SRH vs CSK: ಸನ್‌ರೈಸರ್ಸ್‌ಗೆ 10 ರನ್ ಜಯ: 4ನೇ ಸ್ಥಾನಕ್ಕೆ ಬಡ್ತಿ
ಹೈದರಾಬಾದ್: ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ (59 ರನ್) ಹಾಗೂ ವೇಗಿ ಇಶಾನ್ ಮಲಿಂಗ್ (29 ರನ್‌ಗೆ 3 ವಿಕೆಟ್) ಇವರುಗಳ ಭರ್ಜರಿ ಆಟದ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) 10 ರನ್‌ಗಳಿಂದ 19ನೇ ಆವೃತ್ತಿಯ ಐಪಿಎಲ್‌ನ 27ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮಣಿಸಿತು. ಅಲ್ಲದೆ ಸನ್ ತಂಡ ಅಂಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕ ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ಜೋಡಿ (23) ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೊಡಿ 5.5 ಓವರ್‌ಗಳಲ್ಲಿ 75 ರನ್ ಸೇರಿಸಿತು. ಇಶಾನ್ ಕಿಶನ್ ಜವಾಬ್ದಾರಿ ಮರೆತರು. ಆರಂಭಿಕ ಅಭಿಷೇಕ್ ಶರ್ಮಾ 22 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ ಸಹಾಯದಿಂದ 59 ರನ್ ಬಾರಿಸಿದರು.

ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಕ್ ಕ್ಲಾಸೆನ್ 151ರ ಸ್ಟ್ರೈಕ್ ರೇಟ್‌ನಲ್ಲಿ 59 ರನ್ ಸಿಡಿಸಿದರು. ಇವರು 6 ಬೌಂಡರಿ, 2 ಸಿಕ್ಸರ್ ಬಾರಿಸಿದರು. ಉಳಿದಂತೆ ನಿತೀಶ್ ಕುಮಾರ್ ರೆಡ್ಡಿ 12, ಸಲಿಲ್ ಆರೋರಾ 13, ಶಿವಂಗ್ ಕುಮಾರ್ 12 ರನ್ ಬಾರಿಸಿದರು. ಅಂತಿಮವಾಗಿ ಎಸ್‌ಆರ್‌ಎಚ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 194 ರನ್ ಸಿಡಿಸಿತು.
ಕಳಪೆ ಆರಂಭ
ಗುರಿಯನ್ನು ಹಿಂಬಾಲಿಸಿದ ಚೆನ್ನೈ ತಂಡದ ಆರಂಭ ಕಳಪೆಯಾಗಿತ್ತು. ಸಂಜು ಸ್ಯಾಮ್ಸನ್ 7 ರನ್ ಬಾರಿಸಿ ಔಟ್ ಆದರು. ತಂಡದ ಮೊತ್ತ 15 ಆಗಿದ್ದಾಗ ಚೆನ್ನೈ ಮೊದಲ ವಿಕೆಟ್ ಕಳೆದುಕೊಂಡಿತು. ಎರಡನೇ ವಿಕೆಟ್‌ಗೆ ಆಯುಷ್ ಮಾತ್ರೆ ಹಾಗೂ ನಾಯಕ ರುತುರಾಜ್ ಗಾಯಕ್ವಾಡ್ ಜೊಡಿ 21 ಎಸೆತಗಳಲ್ಲಿ 51 ರನ್ ಸೇರಿಸಿತು. ಈ ಹಂತದಲ್ಲಿ 30 ರನ್ ಬಾರಿಸಿದ್ದ ಆಯುಷ್ ಮಾತ್ರೆ ನಿತೀಶ್ ಕುಮಾರ್ ರೆಡ್ಡಿ ಅವರಿಗೆ ವಿಕೆಟ್ ಒಪ್ಪಿಸಿದರು.

ಮಲಿಂಗ್ ಅಬ್ಬರ
ನಾಯಕ ರುತುರಾಜ್ ಗಾಯಕ್ವಾಡ್ (19) ಇಶಾನ್ ಮಲಿಂಗ್ ಅವರಿಗೆ ವಿಕೆಟ್ ಒಪ್ಪಿಸಿದರು. ನಾಲ್ಕನೇ ವಿಕೆಟ್‌ಗೆ ಮ್ಯಾಥ್ಯೂ ಶಾರ್ಟ್ ಹಾಗೂ ಸರ್ಫರಾಜ್ ಖಾನ್ ಜೋಡಿ 4ನೇ ವಿಕೆಟ್‌ಗೆ 46 ರನ್ ಸೇರಿಸಿತು. ಸರ್ಫರಾಜ್ ಖಾನ್ 25 ರನ್ ಬಾರಿಸಿ ಔಟ್ ಆದರು. ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ಮ್ಯಾಥ್ಯೂ ಶಾರ್ಟ್ 3 ಬೌಂಡರಿ ಸಹಾಯದಿಂದ 34 ರನ್ ಸಿಡಿಸಿದರು. ಆಲ್‌ರೌಂಡರ್ ಶಿವಂ ದುಬೆ 21, ಜೇಮಿ ಓವರ್‌ಟನ್ 16 ರನ್ ಕಲೆ ಹಾಕಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಅಂತಿಮವಾಗಿ ಸಿಎಸ್‌ಕೆ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 184 ರನ್ ಸೇರಿಸಿ ಸೋಲು ಕಂಡಿತು. ಹೈದರಾಬಾದ್ ತಂಡದ ಪರ ಇಶಾನ್ ಮಲಿಂಗ್ 3 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications