For Quick Alerts
ALLOW NOTIFICATIONS  
For Daily Alerts
 

ಲೈಂಗಿಕ ದೌರ್ಜನ್ಯ ಆರೋಪ: ಶ್ರೀಲಂಕಾ ಕ್ರಿಕೆಟಿಗ ದನುಷ್ಕ ಗುಣತಿಲಕ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಅಮಾನತು

Sri Lanka Cricketer Danushka Gunathilak Suspended From All Forms Of Cricket for Sexual Misconduct

ಮಹಿಳೆಯೊಬ್ಬರು ಮಾಡಿದ ಲೈಂಗಿಕ ದೌರ್ಜನ್ಯದ ಆರೋಪದ ನಂತರ ಶ್ರೀಲಂಕಾ ತಂಡದ ಕ್ರಿಕೆಟಿಗ ದನುಷ್ಕ ಗುಣತಿಲಕ ಅವರನ್ನು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಅಮಾನತುಗೊಳಿಸಲಾಗಿದೆ.

ರಾಷ್ಟ್ರೀಯ ಆಟಗಾರ ದನುಷ್ಕ ಗುಣತಿಲಕ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಅಮಾನತುಗೊಳಿಸಲು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಕಾರ್ಯಕಾರಿ ಸಮಿತಿ ನಿರ್ಧರಿಸಿದೆ ಎಂದು ಶ್ರೀಲಂಕಾ ಕ್ರಿಕೆಟ್ ಸೋಮವಾರ ದೃಢಪಡಿಸಿದೆ.

ದನುಷ್ಕ ಗುಣತಿಲಕ ಅವರನ್ನು ನವೆಂಬರ್ 5ರಂದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಬಂಧಿಸಲಾಗಿತ್ತು. ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಮಾಹಿತಿಯ ಪ್ರಕಾರ, ಮಹಿಳೆಯೊಬ್ಬರು ಮಾಡಿದ ಲೈಂಗಿಕ ದೌರ್ಜನ್ಯದ ಆರೋಪದ ನಂತರ ದನುಷ್ಕ ಗುಣತಿಲಕ ಅವರನ್ನು ಬಂಧಿಸಲಾಗಿದೆ.

ಶನಿವಾರ ಸಿಡ್ನಿಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ದನುಷ್ಕ ಗುಣತಿಲಕ ಶ್ರೀಲಂಕಾ ತಂಡದ ಜೊತೆಗಿದ್ದರು. ಪಂದ್ಯ ಮುಗಿದ ಬಳಿಕ ಅವರನ್ನು ಬಂಧಿಸಲಾಗಿದೆ.

ಆಸ್ಟ್ರೇಲಿಯಾದ ಮಾಧ್ಯಮ ವರದಿಗಳ ಪ್ರಕಾರ, ಡೇಟಿಂಗ್ ಅಪ್ಲಿಕೇಶನ್ ಮೂಲಕ ದನುಷ್ಕ ಗುಣತಿಲಕ 29 ವರ್ಷದ ಮಹಿಳೆಯನ್ನು ಭೇಟಿಯಾಗಿದ್ದರು. ಅದೇ ಮಹಿಳೆ ಈಗ ದನುಷ್ಕ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ.

ಈ ಕಳೆದ ವಾರದ ಆರಂಭದಲ್ಲಿ ಸಿಡ್ನಿಯ ನಿವಾಸದಲ್ಲಿ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದ್ದು. ಶ್ರೀಲಂಕಾದ ಕ್ರಿಕೆಟಿಗನನ್ನು ಶನಿವಾರ ರಾತ್ರಿ ಟೀಂ ತಂಗಿದ್ದ ಹೋಟೆಲ್‌ನಲ್ಲಿ ಬಂಧಿಸಲಾಯಿತು. ಭಾನುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಸಿಡ್ನಿಯ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್‌ನಲ್ಲಿರುವ ಟೀಮ್ ಹೋಟೆಲ್‌ನಿಂದ ಬಂಧಿಸಲಾಗಿದ್ದು, ವಾರದ ಆರಂಭದಲ್ಲಿ ರೋಸ್ ಬೇಯಲ್ಲಿರುವ ಮನೆಯಲ್ಲಿ ಲೈಂಗಿಕ ದೌರ್ಜನ್ಯ ಮಾಡಿರುವುದಾಗಿ ಆರೋಪಿಸಲಾಗಿದೆ.

ಆನ್‌ಲೈನ್ ಡೇಟಿಂಗ್ ಅಪ್ಲಿಕೇಷನ್ ಮೂಲಕ ಪರಿಚಯ
"ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್ ಮೂಲಕ ಹಲವಾರು ದಿನಗಳವರೆಗೆ ಸಂವಹನ ನಡೆಸಿದ ನಂತರ ಮಹಿಳೆ ದನುಷ್ಕ ಗುಣತಿಲಕರನ್ನು ಭೇಟಿಯಾಗಿದ್ದಾಳೆ. ನವೆಂಬರ್ 2, 2022ರ ಸಂಜೆ ಅವನು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ," ಎಂದು ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆ ಆರೋಪಿಸಿದ್ದಾರೆ.

ನವೆಂಬರ್ 2015ರಲ್ಲಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ನಂತರ ಅವರು ಶ್ರೀಲಂಕಾ ಪರ 8 ಟೆಸ್ಟ್, 47 ಏಕದಿನ ಮತ್ತು 46 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ.

"ಇದಲ್ಲದೆ, ಶ್ರೀಲಂಕಾ ಕ್ರಿಕೆಟ್ ಆಪಾದಿತ ಅಪರಾಧದ ತನಿಖೆಯನ್ನು ತ್ವರಿತವಾಗಿ ಕೈಗೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಆಸ್ಟ್ರೇಲಿಯಾದಲ್ಲಿ ಮೇಲೆ ತಿಳಿಸಲಾದ ನ್ಯಾಯಾಲಯದ ಪ್ರಕರಣದ ಮುಕ್ತಾಯದ ನಂತರ, ತಪ್ಪಿತಸ್ಥರೆಂದು ಕಂಡುಬಂದಲ್ಲಿ ಹೇಳಿದ ಆಟಗಾರನಿಗೆ ದಂಡ ವಿಧಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ," ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಹೇಳಿದೆ.

ಲೈಂಗಿಕ ದೌರ್ಜನ್ಯದ ಆರೋಪದ ನಂತರ ಜಾಮೀನು ಪಡೆಯಲು ಗುಣತಿಲಕ ಅವರು ಸೋಮವಾರ ಸಿಡ್ನಿ ನ್ಯಾಯಾಲಯದಲ್ಲಿ ಕೈಕೋಳದಲ್ಲಿ ವೀಡಿಯೊ ಲಿಂಕ್ ಮೂಲಕ ಹಾಜರಾಗಿದ್ದರು. ತನ್ನ ಗುರುತನ್ನು ಖಚಿತಪಡಿಸಿಕೊಳ್ಳಲು ಮಾತ್ರ ಮಾತನಾಡಿದ ಗುಣತಿಲಕನನ್ನು ಡೌನಿಂಗ್ ಸೆಂಟರ್ ಸ್ಥಳೀಯ ನ್ಯಾಯಾಲಯದಲ್ಲಿ ಪರದೆಯ ಮೇಲೆ ತೋರಿಸಲಾಯಿತು.

ಸಿಡ್ನಿ ಬಂಧನ ಕೇಂದ್ರದಲ್ಲಿ ಬೂದು ಬಣ್ಣದ ಟಿ-ಶರ್ಟ್ ಧರಿಸಿ ಕುಳಿತಾಗ ಗುಣತಿಲಕ ಶಾಂತವಾಗಿ ಕಾಣಿಸಿಕೊಂಡರು. 31ರ ಹರೆಯದ ದನುಷ್ಕ ಗುಣತಿಲಕಗೆ ಜಾಮೀನು ನೀಡುವುದಾಗಿ ಬ್ಯಾಟರ್ ಪರ ವಕೀಲ ಆನಂದ ಅಮರನಾಥ್ ಹೇಳಿದ್ದಾರೆ.

ಜಾಮೀನು ಅರ್ಜಿ ವಿಚಾರಣೆಗೆ ಮುನ್ನ ಮ್ಯಾಜಿಸ್ಟ್ರೇಟ್ ರಾಬರ್ಟ್ ವಿಲಿಯಮ್ಸ್ ಪ್ರಕರಣವನ್ನು ಸಂಕ್ಷಿಪ್ತವಾಗಿ ಮುಂದೂಡಿದರು.

Story first published: Monday, November 7, 2022, 12:35 [IST]
Other articles published on Nov 7, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+