ಏಷ್ಯಾಕಪ್: ರಹಮತ್ ಮಸ್ತ್ ಆಟ, ಅಫ್ಘಾನ್ ಗೆ 91 ರನ್ ಭರ್ಜರಿ ಜಯ

ದುಬೈ, ಸೆಪ್ಟೆಂಬರ್ 17: ಏಷ್ಯಾಕಪ್ 2018ರ ಮೂರನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಅಫ್ಘಾನಿಸ್ತಾನ ತಂಡ 91 ರನ್ ಭರ್ಜರಿ ಜಯ ಸಾಧಿಸಿದೆ. ರಹಮತ್ ಷಾ ಅವರ ಆಕರ್ಷಕ ಅರ್ಧಶತಕ (72) ನೆರವಿನಿಂದ ಅಫ್ಘಾನ್ ತಂಡ ಸುಲಭ ಗೆಲುವು ದಾಖಲಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಅಫ್ಘಾನಿಸ್ತಾನ ತಂಡ 50 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದು 249 ರನ್ ಪೇರಿಸಿ ಶ್ರೀಲಂಕಾಕ್ಕೆ 250ರನ್ ಗುರಿ ನೀಡಿತ್ತು. ರಹಮತ್ ಜೊತೆಗೆ ಇಸಾನುಲ್ಲ 45, ಮೊಹಮ್ಮದ್ ಶಹಜಾದ್ 34, ಹಸ್ಮತುಲ್ಲ ಶಾಹಿದಿ 37 ರನ್ ಸೇರಿಸಿ ತಂಡದ ಮೊತ್ತ ಹೆಚ್ಚುವಂತೆ ನೋಡಿಕೊಂಡರು.
ಸ್ಕೋರ್ ಕಾರ್ಡ್ ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಗುರಿ ಬೆನ್ನಟ್ಟಿದ ಶ್ರೀಲಂಕಾದಿಂದ ಉತ್ತಮ ಆಟ ಕಂಡು ಬರಲಿಲ್ಲ. ಉಪುಲ್ ತರಂಗ 36, ಧನಂಜಯ ಡೆಸಿಲ್ವಾ 23, ಏಂಜಲೋ ಮ್ಯಾಥ್ಯೂಸ್ 22, ತಿಸರ ಪೆರೆರ 28ರನ್ ನೆರವಿನೊಂದಿಗೆ ಶ್ರೀಲಂಕಾ 41.2 ಓವರ್ ನಲ್ಲಿ ಎಲ್ಲಾ ವಿಕೆಟ್ ಕಳೆದು 158 ರನ್ ಪೇರಿಸಿ ಶರಣಾಯಿತು.
ದುಬೈಯ ಶೇಖ್ ಸೈಯ್ಯದ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಶ್ರೀಲಂಕಾಕ್ಕೆ ಗೆಲುವು ಅನಿವಾರ್ಯವಾಗಿತ್ತು. ಬಾಂಗ್ಲಾ ವಿರುದ್ಧ ಮೊದಲ ಪಂದ್ಯದಲ್ಲೂ ಲಂಕಾ ಸೋತಿದ್ದರಿಂದ ಅಫ್ಘಾನ್ ಎದುರು ಗೆಲ್ಲಲೇಬೇಕಾದ ಒತ್ತಡದಲ್ಲಿತ್ತು. ಆದರೆ ಗೆಲುವು ಹೊಸ ತಂಡದ ಪಾಲಾಯಿತು.
ಅಫ್ಘಾನಿಸ್ತಾನ ಇನ್ನಿಂಗ್ಸ್ ವೇಳೆ ಶ್ರೀಲಂಕಾ ಬೌಲರ್ ತಿಸರ ಪೆರೆರ 55 ರನ್ನಿಗೆ 5 ವಿಕೆಟ್ ಕಬಳಿಸಿ ಗಮನ ಸೆಳೆದರು. ಭರ್ಜರಿ ಅರ್ಧಶತಕ ಸಿಡಿಸಿದ ಅಫ್ಘಾನ್ ಬ್ಯಾಟ್ಸ್ಮನ್ ರಹಮತ್ ಪಾಲಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು. ಈ ಪಂದ್ಯದೊಂದಿಗೆ ಶ್ರೀಲಂಕಾ ಟೂರ್ನಿಯಿಂದ ಹೊರಬಿದ್ದಂತಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications