Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: ಈ ಕಾರಣದಿಂದ SRH vs CSK ಹೈ-ವೋಲ್ಟೇಜ್ ಪಂದ್ಯ ನಡೆಯೋದು ಅನುಮಾನ!

ಶುಕ್ರವಾರ, ಏಪ್ರಿಲ್ 5ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 18ನೇ ರೋಚಕ ಪಂದ್ಯದಲ್ಲಿ ಆತಿಥೇಯ ಸನ್ ರೈಸರ್ಸ್ ಹೈದರಾಬಾದ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

ಆದರೆ, ಈ ಹೈ-ವೋಲ್ಟೇಜ್ ಪಂದ್ಯಕ್ಕೂ ಮುನ್ನ ದೊಡ್ಡ ಅಡೆತಡೆ ಎದುರಾಗಿದೆ. ವರದಿಗಳ ಪ್ರಕಾರ, ಹೈದರಾಬಾದ್ ಕ್ರಿಕೆಟ್ ಸಂಸ್ಥೆಯು (ಹೆಚ್‌ಸಿಎ) ಡಿಸ್ಕಾಂಗೆ ಕೋಟ್ಯಂತರ ರೂಪಾಯಿ ವಿದ್ಯುತ್ ಬಿಲ್ ಪಾವತಿಸಲು ವಿಫಲವಾಗಿದೆ. ಇದರಿಂದ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

SRH vs CSK IPl 2024 Match May not be Held Because of These Reasons Know more

1.6 ಕೋಟಿ ರೂಪಾಯಿ ಮೌಲ್ಯದ ವಿದ್ಯುತ್ ಬಾಕಿಯನ್ನು ಪಾವತಿಸಲು ಹೆಚ್‌ಸಿಎ ವಿಫಲವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಬಾಕಿಯಿರುವ ಈ ಮೊತ್ತವು ಕಳೆದ ಏಳು ವರ್ಷಗಳಿಂದ ಪಾವತಿಯಾಗಿಲ್ಲ ಎಂದು ತಿಳಿದುಬಂದಿದೆ.

2024ರ ಫೆಬ್ರವರಿಯಲ್ಲಿ ಹೈದರಾಬಾದ್ ಕ್ರಿಕೆಟ್ ಸಂಸ್ಥೆಗೆ ಪ್ರಾಥಮಿಕ ಸೂಚನೆಯನ್ನು ನೀಡಲಾಯಿತು ಮತ್ತು ಸಂಸ್ಥೆಯು ಸೂಚನೆಯನ್ನು ಅನುಸರಿಸಲು ವಿಫಲವಾಗಿದೆ. ಇದಕ್ಕೆ ಪ್ರತಿಯಾಗಿ ಇಂಧನ ಇಲಾಖೆಯು ಪ್ರಮುಖ ಐಪಿಎಲ್ ಪಂದ್ಯಾವಳಿಯ ಸಂದರ್ಭದಲ್ಲೇ ಕ್ರೀಡಾಂಗಣದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ.

"ಸಿಎಸ್‌ಕೆ ಮತ್ತು ಎಸ್‌ಆರ್‌ಎಚ್ ಐಪಿಎಲ್ ಪಂದ್ಯಕ್ಕೂ ಮುನ್ನ ಹೈದರಾಬಾದ್ ಕ್ರಿಕೆಟ್ ಸ್ಟೇಡಿಯಂನಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಹೆಚ್‌ಸಿಎ 7 ವರ್ಷಗಳಿಂದ ಡಿಸ್ಕಾಂಗೆ 1.6 ಕೋಟಿ ರೂಪಾಯಿ ಬಿಲ್ ಪಾವತಿಸಿಲ್ಲ. ಇದಕ್ಕೂ ಮುನ್ನ ಡಿಸ್ಕಾಂ ತಮ್ಮ ಮನವಿಯನ್ನು ಪರಿಗಣಿಸುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಫೆಬ್ರವರಿ 2024ರಲ್ಲಿ ಮೊದಲ ನೋಟೀಸ್ ನೀಡಲಾಯಿತು".

SRH vs CSK IPl 2024 Match May not be Held Because of These Reasons Know more

"ಆದರೆ, ನಿರಂತರ ಸೂಚನೆಗಳ ಹೊರತಾಗಿಯೂ ಹೆಚ್‌ಸಿಎ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ ಇಂಧನ ಇಲಾಖೆಯು ಈಗಾಗಲೇ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಿದೆ," ಎಂದು ನ್ಯೂಸ್‌ಮೀಟರ್ ವರದಿ ಮಾಡಿದೆ.

ಐಪಿಎಲ್ 2024ರಲ್ಲಿ ಬಲಿಷ್ಠವಾಗಿ ಕಾಣುತ್ತಿರುವ ಸನ್‌ರೈಸರ್ಸ್ ಹೈದರಾಬಾದ್

ಸನ್‌ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಕಳೆದ ಡಿಸೆಂಬರ್‌ನಲ್ಲಿ ನಡೆದ ಐಪಿಎಲ್ ಮಿನಿ ಹರಾಜಿನ ನಂತರ ಸೃಷ್ಟಿಸಿದ ಪ್ರಚೋದನೆಗೆ ತಕ್ಕಂತೆ ಆಡುತ್ತಿದೆ. ಪವರ್-ಹಿಟ್ಟರ್ ಆಟಗಾರರಿಂದ ಕಾಗದದ ಮೇಲೆ ಅಸಾಧಾರಣ ತಂಡವಾಗಿ ಕಾಣುತ್ತಿದೆ ಎಂದು ಹಲವರು ನಿರೀಕ್ಷಿಸಿದ್ದರು. ಅದೇ ರೀತಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಮತೋಲಿತ ತಂಡವನ್ನು ಹೊಂದಿದೆ.

ಅಲ್ಲದೆ, ಪ್ಯಾಟ್ ಕಮ್ಮಿನ್ಸ್ ಅವರನ್ನು 20.5 ಕೋಟಿ ರೂಪಾಯಿಗೆ ಖರೀದಿಸಿದರು. ಇದು ಐಪಿಎಲ್ ಇತಿಹಾಸದಲ್ಲಯೇ ಎರಡನೇ ಅತ್ಯಧಿಕ ಮೊತ್ತವಾಗಿದೆ.

ಇನ್ನು ಪಂದ್ಯಾವಳಿ ಆರಂಭಕ್ಕೂ ಮುನ್ನ ಏಡೆನ್ ಮಾರ್ಕ್ರಾಮ್ ಬದಲಾಗಿ ಪ್ಯಾಟ್ ಕಮ್ಮಿನ್ಸ್ ಅವರನ್ನು ತಂಡದ ನಾಯಕನನ್ನಾಗಿ ಸನ್‌ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ನೇಮಿಸಿದೆ. ಅದೃಷ್ಟವಂತ ಆಸ್ಟ್ರೇಲಿಯಾ ನಾಯಕನ ಮೂಲಕ ಐಪಿಎಲ್ ಟ್ರೋಫಿ ಎತ್ತಲು ತಂಡದ ಮ್ಯಾನೇಜ್‌ಮೆಂಟ್ ಗುರಿ ಹೊಂದಿದೆ.

ಎಸ್‌ಆರ್‌ಎಚ್ ತಂಡ ತಮ್ಮ ಆರಂಭಿಕ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋಲಿನೊಂದಿಗೆ ಐಪಿಎಲ್ 2024ರ ಅಭಿಯಾನ ಆರಂಭಿಸಿತು. ಆದರೆ, ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಐಪಿಎಲ್‌ನಲ್ಲಿ ಅತ್ಯಧಿಕ ಮೊತ್ತ ದಾಖಲಿಸಿ ಗೆಲುವು ಸಾಧಿಸುವ ಮೂಲಕ ಇತಿಹಾಸ ರಚಿಸಿದೆ.

ಸನ್‌ ರೈಸರ್ಸ್ ಹೈದರಾಬಾದ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅತ್ಯಧಿಕ ಮೊತ್ತದ ಸುದೀರ್ಘ ದಾಖಲೆಯನ್ನು ಅಳಿಸಿ ಹಾಕಿತು. ಮುಂಬೈ ಇಂಡಿಯನ್ಸ್ ವಿರುದ್ಧ 277 ರನ್ ಕಲೆಹಾಕಿದರು ಮತ್ತು 31 ರನ್‌ಗಳಿಂದ ಪಂದ್ಯವನ್ನು ಗೆದ್ದರು. ಆದರೆ ನಂತರದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಸೋಲು ಅನುಭವಿಸಿದೆ.

ಐಪಿಎಲ್ 2024ರಲ್ಲಿ ಸನ್‌ ರೈಸರ್ಸ್ ಹೈದರಾಬಾದ್ ತಂಡ ಆಡಿದ ಮೂರು ಪಂದ್ಯಗಳಲ್ಲಿ ಎರಡು ಸೋಲು ಮತ್ತು ಒಂದು ಗೆಲುವಿನೊಂದಿಗೆ 2 ಅಂಕಗಳನ್ನು ಹೊಂದಿದ್ದು, ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

Story first published: Friday, April 5, 2024, 11:05 [IST]
Other articles published on Apr 5, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+