1996ರ ವಿಶ್ವಕಪ್ ಚಾಂಪಿಯನ್ ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಐತಿಹಾಸಿಕ ಹಿನ್ನಡೆಯಾಗಿದೆ. ಭಾರತದಲ್ಲಿ ನಡೆಯುತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡದ ನೀರಸ ಪ್ರದರ್ಶನವು, ಪಾಕಿಸ್ತಾನದಲ್ಲಿ ನಡೆಯಲಿರುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬೀಳಲು ಕಾರಣವಾಗಿದೆ.
ಶ್ರೀಲಂಕಾ ಕ್ರಿಕೆಟ್ ಮಂಡಳಿಯಲ್ಲಿ ಸರ್ಕಾರದ ಹಸ್ತಕ್ಷೇಪ ಕುರಿತು ಅಸಮಾಧಾನಗೊಂಡಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಶ್ರೀಲಂಕಾ ತಂಡದ ಸದಸ್ಯತ್ವ ರದ್ದುಗೊಳಿಸಿದ ಬಳಿಕ ಇದೀಗ ಮತ್ತೊಂದು ಅಘಾತ ಎದುರಾಗಿದೆ. ಒಂದು ಕಾಲದಲ್ಲಿ ಉತ್ತುಂಗದಲ್ಲಿ ತೇಲಾಡುತ್ತಿದ್ದ ಶ್ರೀಲಂಕಾ ಕ್ರಿಕೆಟ್, ಇಂದು ಅಧೋಗತಿಗೆ ತಲುಪಿದೆ.

ಆಡಿದ ಒಂಬತ್ತು ಪಂದ್ಯಗಳಲ್ಲಿ ಕೇವಲ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ವಿಶ್ವಕಪ್ ಗ್ರೂಪ್ ಹಂತದಲ್ಲಿ ಒಂಬತ್ತನೇ ಸ್ಥಾನ ಪಡೆಯುವ ಮೂಲಕ ಶ್ರೀಲಂಕಾ ತಂಡದ ವಿಶ್ವಕಪ್ ಗೆಲ್ಲುವ ನಿರೀಕ್ಷೆ ಹುಸಿಯಾಯಿತು.
ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ವಯಂಚಾಲಿತ ಅರ್ಹತೆಗಾಗಿ ನಿರ್ಣಾಯಕವಾಗಿದ್ದ ಅಗ್ರ ಎಂಟು ತಂಡಗಳಲ್ಲಿ ಸ್ಥಾನ ಪಡೆಯಲು ವಿಫಲವಾದ ಬಳಿಕ ಶ್ರೀಲಂಕಾ ಕ್ರಿಕೆಟ್ ಪರಂಪರೆಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ.
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯು ಬಲಿಷ್ಠ ಕ್ರಿಕೆಟ್ ತಂಡಗಳ ಘರ್ಷಣೆಗೆ ಸಾಕ್ಷಿಯಾಗಲಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಅವರ ಪ್ರಭಾವಶಾಲಿ ಪ್ರದರ್ಶನದ ಆಧಾರದ ಮೇಲೆ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಂಡಿವೆ.

ಅತ್ಯಂತ ಕೆಟ್ಟ ತಿರುವಿನಲ್ಲಿ ಶ್ರೀಲಂಕಾ ತಮ್ಮ ಮೊದಲ ಐಸಿಸಿ ಪಂದ್ಯಾವಳಿಯನ್ನು ಕಳೆದುಕೊಳ್ಳಲಿದೆ. ಇದು ಭವ್ಯ ಕ್ರಿಕೆಟ್ ಇತಿಹಾಸ ಹೊಂದಿರುವ ಶ್ರೀಲಂಕಾ ತಂಡಕ್ಕೆ ಅತ್ಯಂತ ದುಃಖದ ಅಧ್ಯಾಯ ಸೇರಿಸುತ್ತದೆ.
2023ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಅಗ್ರ-ಎಂಟು ಸ್ಥಾನವನ್ನು ಪಡೆಯಲು ವಿಫಲವಾದ ಕಾರಣ, ಶ್ರೀಲಂಕಾ ತಂಡವನ್ನು ಹೊರಗಿಡಲು ಕಾರಣವಾಯಿತು, ಅವರ ಅಭಿಮಾನಿಗಳು ನಿರಾಶೆಗೊಂಡರು.
ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ತಂಡಗಳು 7 ಮತ್ತು 8ನೇ ಸ್ಥಾನ ಪಡೆಯಲು ಹೋರಾಡಿ ಮುಂಚೂಣಿಯಾಗಿ ಹೊರಹೊಮ್ಮಿದವು. ನೆಟ್ ರನ್ ರೇಟ್‌ನಲ್ಲಿ ಶ್ರೀಲಂಕಾ ತಂಡಕ್ಕಿಂತ ಮೇಲಿನ ಸ್ಥಾನಗಳನ್ನು ಪಡೆದುಕೊಂಡವು.
ಆಸ್ಟ್ರೇಲಿಯಾ ವಿರುದ್ಧ ಬಾಂಗ್ಲಾದೇಶ ತಂಡದ ಸೋಲಿನ ಹೊರತಾಗಿಯೂ, ಅವರ ಅಸಾಧಾರಣ ಮೊತ್ತವು ಚಾಂಪಿಯನ್ಸ್ ಟ್ರೋಫಿ ಅರ್ಹತೆಯ ಸ್ಪರ್ಧೆಯಲ್ಲಿ ಮುಂದೆ ಉಳಿಯುವುದನ್ನು ಖಚಿತಪಡಿಸಿತು.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯು ನಿರ್ಣಾಯಕ ಕ್ರಮದಲ್ಲಿ ಶ್ರೀಲಂಕಾ ಕ್ರಿಕೆಟ್ ಆಡಳಿತದಲ್ಲಿ ಸರ್ಕಾರದ ಹಸ್ತಕ್ಷೇಪದಿಂದಾಗಿ ಶ್ರೀಲಂಕಾ ತಂಡದ ಸದಸ್ಯತ್ವವನ್ನೇ ರದ್ದುಗೊಳಿಸಿತು.
ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಜಾಗೊಳಿಸುವಿಕೆಯನ್ನು ರದ್ದುಗೊಳಿಸಿದ ಅಲ್ಲಿನ ನ್ಯಾಯಾಲಯದ ತೀರ್ಪಿನ ಹೊರತಾಗಿಯೂ, ಐಸಿಸಿ ಇದು ಸ್ವಾಯತ್ತತೆಯ ಉಲ್ಲಂಘನೆ ಎಂದು ಪರಿಗಣಿಸಿತು. ಇದು ತಕ್ಷಣ ಸದಸ್ಯತ್ವ ರದ್ದು ಕ್ರಮಕ್ಕೆ ಕಾರಣವಾಯಿತು.
ಕಳಪೆ ವಿಶ್ವಕಪ್ ಪ್ರದರ್ಶನದ ಬಳಿಕ, ಶ್ರೀಲಂಕಾ ರಾಷ್ಟ್ರೀಯ ಮಂಡಳಿಯನ್ನು ಕ್ರೀಡಾ ಸಚಿವಾಲಯ ವಜಾಗೊಳಿಸಿದ್ದು, ಅಲ್ಲಿನ ರಾಜಕೀಯ ಪ್ರಕ್ಷುಬ್ಧತೆಗೆ ಕಾರಣವಾಯಿತು.
ಶ್ರೀಲಂಕಾ ಕ್ರೀಡಾ ಸಚಿವ ರೋಶನ್ ರಣಸಿಂಗ್ ಅವರ ಬಲವಾದ ಮಾತುಗಳು ಮತ್ತು ನಂತರದ ಮಧ್ಯಂತರ ಸಮಿತಿಯ ರಚನೆಯು ಅವ್ಯವಸ್ಥೆಯನ್ನು ಹೆಚ್ಚಿಸಿತು. ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಬಿಕ್ಕಟ್ಟನ್ನು ಸೃಷ್ಟಿಸಿತು.
ವಿಶ್ವಕಪ್ ಅಂಕಪಟ್ಟಿಯಲ್ಲಿ ಈಗ ಒಂಬತ್ತನೇ ಸ್ಥಾನದಲ್ಲಿರುವ ಶ್ರೀಲಂಕಾ, 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಾನ ಪಡೆಯಲು ಹೋರಾಟವನ್ನು ಎದುರಿಸುತ್ತಿದೆ. ಇತ್ಯರ್ಥವಾಗದ ವಿವಾದಗಳು, ರಾಜಕೀಯ ಮಧ್ಯಸ್ಥಿಕೆಗಳು ಮತ್ತು ಐಸಿಸಿ ಸದಸ್ಯತ್ವ ರದ್ದು ವಜಾಗೊಳಿಸುವ ಅನ್ವೇಷಣೆಯೊಂದಿಗೆ ಶ್ರೀಲಂಕಾ ಕ್ರಿಕೆಟ್ ಭವಿಷ್ಯವು ಅಸಮತೋಲನದಲ್ಲಿದೆ.