ಶ್ರೀಲಂಕಾ vs ಆಸ್ಟ್ರೇಲಿಯಾ: 5 ವರ್ಷಗಳ ನಂತರ ಟೆಸ್ಟ್ ತಂಡಕ್ಕೆ ಮರಳಲಿದ್ದಾರೆ ಮ್ಯಾಕ್ಸ್‌ವೆಲ್!

ಶ್ರೀಲಂಕಾಕ್ಕೆ ಬಂದಿಳಿದ ನಂತರ ಆಸ್ಟ್ರೇಲಿಯವು ಪ್ರವಾಸದ ಸೀಮಿತ ಓವರ್‌ಗಳಲ್ಲಿ ತಮ್ಮ ಗಾಯಾಳುಗಳ ಪಟ್ಟಿಯು ಉದ್ದವಾಗುತ್ತಿದೆ. ಮುಂಬರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಬರೀ ಗಾಯಾಳುಗಳಿಂದಲೇ ತುಂಬಿರುವ ಆಸ್ಟ್ರೇಲಿಯ ತಂಡಕ್ಕೆ ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಅಚ್ಚರಿಯಾಗಿ ಮರಳಿದ್ದಾರೆ.
ಈಗಾಗಲೇ ಟ್ರಾವಿಸ್ ಹೆಡ್ ಗಾಯದ ಕಾರಣ ಟೆಸ್ಟ್ ಆಡುವುದು ಅನುಮಾನವೆನಿಸಿದೆ ಮತ್ತು ಆಷ್ಟನ್ ಅಗರ್ ಅವರು ಬುಧವಾರ ಗಾಲೆಯಲ್ಲಿ ಟೆಸ್ಟ್ ಸರಣಿಯ ಆರಂಭಿಕ ಪಂದ್ಯದಿಂದ ಹೊರಗುಳಿದಿದ್ದಾರೆ. ಹೀಗಾಗಿ ಕ್ರಿಕೆಟ್.ಕಾಮ್.ಆಸ್ಟ್ರೇಲಿಯ ಪ್ರಕಾರ, ""ಐದು ವರ್ಷಗಳ ನಂತರ ಮೊದಲ ಬಾರಿಗೆ ಗ್ಲೆನ್ ಮ್ಯಾಕ್ಸ್‌ವೆಲ್ ಟೆಸ್ಟ್ ಜೆರ್ಸಿ ತೊಡಲಿದ್ದಾರೆ ಎಂದು ವರದಿ ಮಾಡಿದೆ.

ಪುರುಷರ ಆಶಸ್‌ನ ಆಟಗಾರ ಎಂದು ಹೆಸರಿಸಲ್ಪಟ್ಟ ಟ್ರಾವಿಸ್ ಹೆಡ್
ಈ ವರ್ಷದ ಆರಂಭದಲ್ಲಿ ಪುರುಷರ ಆಶಸ್‌ನ ಆಟಗಾರ ಎಂದು ಹೆಸರಿಸಲ್ಪಟ್ಟ ಟ್ರಾವಿಸ್ ಹೆಡ್, ಈ ವಾರದ ಆರಂಭದಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಮಂಡಿರಜ್ಜು ಗಾಯಕ್ಕೆ ಒಳಗಾದರು. ಇನ್ನು ಆಷ್ಟನ್ ಅಗರ್ ಅವರು ಸೈಡ್ ಸ್ಟ್ರೈನ್ ಅನ್ನು ಒಳಗಾಗಿದ್ದಾರೆ ಮತ್ತು ಎರಡನೇ ಟೆಸ್ಟ್ ಪಂದ್ಯದ ವೇಳೆಗೆ (ಗಾಲೆಯಲ್ಲಿ) ಆರಂಭಿಕ ಸ್ಥಾನದಲ್ಲಿ ಸಂಭವನೀಯ ತಂಡಕ್ಕೆ ಮರಳುವ ನಿರೀಕ್ಷೆಯಲ್ಲಿದ್ದಾರೆ.
ಗ್ಲೆನ್ ಮ್ಯಾಕ್ಸ್‌ವೆಲ್ ಜೊತೆಗೆ ಎಡಗೈ ಆಟಗಾರ ಆಷ್ಟನ್ ಅಗರ್ ಸಮಯಕ್ಕೆ ಸರಿಯಾಗಿ ಫಿಟ್‌ನೆಸ್‌ಗೆ ಮರಳದಿದ್ದರೆ, ಟ್ರಾವಿಸ್ ಹೆಡ್‌ನ ನಂ.5 ಸ್ಥಾನವನ್ನು ಪಡೆಯಲು ಮಿಚ್ ಮಾರ್ಷ್ ಮತ್ತು ಜೋಶ್ ಇಂಗ್ಲಿಸ್ ಇತರ ಆಯ್ಕೆಗಳಾಗಿವೆ.

ಮ್ಯಾಥ್ಯೂ ಕುಹ್ನೆಮನ್ ಮೂರು ಏಕದಿನ ಪಂದ್ಯಗಳಿಗಾಗಿ ಆಯ್ಕೆಯಾಗಿದ್ದಾರೆ
ಜಾನ್ ಹಾಲೆಂಡ್, ಮ್ಯಾಥ್ಯೂ ಕುಹ್ನೆಮನ್ ಮತ್ತು ಟಾಡ್ ಮರ್ಫಿ ಈ ಮಧ್ಯೆ ಟೆಸ್ಟ್ ಪಂದ್ಯದ ಸಿದ್ಧತೆಗಳಿಗೆ ಸಹಾಯ ಮಾಡಲು ಮತ್ತು ಉಪಖಂಡದ ಪರಿಸ್ಥಿತಿಗಳಲ್ಲಿ ತಮ್ಮ ಅನುಭವವನ್ನು ಹೆಚ್ಚಿಸಿಕೊಳ್ಳಲು ಶ್ರೀಲಂಕಾದಲ್ಲಿ ಉಳಿಯಬಹುದು. ಆದರೂ ಆ ಸ್ಪಿನ್-ಬೌಲಿಂಗ್ ಮೂವರಲ್ಲಿ ಯಾರನ್ನೂ ಇನ್ನೂ ತಂಡಕ್ಕೆ ಸೇರಿಸಲಾಗಿಲ್ಲ. ಮೂವರೂ ಸಹ ಏಕಕಾಲದಲ್ಲಿ ಆಸ್ಟ್ರೇಲಿಯಾ 'ಎ' ತಂಡಕ್ಕಾಗಿ ಆಡಿದರು. ಆದರೆ ಮ್ಯಾಥ್ಯೂ ಕುಹ್ನೆಮನ್ ಅವರು ಆಷ್ಟನ್ ಅಗರ್‌ಗೆ ಬದಲಿಯಾಗಿ ಆಸೀಸ್‌ನ ಕೊನೆಯ ಮೂರು ಏಕದಿನ ಪಂದ್ಯಗಳಿಗಾಗಿ ತಂಡಕ್ಕೆ ಸೇರಿಕೊಂಡಿದ್ದಾರೆ.

ಮ್ಯಾಕ್ಸ್‌ವೆಲ್ ಮರಳುತ್ತಿರುವುದು ಆಸೀಸ್ ತಂಡಕ್ಕೆ ಬಲ
ಇನ್ನು ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಐದು ವರ್ಷಗಳ ನಂತರ ಟೆಸ್ಟ್ ತಂಡಕ್ಕೆ ಮರಳುತ್ತಿರುವುದು ಆಸೀಸ್ ತಂಡಕ್ಕೆ ಬಲ ತಂದಿದೆ. ಮ್ಯಾಕ್ಸ್‌ವೆಲ್ ಸ್ಪಿನ್ ಬೌಲಿಂಗ್ ಬೌಲಿಂಗ್ ಜೊತೆಗೆ ಬ್ಯಾಟಿಂಗ್‌ನಲ್ಲಿ ಅಬ್ಬರಿಸುವುದು ಗ್ಯಾರಂಟಿ ಎನಿಸಿದೆ. ಏಕೆಂದರೆ ಅವರು ಸೀಮಿತ-ಓವರ್‌ಗಳ ಸರಣಿಯಲ್ಲಿ ತಮ್ಮ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ತಂಡದಿಂದ ಹೊರಗುಳಿದಿದ್ದ ಎರಡು ವರ್ಷ ಮತ್ತು ಎಂಟು ತಿಂಗಳುಗಳಲ್ಲಿ ಪ್ರಥಮ ದರ್ಜೆ ಪಂದ್ಯವನ್ನು ಆಡಿಲ್ಲ. ಆದರೆ 33 ವರ್ಷ ವಯಸ್ಸಿನ ಮ್ಯಾಕ್ಸ್‌ವೆಲ್ ಆಡಿದ ಕಡೆಯ ಎಲ್ಲಾ ನಾಲ್ಕು ಟೆಸ್ಟ್‌ಗಳನ್ನು ಶ್ರೀಲಂಕಾದಲ್ಲಿ ಆಡಿದ್ದಾರೆ.

ಶ್ರೀಲಂಕಾ ಮತ್ತು ಆಸ್ಟ್ರೇಲಿಯ ಸಂಭಾವ್ಯ ತಂಡ
ಶ್ರೀಲಂಕಾ ಟೆಸ್ಟ್ ತಂಡ (ತಾತ್ಕಾಲಿಕ): ದಿಮುತ್ ಕರುಣಾರತ್ನೆ (ನಾಯಕ), ಪಾತುಮ್ ನಿಸ್ಸಾಂಕ, ಕಮಿಲ್ ಮಿಶ್ರಾ, ಓಷಾದ ಫೆರ್ನಾಂಡೋ, ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ಕಮಿಂದು ಮೆಂಡಿಸ್, ನಿರೋಶನ್ ಡಿಕ್ವೆಲ್ಲಾ, ದಿನೇಶ್ ಚಾಂಡಿಮಲ್, ಚಮಿಕಾ ಕರುಣಾರತ್ನೆ, ಮೊಹಮ್ ಮೆಂಡಿರಾಜ್, ಶಿರಾನ್ ಫೆರ್ನಾಂಡೋ, ದಿಲ್ಶನ್ ಮಧುಶಂಕ, ಲಹಿರು ಕುಮಾರ, ಕಸುನ್ ರಜಿತ, ವಿಶ್ವ ಫೆರ್ನಾಂಡೋ, ಅಸಿತ ಫೆರ್ನಾಂಡೋ, ಜೆಫ್ರಿ ವಾಂಡರ್ಸೆ, ಲಕ್ಷಿತ ರಸಂಜನ, ಪ್ರವೀಣ್ ಜಯವಿಕ್ರಮ, ಲಸಿತ್ ಎಂಬುಲ್ದೇನಿಯ, ಮತ್ತು ಸುಮಿಂದ ಲಕ್ಷಣ್.
ಆಸ್ಟ್ರೇಲಿಯಾ ಟೆಸ್ಟ್ ತಂಡ (ತಾತ್ಕಾಲಿಕ): ಪ್ಯಾಟ್ ಕಮ್ಮಿನ್ಸ್ (ನಾಯಕ), ಆಷ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖವಾಜಾ, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ನಸ್ ಲ್ಯಾಬು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications