Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಗ್ಲೆಂಡ್ ಕೃಪೆಯಿಂದ ವಿಶ್ವಕಪ್ ಗೆ ಅರ್ಹತೆ ಪಡೆದ ಶ್ರೀಲಂಕಾ

ಬೆಂಗಳೂರು, ಸೆ. 20: ಟೀಂ ಇಂಡಿಯಾ ವಿರುದ್ಧ 0-5 ಅಂತರದಿಂದ ಹೀನಾಯ ಸರಣಿ ಸೋಲು ಕಂಡಿದ್ದ ಶ್ರೀಲಂಕಾಕ್ಕೆ ಇಂಗ್ಲೆಂಡಿನಿಂದ ಶುಭ ಸುದ್ದಿ ಬಂದಿದೆ. ಐಸಿಸಿ ವಿಶ್ವಕಪ್ 2019ಕ್ಕೆ ನೇರ ಅರ್ಹತೆ ಗಳಿಸಲು ನಡೆದಿದ್ದ ಅಂಕಗಳ ಪೈಪೋಟಿಯಲ್ಲಿ ಶ್ರೀಲಂಕಾ ಗೆಲುವು ಸಾಧಿಸಿ, ನೇರ ಅರ್ಹತೆ ಪಡೆದುಕೊಂಡಿದೆ.

ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವೆ ಓಲ್ಡ್ ಟ್ರಾಫರ್ಡ್ ನಲ್ಲಿ ಮಂಗಳವಾರ(ಸೆ. 19)ದಂದು ನಡೆದ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಸೋಲು ಅನುಭವಿಸಿದ್ದು, ಶ್ರೀಲಂಕಾಕ್ಕೆ ಲಾಭದಾಯಕವಾಯಿತು.

Sri Lanka qualify for ICC 50-over World Cup

ಸೆ.30ರೊಳಗೆ ನಡೆಯುವ ಪಂದ್ಯಾವಳಿಗಳ ಆಧಾರದ ಮೇಲೆ ನೇರ ಅರ್ಹತೆಯನ್ನು ಪರಿಗಣಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ನಿರ್ಧರಿಸಿದೆ. ವೆಸ್ಟ್ ಇಂಡೀಸ್ ಈಗ 78 ಅಂಕಗಳನ್ನು ಹೊಂದಿದ್ದರೆ, ಶ್ರೀಲಂಕಾ 86 ಅಂಕಗಳನ್ನು ಗಳಿಸಿದೆ. ಹೀಗಾಗಿ 8ನೇ ತಂಡವಾಗಿ ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ಜತೆ ಶ್ರೀಲಂಕಾ ಕೂಡಿಕೊಂಡಿದೆ.

ವೆಸ್ಟ್ ಇಂಡೀಸ್ ತಂಡ ಈಗ ಐಸಿಸಿ ಕ್ರಿಕೆಟ್ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಉಳಿದ 10 ತಂಡಗಳೊಡನೆ ಸೆಣೆಸಿ ಅರ್ಹತೆ ಪಡೆದುಕೊಳ್ಳಬೇಕಿದೆ. ಅಫ್ಘಾನಿಸ್ತಾನ, ಜಿಂಬಾಬ್ವೆ ಹಾಗೂ ಐರ್ಲೆಂಡ್ ತಂಡಗಳು, ಐಸಿಸಿ ವಿಶ್ವ ಕ್ರಿಕೆಟ್ ಲೀಗ್ ಚಾಂಪಿಯನ್ಸ್ ನ ನಾಲ್ಕು ತಂಡಗಳು ಹಾಗೂ ಐಸಿಸಿ ವಿಶ್ವ ಕ್ರಿಕೆಟ್ ಲೀಗ್ ಡಿವಿಷನ್ 2ರಿಂದ ಮತ್ತೆರಡು ತಂಡಗಳು ಅರ್ಹತಾ ಸುತ್ತಿನಲ್ಲಿ ಸೆಣಸಲಿವೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+