Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

SRH vs KKR: ಸೂಪರ್ ಮ್ಯಾನ್ ಕ್ಯಾಚ್ ಪಡೆದ ಐಡೆನ್ ಮಾರ್ಕ್ರಮ್: ವಿಡಿಯೋ

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಗುರುವಾರ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿದೆ. ಅಂಕಪಟ್ಟಿಯಲ್ಲಿ ಕೆಳ ಸ್ಥಾನದಲ್ಲಿರುವ ಎರಡು ತಂಡಗಳು ತಮ್ಮ ಸ್ಥಾನವನ್ನು ಉತ್ತಮ ಪಡಿಸಿಕೊಳ್ಳಲು ತೀವ್ರ ಪೈಪೋಟಿ ನಡೆಸಿದೆ. ಈ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಮಡದ ನಾಯಕ ಐಡೆನ್ ಮಾರ್ಕ್ರಮ್ ಫೀಲ್ಡಿಂಗ್‌ನಲ್ಲಿ ಮಿಂಚಿದ್ದು ಅದ್ಭುತ ಕ್ಯಾಚ್ ಪಡೆದು ಗಮನಸೆಳೆದಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಮೊದಲಿಗೆ ಬ್ಯಾಟಿಂಗ್ ನಡೆಸಿತು. ಆದರೆ ಕೆಕೆಆರ್ ತಂಡ ಉತ್ತಮ ಆರಂಭವನ್ನು ಪಡೆಯಲು ವಿಫಲವಾಯಿತು. 35 ರನ್‌ಗಳಿಸಿದ ಸಂದರ್ಭದಲ್ಲಿ ಕೆಕೆಆರ್ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತ್ತು. ನಂತರ ನಾಯಕ ನಿತೀಶ್ ರಾಣಾ ಹಾಗೂ ರಿಂಕು ಸಿಂಗ್ ಅದ್ಭುತ ಜೊತೆಯಾಟ ನೀಡುವ ಮೂಲಕ ಕೆಕೆಆರ್‌ಗೆ ಚೇತರಿಕೆ ನೀಡಿದರು.

SRH vs KKR: Aiden Markram get superman catch to dismisses KKR skipper Nitish Rana: video
Photo Credit: twitter

ಈ ಸಂದರ್ಭದಲ್ಲಿ ನಾಯಕ ನಿತೀಶ್ ರಾಣಾ 31 ಎಸೆತಗಳಲ್ಲಿ 42 ರನ್ ಬಾರಿಸಿ ದೊಡ್ಡ ಮೊತ್ತದತ್ತ ಹೆಜ್ಜೆಯಿಟ್ಟಿದ್ದರು. ಆದರೆ ನಾಯಕ ಐಡೆನ್ ಮಾರ್ಕ್ರಮ್ ಬೌಲಿಂಗ್‌ನಲ್ಲಿ ಅವರಿಗೇ ಕ್ಯಾಚ್ ನೀಡಿ ನಿತೀಶ್ ರಾಣಾ ನಿರ್ಗಮಿಸಿದರು. ಮಾರ್ಕ್ರಮ್ ಎಸೆದ ಚೆಂಡನ್ನು ಸಿಕ್ಸರ್‌ಗೆ ಅಟ್ಟುವ ಸಂದರ್ಭದಲ್ಲಿ ರಾಣಾ ಎಡವಿದರು. ಚೆಂಡು ಗಾಳಿಯಲ್ಲಿ ಹಾರಿ 30 ಯಾರ್ಡ್ಸ್ ದಾಡಲು ಕೂಡ ವಿಫಲವಾಯಿತು. ಈ ಸಂದರ್ಭದಲ್ಲಿ ಓಡಿ ಬಂದ ಬೌಲಿಂಗ್ ನಡೆಸುತ್ತಿದ್ದ ಐಡೆನ್ ಮಾರ್ಕ್ರಮ್ ಹಾರಿ ಕ್ಯಾಚ್ ಪಡೆಯುವಲ್ಲಿ ಸಫಲವಾದರು. ಈ ಮೂಲಕ ಕೆಕೆಆರ್ ಜೊತೆಯಾಟ ಭಗ್ನಗೊಳಿಸುವಲ್ಲಿ ಯಶಸ್ವಿಯಾದರು.

ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ 9 ವಿಕೆಟ್ ಕಳೆದುಕೊಂಡು 171 ರನ್‌ಗಳಿಸಿತು. ನಾಯಕ ನಿತೀಶ್ ರಾಣಾ 42 ರನ್‌ಗಳಿಸಿದರೆ ರಿಂಕು ಸಿಂಗ್ 46 ರನ್ ಬಾರಿಸಿದರು. ಆಂಡ್ರೆ ರಸೆಲ್ ಬ್ಯಾಟ್‌ನಿಂದ 24 ರನ್‌ಗಳು ಹರಿದು ಬಂತು. ಹೀಗಾಗಿ ಕೆಕೆಆರ್ ತಂಡ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಸವಾಲಿನ ಗುರಿ ನೀಡುವಲ್ಲಿ ಯಶಸ್ವಿಯಾಯಿತು.

ಸನ್‌ರೈಸರ್ಸ್ ಹೈದರಾಬಾದ್: ಮಯಾಂಕ್ ಅಗರ್ವಾಲ್, ಅಭಿಷೇಕ್ ಶರ್ಮಾ, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಹ್ಯಾರಿ ಬ್ರೂಕ್, ಅಬ್ದುಲ್ ಸಮದ್, ಮಾರ್ಕೊ ಜಾನ್ಸೆನ್, ಮಯಾಂಕ್ ಮಾರ್ಕಾಂಡೆ, ಭುವನೇಶ್ವರ್ ಕುಮಾರ್, ಕಾರ್ತಿಕ್ ತ್ಯಾಗಿ, ಟಿ ನಟರಾಜನ್
ಬೆಂಚ್: ರಾಹುಲ್ ತ್ರಿಪಾಠಿ, ವಿವ್ರಾಂತ್ ಶರ್ಮಾ, ಗ್ಲೆನ್ ಫಿಲಿಪ್ಸ್, ನಿತೀಶ್ ರೆಡ್ಡಿ, ಸನ್ವಿರ್ ಸಿಂಗ್, ಮಯಾಂಕ್ ಡಾಗರ್, ಸಮರ್ಥ ವ್ಯಾಸ್, ಅನ್ಮೋಲ್ಪ್ರೀತ್ ಸಿಂಗ್, ಆದಿಲ್ ರಶೀದ್, ಉಪೇಂದ್ರ ಯಾದವ್, ಫಜಲ್ಹಕ್ ಫಾರೂಕಿ, ಅಕೇಲ್ ಹೊಸೈನ್, ಉಮ್ರಾನ್ ಮಲಿಕ್

ಕೊಲ್ಕತ್ತಾ ನೈಟ್ ರೈಡರ್ಸ್: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಜೇಸನ್ ರಾಯ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ಆಂಡ್ರೆ ರಸೆಲ್, ರಿಂಕು ಸಿಂಗ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ
ಬೆಂಚ್: ಸುಯಶ್ ಶರ್ಮಾ, ಅನುಕೂಲ್ ರಾಯ್, ಎನ್ ಜಗದೀಸನ್, ಲಾಕಿ ಫರ್ಗುಸನ್, ಕುಲ್ವಂತ್ ಖೆಜ್ರೋಲಿಯಾ, ಮಂದೀಪ್ ಸಿಂಗ್, ಟಿಮ್ ಸೌಥಿ, ಉಮೇಶ್ ಯಾದವ್, ಆರ್ಯ ದೇಸಾಯಿ, ಡೇವಿಡ್ ವೈಸ್

Story first published: Thursday, May 4, 2023, 23:47 [IST]
Other articles published on May 4, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+