ವೆಸ್ಟ್ ಇಂಡೀಸ್ ವಿರುದ್ಧದ ಟಿ20ಐ ಸರಣಿಗೆ 15 ಜನರ ಶ್ರೀಲಂಕಾ ತಂಡ ಪ್ರಕಟ

ಕೊಲಂಬೋ, ಫೆಬ್ರವರಿ 28: ವೆಸ್ಟ್ ಇಂಡೀಸ್ ವಿರುದ್ಧದ 2 ಪಂದ್ಯಗಳ ಟಿ20ಐ ಸರಣಿಗಾಗಿ ಶ್ರೀಲಂಕಾ ಕ್ರಿಕೆಟ್ ತಂಡ ಪ್ರಕಟಗೊಂಡಿದೆ. ಆಲ್ ರೌಂಡರ್ ಆಟಗಾರ ತಿಸರ ಪೆರೆರಾ 15 ಜನರ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಬಲಗೈ ಮಧ್ಯಮ ವೇಗಿ ನುವಾನ್ ಪ್ರದೀಪ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಸದ್ಯ ವೆಸ್ಟ್ ಇಂಡೀಸ್ ತಂಡಕ್ಕೆ ಆತಿಥ್ಯ ವಹಿಸಿರುವ ಶ್ರೀಲಂಕಾ, ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡುತ್ತಿದೆ. ಆರಂಭಿಕ ಎರಡೂ ಪಂದ್ಯಗಳನ್ನು ಗೆದ್ದಿರುವ ಶ್ರೀಲಂಕಾ, ಸರಣಿ ವಶವಾಗಿಸಿಕೊಂಡಿದೆ. ಅಂತಿಮ ಪಂದ್ಯ ಮಾರ್ಚ್ 1ರ ಭಾನುವಾರ ನಡೆಯಲಿದೆ.
ಲಸಿತ್ ಮಾಲಿಂಗ ನಾಯಕತ್ವದಲ್ಲಿರುವ ಶ್ರೀಲಂಕಾ ತಂಡ, ಮಾರ್ಚ್ 4ರಿಂದ ಟಿ20ಐ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಆರಂಭಿಕ ಪಂದ್ಯ ಮಾರ್ಚ್ 4ಕ್ಕೆ ನಡೆದರೆ, ದ್ವಿತೀಯ ಪಂದ್ಯ ಮಾರ್ಚ್ 6ಕ್ಕೆ ನಡೆಯಲಿದೆ. ಪಂದ್ಯಗಳು ಭಾರತೀಯ ಕಾಲಮಾನ 7 pmಗೆ ಆರಂಭಗೊಳ್ಳಲಿವೆ.
ವೆಸ್ಟ್ ಇಂಡೀಸ್ ತಂಡ: ಲಸಿತ್ ಮಾಲಿಂಗ (ನಾಯಕ), ಅವಿಷ್ಕಾ ಫೆರ್ನಾಂಡೊ, ಕುಸಾಲ್ ಪೆರೆರಾ, ಶೆಹನ್ ಜಯಸೂರ್ಯ, ನಿರೋಷನ್ ಡಿಕ್ವೆಲ್ಲಾ, ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ಥಿಸರಾ ಪೆರೆರಾ, ದಾಸುನ್ ಶಾನಕಾ, ವನಿಂದು ಹಸರಂಗ, ಲಕ್ಷನ್ ಸಂದಕಡೆ, ಇಸುರು ಉದಾನ, ನುವಾನ್ ಪ್ರದೀಪ್, ಲಹಿರು ಕುಮಾರ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications