IND vs SL: ಟೀಮ್ ಇಂಡಿಯಾದ ಹೊಸ ನಾಯಕನ ಭಯದಲ್ಲಿ ಶ್ರೀಲಂಕಾ!
ಜುಲೈ 26 ಶುಕ್ರವಾರ, ಭಾರತ ಮತ್ತು ಶ್ರೀಲಂಕಾ ನಡುವಿನ ಟಿ20 ಸರಣಿಗೆ ಪಲ್ಲೆಕಲೆ ಸಜ್ಜಾಗಿದೆ. ಈ ಸರಣಿಯೊಂದಿಗೆ ಟಿ20ಯಲ್ಲಿ ಟೀಮ್ ಇಂಡಿಯಾದ ಹೊಸ ಶಕೆ ಆರಂಭಿಸಲಿದೆ.
ಹೊಸ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಹೆಡ್ ಕೋಚ್ ಗೌತಮ್ ಗಂಭೀರ್ ಅವರ ನೇತೃತ್ವದಲ್ಲಿ ಭಾರತ ತಂಡ ಮುನ್ನಡೆಯಲಿದೆ.

ಟಿ20 ವಿಶ್ವಕಪ್ 2024ರ ಗೆಲುವಿನ ಬಳಿಕ ಟೀಮ್ ಇಂಡಿಯಾ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರು ಚುಟುಕು ಕ್ರಿಕೆಟ್ ಯುಗ ಅಂತ್ಯಗೊಂಡಿದೆ. ಇದೀಗ ಶ್ರೀಲಂಕಾ ತಂಡವು ಟೀಮ್ ಇಂಡಿಯಾದ ನೂತನ ನಾಯಕನ ಭಯದಲ್ಲಿ ಸಿಲುಕಿದೆ.
ಶ್ರೀಲಂಕಾ ಪಳಯದಲ್ಲಿ ಸೂರ್ಯಕುಮಾರ್ ಯಾದವ್ ಭಾರೀ ಭಯ ಹುಟ್ಟಿಸಿದ್ದಾರೆ. ಶ್ರೀಲಂಕಾ ವಿರುದ್ಧ ಸೂರ್ಯ ಇದುವರೆಗೆ ಕೇವಲ 5 ಟಿ20 ಪಂದ್ಯಗಳನ್ನು ಆಡಿದ್ದರೂ, ಶ್ರೀಲಂಕಾ ಬೌಲರ್‌ಗಳ ನಿದ್ದೆಗೆಡಿಸಿದ್ದಾರೆ. ಈ ಟಿ20 ಸರಣಿಯಲ್ಲಿ ಸೂರ್ಯ ಅಬ್ವರಿಸಿದರೆ, ರೋಹಿತ್ ಶರ್ಮಾ ಅವರ ದಾಖಲೆಯ ಸಮೀಪಕ್ಕೆ ಬರಲಿದ್ದಾರೆ.
ಶ್ರೀಲಂಕಾ ಬೌಲರ್ಸ್ ದಂಡಿಸಿದ ಸೂರ್ಯ
ಕಳೆದ ವರ್ಷ ಟೀಮ್ ಇಂಡಿಯಾ ಪ್ರವಾಸಕ್ಕೆ ತೆರಳಿದ್ದ ವೇಳೆ ಸೂರ್ಯಕುಮಾರ್ ಯಾದವ್ ಏಕಾಂಗಿಯಾಗಿ ಲಂಕಾವನ್ನು ಧ್ವಂಸ ಮಾಡಿದ್ದರು. ಟಿ20ಯಲ್ಲಿ ಭಾರತದ ಪರ (45 ಎಸೆತಗಳಲ್ಲಿ) ಎರಡನೇ ವೇಗದ ಶತಕ ಸಿಡಿಸಿದ್ದರು.
ಪರಿಣಾಮ ಶ್ರೀಲಂಕಾ ಸೂರ್ಯನಿಗಾಗಿ ಬೌಲಿಂಗ್ ಮಾಡುವಲ್ಲಿ ಲಂಕಾ ಬೌಲರ್ಸ್ ಹೊಸ ಮಾರ್ಗಸೂಚಿ ಸಿದ್ಧಪಡಿಸುವಲ್ಲಿ ನಿರತವಾಗಿದ್ದರು. ಸ್ಕೈ 51 ಎಸೆತಗಳಲ್ಲಿ 112 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದ್ದರು. ಈ ಇನ್ನಿಂಗ್ಸ್‌ನಲ್ಲಿ 7 ಬೌಂಡರಿಗಳು ಮತ್ತು 9 ಗಗನಚುಂಬಿ ಸಿಕ್ಸರ್‌ಗಳು ಸೂರ್ಯ ಬ್ಯಾಟ್‌ನಿಂದ ಬಂದಿದ್ದವು.
ಇಲ್ಲಿಯವರೆಗೆ ಸೂರ್ಯ ಶ್ರೀಲಂಕಾ ವಿರುದ್ಧ 63.50 ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. 5 ಟಿ20 ಪಂದ್ಯಗಳಲ್ಲಿ ಸ್ಕೈ ತನ್ನ ಹೆಸರಿನಲ್ಲಿ 254 ರನ್ ಗಳನ್ನು ಕಲೆ ಹಾಕಿದ್ದಾರೆ.
ಶ್ರೀಲಂಕಾ ವಿರುದ್ಧ ರೋಹಿತ್ ಟಾಪ್ ರನ್ ಸ್ಕೋರರ್
ಶ್ರೀಲಂಕಾ ವಿರುದ್ಧ ಟಿ20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟರ್ ರೋಹಿತ್ ಶರ್ಮಾ. ಹಿಟ್‌ಮ್ಯಾಮ್ 19 ಟಿ20 ಪಂದ್ಯಗಳಲ್ಲಿ 411 ರನ್ ಗಳಿಸಿದ್ದಾರೆ. ಈಗ ರೋಹಿತ್ ಟಿ20 ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ.
ಆದ್ದರಿಂದ ರೋಹಿತ್ ನನ್ನು ಹಿಂದಿಕ್ಕಿ ಸೂರ್ಯ ನಂಬರ್-1 ಆಗಲು ಸುವರ್ಣ ಅವಕಾಶವಿದೆ. ಸೂರ್ಯ ಹಿಟ್‌ಮ್ಯಾನ್‌ನಿಂದ ಕೇವಲ 157 ರನ್‌ಗಳ ದೂರದಲ್ಲಿದ್ದಾರೆ. ರೋಹಿತ್ ನಂಬರ್-1 ಆಗಲು 19 ಪಂದ್ಯಗಳನ್ನು ತೆಗೆದುಕೊಂಡಿದ್ದರು. ಆದರೆ ಸ್ಕೈ ಈ ಸ್ಥಾನವನ್ನು ವೇಗವಾಗಿ ತಲುಪಬಹುದು.
ಟಿ20 ಸರಣಿಗೆ ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋ, ರವಿ ಬಿಷ್ಣೋಯಿ, ಅರ್ಷದೀಪ್ ಸಿಂಗ್, ಖಲೀಲ್ ಅಹ್ಮದ್, ಮೊಹಮ್ಮದ್ ಸಿರಾಜ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications