಿರಾಸೆಗೊಂಡಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಪರ ಏಕಾಂಗಿಯಾಗಿ ಹೋರಾಟ ನಡೆಸಿದ್ದು ಎಬಿ ಡಿವಿಲಿಯರ್ಸ್, ಅರ್ಧಶತಕ ಸಿಡಿಸಿ ತಂಡಕ್ಕೆ ಆಧಾರವಾಗಿದ್ದ ಎಬಿಡಿ ಕೊನೆಯ ಎರಡು ಓವರ್‌ ಇರುವಂತೆ ಎಸ್‌ಆರ್‌ಹೆಚ್‌ ಬೌಲರ್ ಟಿ. ನಟರಾಜನರ್ ಅದ್ಭುತ ಯಾರ್ಕರ್‌ಗೆ ಕ್ಲೀನ್ ಬೌಲ್ಡ್ ಆದ್ರು. ಆ ಮೂಲಕ ಆರ್‌ಸಿಬಿ ಸ್ಕೋರ್‌ ಅಂದುಕೊಂಡಿದ್ದಕ್ಕಿಂತ ಕಡಿಮೆಯಾಗಿ ಸೋಲನ್ನಪ್ಪಿಕೊಂಡಿತು.

ಆರ್‌ಸಿಬಿಯ ಪ್ರಮುಖ ವಿಕೆಟ್ ಪಡೆದ ಟಿ. ನಟರಾಜನ್‌ ಎಸ್‌ಆರ್‌ಹೆಚ್ ಗೆಲುವಿನ ಸಂಭ್ರಮದ ಜೊತೆಗೆ ಅವರ ಪತ್ನಿ ಶುಕ್ರವಾರ ಬೆಳಿಗ್ಗೆ ಮಗುವಿಗೆ ಜನ್ನ ನೀಡಿದ್ದು ಅವರ ಸಂತೋಷವನ್ನು ಇಮ್ಮಡಿಗೊಳಿಸಿದೆ.

ಪಂದ್ಯದ ನಂತರದ ಸಂದರ್ಶನದಲ್ಲಿ ಮಾತನಾಡುವಾಗ ಎಸ್‌ಆರ್‌ಹೆಚ್ ನಾಯಕ ಡೇವಿಡ್ ವಾರ್ನರ್ ಸ್ವತಃ ಈ ಸಂತೋಷದ ಸುದ್ದಿಯನ್ನು ಪ್ರಕಟಿಸಿದರು. ಚಾಲೆಂಜರ್ಸ್ ವಿರುದ್ಧ ಆರು ವಿಕೆಟ್‌ಗಳ ಅದ್ಭುತ ಜಯಗಳಿಸಿದ ನಂತರ ಅವರು ನಿರೂಪಕರೊಂದಿಗೆ ಮಾತನಾಡುತ್ತಾ "ಟಿ ನಟರಾಜನ್ ಮತ್ತು ಅವರ ಪತ್ನಿಗೆ ಅಭಿನಂದನೆಗಳು, ಅವರು ಇಂದು ಬೆಳಿಗ್ಗೆ ಮಗುವಿಗೆ ಜನ್ಮ ನೀಡಿದ್ದಾರೆ'' ಎಂದು ವಾರ್ನರ್ ಸಂತೋಷ ವ್ಯಕ್ತಪಡಿಸಿದರು.

ಆರ್‌ಸಿಬಿ ವಿರುದ್ಧ ಅಷ್ಟೇ ಅಲ್ಲದೆ ಟಿ. ನಟರಾಜನ್ ಈ ಸೀಸನ್‌ನಲ್ಲಿ ತಮ್ಮ ಯಾರ್ಕರ್‌ಗಳ ಸುತ್ತ ಉತ್ತಮ ವೇರಿಯೇಷನ್‌ನೊಂದಿಗೆ ಬೌಲಿಂಗ್ ಮಾಡಿ ತಂಡಕ್ಕೆ ಆಧಾರವಾಗಿದ್ದಾರೆ. ಅದರಲ್ಲೂ ಆರ್‌ಸಿಬಿ ವಿರುದ್ಧ ಮಿಸ್ಟರ್ 360ಯನ್ನೇ ಬೌಲ್ಡ್‌ ಮಾಡುವ ಮೂಲಕ ಬೆರಗು ಮೂಡಿಸಿದ್ರು.

Story first published: Saturday, November 7, 2020, 15:13 [IST]
Other articles published on Nov 7, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+