IND vs SL: ಭಾರತ ವಿರುದ್ಧದ ಟಿ20 ಸರಣಿಗೆ ಮುನ್ನ ಶ್ರೀಲಂಕಾ ತಂಡಕ್ಕೆ ಬಿಗ್ ಶಾಕ್; ಸ್ಟಾರ್ ವೇಗದ ಬೌಲರ್ ಔಟ್!
ಜುಲೈ 24 ಬುಧವಾರ, ಭಾರತ ವಿರುದ್ಧದ ಟಿ20 ಸರಣಿಗೆ ಮುನ್ನ ಶ್ರೀಲಂಕಾ ತಂಡಕ್ಕೆ ಭಾರೀ ಹಿನ್ನೆಡೆ ಆಗಿದೆ. ಶ್ರೀಲಂಕಾದ ಸ್ಟಾರ್ ವೇಗದ ಬೌಲರ್ ದುಷ್ಮಂತ ಚಮೀರ ಗಾಯದ ಸಮಸ್ಯೆಯಿಂದಾಗಿ ಭಾರತ ವಿರುದ್ಧದ ಟಿ20 ಮತ್ತು ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ.
ಶ್ರೀಲಂಕಾದ ಹಲವಾರು ಮಾಧ್ಯಮಗಳ ವರದಿಗಳ ಪ್ರಕಾರ, ಚಮೀರಾ ಗಾಯದ ಕಾರಣದಿಂದ ಹೊರಗುಳಿದಿದ್ದು, ಶ್ರೀಲಂಕಾ ಕ್ರಿಕೆಟ್ ಶೀಘ್ರದಲ್ಲೇ ಅವರ ಸ್ಥಾನಕ್ಕೆ ಹೊಸ ಆಟಗಾರನನ್ನು ಘೋಷಿಸಲಿದೆ.

ಶ್ರೀಲಂಕಾದ ಪ್ರಸಿದ್ಧ ಪತ್ರಕರ್ತ ರೆಕ್ಸ್ ಕ್ಲೆಮೆಂಟೈನ್ 'ಎಕ್ಸ್' ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, 'ದುಷ್ಮಂತ ಚಮೀರಾ ಗಾಯದ ಕಾರಣ ಭಾರತ ಸರಣಿಯಿಂದ ಹೊರಗುಳಿದಿದ್ದಾರೆ. ಶೀಘ್ರದಲ್ಲೇ ಅವರ ಸ್ಥಾನಕ್ಕೆ ಹೊಸ ಆಟಗಾರನನ್ನು ಘೋಷಿಸಲಾಗುವುದು ಎಂದು ಬರೆದುಕೊಂಡಿದ್ದಾರೆ.
ಭಾರತದ ವಿರುದ್ಧದ ಸರಣಿಗೆ ಗಾಯಗೊಂಡಿರುವ ಚಮೀರಾ ಬದಲಿಗೆ ಅಸಿತಾ ಫರ್ನಾಂಡೊ ಅವರನ್ನು ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಲಂಕಾ ಪ್ರೀಮಿಯರ್ ಲೀಗ್‌ನ ಫೈನಲ್‌ನಲ್ಲಿ ಅಸಿತಾ ಅದ್ಭುತವಾಗಿ ಬೌಲಿಂಗ್ ಮಾಡಿದ್ದರು.
ಜಾಫ್ನಾ ಕಿಂಗ್ಸ್ ಪರ ಅಸಿತಾ ಗಾಲೆ ಮಾರ್ವೆಲ್ಸ್ ಅನ್ನು ಸೋಲಿಸಲು ಮೂರು ವಿಕೆಟ್‌ಗಳನ್ನು ಪಡೆದರು. ಈಗ ಚಮೀರಾ ಬದಲಿಗೆ ಅಸಿತಾ ಅವರನ್ನು ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಸೇರಿಸಿಕೊಳ್ಳುವುದರಿಂದ ಭಾರತಕ್ಕೆ ಪ್ರಬಲ ಬೌಲರ್ ಎದುರಾಗಲಿದ್ದಾರೆ.
ಭಾರತ ವಿರುದ್ಧದ ಟಿ20 ಸರಣಿಗೆ ಶ್ರೀಲಂಕಾ ತಂಡ: ಚರಿತ್ ಅಸಲಂಕ (ನಾಯಕ), ಪತುಮ್ ನಿಸಂಕ, ಕುಸಾಲ್ ಪೆರೆರಾ, ಅವಿಶ್ಕಾ ಫರ್ನಾಂಡೊ, ಕುಸಾಲ್ ಮೆಂಡಿಸ್, ದಿನೇಶ್ ಚಾಂಡಿಮಾಲ್, ಕಮಿಂದು ಮೆಂಡಿಸ್, ದಸುನ್ ಶನಕ, ವನಿಂದು ಹಸರಂಗ, ದುನಿತ್ ವೆಲ್ಲಲಗೆ, ಮಹೀಶ ತೀಕ್ಷಣ, ಚಮಿಂದು ವಿಕ್ರಮಸಿಂಘೆ, ಮತೀಶ ಪತಿರಾನ, ನುವಾನ್ ತುಷಾರ, ಬಿನುರಾ ಫರ್ನಾಂಡೊ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications