For Quick Alerts
ALLOW NOTIFICATIONS  
For Daily Alerts
 

SL vs WI T20: ವಿಂಡೀಸ್ ತಂಡವನ್ನು 73 ರನ್‌ ಗಳಿಂದ ಮಣಿಸಿದ ಲಂಕಾ

ಭರವಸೆಯ ಆಟಗಾರ ದುನಿತ್ ವೆಲ್ಲಲಾಗೆ ಹಾಗೂ ಪಾತುಂ ನಿಸ್ಸಾಂಕ ಅವರ ಸೊಗಸಾದ ಆಟದ ನೆರವಿನಿಂದ ಶ್ರೀಲಂಕಾ ತಂಡ 73 ರನ್‌ಗಳಿಂದ ವೆಸ್ಟ್‌ ಇಂಡೀಸ್‌ ತಂಡವನ್ನು ಎರಡನೇ ಟಿ20 ಪಂದ್ಯದಲ್ಲಿ ಮಣಿಸಿ, ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಸಮಬಲ ಸಾಧಿಸಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ಜಯ ಸಾಧಿಸಿತ್ತು.

ಎರಡನೇ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 162 ರನ್‌ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ವೆಸ್ಟ್‌ ಇಂಡೀಸ್ 16.1 ಓವರ್‌ಗಳಲ್ಲಿ 89 ರನ್‌ಗಳಿಗೆ ಸರ್ವಪತನ ಕಂಡಿತು.

Sri Lanka Levels T20I Series with 73-Run Victory Over West Indies

ನಿಸ್ಸಾಂಕ ಅರ್ಧಶತಕ

ಮೊದಲು ಬ್ಯಾಟ್ ಮಾಡಿದ ಲಂಕಾ ತಂಡದ ಆರಂಭ ಭರ್ಜರಿಯಾಗಿತ್ತು. ಕುಸಾಲ್‌ ಮೆಂಡೀಸ್‌ ಹಾಗೂ ಪಾತುಂ ನಿಸ್ಸಾಂಕ ಜೋಡಿ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಮೊದಲ ವಿಕೆಟ್‌ಗೆ ಈ ಜೋಡಿ 10 ಓವರ್‌ಗಳಲ್ಲಿ 77 ರನ್‌ ಸೇರಿಸಿತು. ಕುಸಾಲ್‌ ಮೆಂಡೀಸ್ 2 ಬೌಂಡರಿ, 1 ಸಿಕ್ಸರ್‌ ಸಹಾಯದಿಂದ 26 ರನ್‌ ಬಾರಿಸಿ ಔಟ್ ಆದರು.

ಕುಸಾಲ್ ಪೆರೆರಾ 3 ಬೌಂಡರಿ, 1 ಸಿಕ್ಸರ್‌ 24 ರನ್‌ ಸೇರಿಸಿತು. ಕಮಿಂದು ಮೆಂಡೀಸ್‌ 19 ರನ್‌ ಸೇರಿಸಿ ಔಟ್ ಆದರು. ನಿಸ್ಸಾಂಕ 49 ಎಸೆತಗಳಲ್ಲಿ 54 ರನ್‌ಗಳ ವೇಗದ ಇನ್ನಿಂಗ್ಸ್ ಆಡಿದರು. ಈ ಇನ್ನಿಂಗ್ಸ್‌ನ ಒಂದು ವಿಶೇಷತೆ ಎಂದರೆ ನಿಸ್ಸಾಂಕ, ಶೆಫರ್ ಜೋಸೆಫ್ ಅವರ ಒಂದೇ ಓವರ್‌ನಲ್ಲಿ ಐದು ಬೌಂಡರಿಗಳನ್ನು ಬಾರಿಸಿ ಅಬ್ಬರಿಸಿದರು.

ಶೆಫರ್ ಜೋಸೆಫ್ ಇನಿಂಗ್ಸ್‌ನ ನಾಲ್ಕನೇ ಓವರ್‌ ಬೌಲ್‌ ಮಾಡಿದರು. ಈ ವೇಳೆ ಮೊದಲ ಎಸೆತ ಲೆಗ್‌ಬೈ ಬೌಂಡರಿ ಆಯಿತು. ನಂತರದ ಐದು ಎಸೆತಗಳಲ್ಲಿ ನಿಸ್ಸಾಂಕ ಬೌಂಡರಿ ಬಾರಿಸಿ ಅಬ್ಬರಿಸಿದರು. ವಿಂಡೀಸ್ ತಂಡದ ಪರ ರೊಮಾರಿಯೋ ಶೆಫರ್ಡ್ ಎರಡು ವಿಕೆಟ್ ಪಡೆದು ಬೀಗಿದರು.

ಗುರಿಯನ್ನು ಹಿಂಬಾಲಿಸಿದ ವೆಸ್ಟ್‌ ಇಂಡೀಸ್ ತಂಡದ ಆರಂಭ ಕಳಪೆಯಾಗಿತ್ತು. ವಿಂಡೀಸ್ ತಂಡದ ಪರ ಟಾಪ್‌ ಆರ್ಡರ್‌ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಶೆರ್ಫೇನ್ ರುದರ್ಫೋರ್ಡ್ (14), ರೋವ್ಮನ್ ಪೊವೆಲ್ (20), ಅಲ್ಜಾರಿ ಜೋಸೆಫ್ (16) ಮಾತ್ರ ಡಬಲ್‌ ಡಿಜಿಟ್‌ ಮುಟ್ಟಿದರು. ಬೇರೆ ಎಲ್ಲ ಬ್ಯಾಟರ್‌ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದರು.

ದುನಿತ್‌ಗೆ ಮೂರು ವಿಕೆಟ್‌

ಲಂಕಾ ಪರ ದುನಿತ್ ವೆಲ್ಲಲಾಗೆ 9 ರನ್‌ ನೀಡಿ ಮೂರು ವಿಕೆಟ್‌ ಪಡೆದರು. ಉಳಿದಂತೆ ಚರಿತ್ ಅಸಲಂಕ, ಮಹೇಶ ತೀಕ್ಷಣ, ವನಿಂದು ಹಸರಂಗ ತಲಾ ಎರಡು ವಿಕೆಟ್‌ ಪಡೆದರು.

Story first published: Tuesday, October 15, 2024, 23:33 [IST]
Other articles published on Oct 15, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+