ಈ ತಂಡವೇ ವಿಶ್ವಕಪ್ ಗೆಲ್ಲುವ ಸಾಧ್ಯತೆ ಅತಿ ಹೆಚ್ಚಾಗಿದೆ: ಮುರಳೀಧರನ್ ಯಾವುದು ಗೊತ್ತೇ?
ವಿಶ್ವಕಪ್ ಸನಿಹದಲ್ಲಿರುವಾಗ ಎಲ್ಲಾ ತಂಡಗಳು ಕೂಡ ತಮ್ಮ ತಮ್ಮ ತಂಡಗಳನ್ನು ಘೋಷಣೆ ಮಾಡಿಕೊಳ್ಳುತ್ತಿವೆ. ಬಹುತೇಕ ಎಲ್ಲಾ ತಂಡಗಳು ಕೂಡ ಈ ಹಂತದಲ್ಲಿ ತಮ್ಮ ಅಂತಿಮ 15ರ ಬಳಗವನ್ನು ಪ್ರಕಟಿಸಿದೆ. ಈ ಹಂತದಲ್ಲಿ ತಂಡದ ಆಟಗಾರರ ಬಲಾಬಲದ ವಿಶ್ಲೇಷಣೆಗಳು ಕೂಡ ಆರಂಭವಾಗಿದೆ. ಇನ್ನು ಕೆಲ ದಿಗ್ಗಜ ಕ್ರಿಕೆಟಿಗರು ಈ ಸಂದರ್ಭದಲ್ಲಿ ಈ ಬಾರಿಯ ವಿಶ್ವಕಪ್ ಟೂರ್ನಿ ಗೆಲದಲುವ ಸಾಧ್ಯತೆಯಿರುವ ನೆಚ್ಚಿನ ತಂಡಗಳನ್ನು ಆಯ್ಕೆ ಮಾಡುತ್ತಿದ್ದಾರೆ.
ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿ ಕೂಡ ತಮ್ಮದೇ ಆತ ವಿಶ್ಲೇಷಣೆಗಳ ಹಿನ್ನೆಲೆಯಲ್ಲಿ ಈ ವಿಶ್ವಕಪ್ ಯಾರು ಗೆಲ್ಲಬಹುದು ಎನ್ನುವ ಲೆಕ್ಕಾಚಾರಗಳನ್ನು ನಡೆಸುತ್ತಿರುತ್ತಾರೆ. ಇದೇ ಸಂದರ್ಭದಲ್ಲಿ ಶ್ರೀಲಂಕಾದ ದಿಗ್ಗಜ ಕ್ರಿಕೆಟಿಗ ವಿಶ್ವಕಂಡ ಸರ್ವಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರೆನಿಸಿರುವ ಮುತ್ತಯ್ಯ ಮುರಳೀಧರನ್ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಯಾವುದು ಎನ್ನುವುದನ್ನು ಹೆಸರಿಸಿದ್ದಾರೆ.

ವಿಶ್ವಕಪ್ ಆರಂಭಕ್ಕೆ ದಿನಗಣನೆ
ವಿಶ್ವಕಪ್ ಟೂರ್ನಿ ಇನ್ನೇನು ಮೂರು ವಾರಗಳಲ್ಲಿ ಭಾರತದಲ್ಲಿ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳು ಕೂಡ ವಿಶ್ವಕಪ್‌ಗಾಗಿ ಕೊನೆಯ ಹಂತದ ಸಿದ್ಧತೆಗಳನ್ನು ನಡೆಸುತ್ತಿದೆ. ಕ್ರಿಕೆಟ್‌ನ ಬಲಿಷ್ಠ 10 ತಂಡಗಳು 48 ಪಂದ್ಯಗಳನ್ನಾಡಲಿದ್ದು ನವೆಂಬರ್ 19ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಯಾರು ಚಾಂಪಿಯನ್ ಎನ್ನುವುದು ತಿಳಿಯಲಿದೆ.
ಟ್ರೋಫಿಗಾಗಿ ನಡೆಯಲಿದೆ ಭಾರೀ ಪೈಪೋಟಿ
ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಸೆನೆಸಾಟದ ಮೂಲಕ ಈ ಬಾರಿಯ ವಿಶ್ವಕಪ್‌ಗೆ ಅಹ್ಮದಾಬಾದ್‌ನಲ್ಲಿ ಚಾಲನೆ ದೊರೆಯಲಿದೆ. ಭಾಋತ ತಂಡ ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ಆಡಲಿದೆ. ಭಾರತದಲ್ಲಿ ಈ ಟೂರ್ನಮೆಂಟ್ ನಡೆಯುತ್ತಿರುವ ಕಾರಣ ಭಾರತ ಸೇರಿದಂತೆ ಕೆಲ ಏಷ್ಯಾದ ತಂಡಗಳು ವಿಶ್ವಕಪ್‌ಗೆ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ. ಅಲ್ಲದೆ ಹಾಲಿ ಚಾಂಪಿಯನ್ ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ತಂಡಗಳು ಕೂಡ ಬಲಿಷ್ಠವಾಗಿದ್ದು ಜಿದ್ದಾಜಿದ್ದಿನ ಪೈಪೋಟಿ ನಡೆಯುವ ನಿರೀಕ್ಷೆಯಿದೆ.
2011ರಲ್ಲಿ ವಿಶ್ವಕಪ್ ಗೆದ್ದಿದ್ದ ಭಾರತ
ಇನ್ನು 2011ರಲ್ಲಿ ಭಾರತದ ಸಹ ಆತಿಥ್ಯದಲ್ಲಿ ವಿಶ್ವಕಪ್ ಟೂರ್ನಿ ಆಯೋಜನೆಯಾಗಿದ್ದಾಗ ಎಂಎಸ್ ಧೋನಿ ನೇತೃತ್ವದಲ್ಲಿ ಭಾರತ ತಂಡ ವಿಶ್ವಕಪ್ ಟೂರ್ನಿ ಗೆದ್ದು ಬೀಗಿತ್ತು. ಅದಾದ ಬಳಿಕ ಆತಿಥ್ಯವಹಿಸಿಕೊಂಡ ರಾಷ್ಟ್ರಗಳೇ ವಿಶ್ವಕಪ್ ಗೆದ್ದುಕೊಂಡು ಬಂದಿವೆ. 2015ರಲ್ಲಿ ಆಸ್ಟ್ರೇಲಿಯಾ ಹಾಗೂ 2019ರಲ್ಲಿ ಇಂಗ್ಲೆಂಡ್ ಈ ಎರಡು ತಂಡಗಳು ಕೂಡ ಟೂರ್ನಿಯ ಆತಿಥ್ಯವನ್ನು ವಹಿಸಿಕೊಂಡಿತ್ತು. ಅಲ್ಲದೆ ತವರಿನಲ್ಲಿ ಬಾರತ ತಂಡವನ್ನು ಮಣಿಸುವುದು ಯಾವುದೇ ತಂಡಕ್ಕಾದರೂ ಕಷ್ಟ ಎನ್ನುವುದು ಎಲ್ಲಾ ಕ್ರಿಕೆಟ್ ಅಭಿಮಾನಿಗಳಿಗೂ ತಿಳಿದೇ ಇದೆ.
ಸೆಮಿಫೈನಲ್‌ಗೇರುವ ನಾಲ್ಕು ತಂಡಗಳು
ಈ ಎಲ್ಲಾ ಕಾರಣಗಳಿಂದಾಗಿ ಈ ಬಾರಿಯ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಗೆಲ್ಲುವ ನೆಚ್ಚಿನ ತಂಡ ಎನ್ನುವುದು ಬಹುತೇಕರ ಅಭಿಪ್ರಾಯ. ಶ್ರೀಲಂಕಾದ ಮಾಜಿ ಕ್ರಿಕೆಟಿಗ ದಿಗ್ಗಜ ಆಟಗಾರ ಮುತ್ತಯ್ಯ ಮುರಳೀಧರನ್ ಅವರ ಅಭಿಪ್ರಾಯವೂ ಇದೆ ಆಗಿದೆ. ಎಎನ್‌ಐನ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದ ಮುರಳೀಧರನ್ ಮೊದಲಿಗೆ ಈ ಬಾರಿಯ ವಿಶ್ವಕಪ್ ಟೂರ್ನಿಯ ನಾಲ್ಕು ಸೆಮಿಫೈನಲಿಸ್ಟ್ ತಂಡಗಳನ್ನು ಹೆಸರಿಸಿದ್ದಾರೆ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ ಹಾಗೂ ಪಾಕಿಸ್ತಾನ ತಂಡಗಳು ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸುವ ನಾಲ್ಕು ತಂಡಗಳು ಎಂದಿದ್ದಾರೆ ಮುರಳೀಧರನ್.
ಭಾರತ ಗೆಲ್ಲಲಿದೆ ಎಂದ ಲಂಕಾ ದಿಗ್ಗಜ
ಇನ್ನು ಈ ಸಂದರ್ಭದಲ್ಲಿ ಮುರಳೀಧರನ್ ಈ ಬಾರಿಯ ವಿಶ್ವಕಪ್‌ನಲ್ಲಿ ಚಾಂಪಿಯನ್ ಪಟ್ಟವನ್ನು ಭಾರತವೇ ಅಲಂಕರಿಸುವ ಸಾಧ್ಯತೆ ಹೆಚ್ಚಗಿದೆ ಎಂದಿದ್ದಾರೆ. "ಈ ವಿಶ್ವಕಪ್‌ನಲ್ಲಿ ಭಾರತಕ್ಕೆ ವಿಶ್ವಕಪ್ ಗೆಲ್ಲುವ ಅವಕಾಶ ಅತಿ ಹೆಚ್ಚಾಗಿದೆ. ಅಲ್ಲದೆ ಅವರಿಗೆ ತವರಿನ ಲಾಭವೂ ಇರಲಿದೆ. ನೂರಾರು ಕೋಟಿ ಜನರ ಸಕಾರಾತ್ಮಕ ಬೆಂಬಲ ಅವರಿಗಿದ್ದು ಅಭಿಮಾನಿಗಳ ಬೆಂಬಲ ತಂಡದ ಆಟಗಾರರಿಗೆ ಹೆಚ್ಚಿನ ಬಲ ನೀಡಲಿದೆ. ಹಾಗಾಗಿ ಭಾರತವೇ ವಿಶ್ವಕಪ್ ಗೆಲ್ಲುವ ಅತಿ ಹೆಚ್ಚು ಅವಕಾಶ ಹೊಂದಿದೆ ಎನಿಸುತ್ತಿದೆ" ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications