For Quick Alerts
ALLOW NOTIFICATIONS  
For Daily Alerts
 

ಶ್ರೀಲಂಕಾ ವಿರುದ್ಧ ರೋಚಕ ಪಂದ್ಯ ಗೆಲ್ಲಿಸಿದ ದೀಪಕ್ ಚಾಹರ್, ಭುವನೇಶ್ವರ್ ಕುಮಾರ್!

Sri Lanka vs India, 2nd ODI: India beat Sri Lanka in Thriller
Deepak Chahar ಬಾಲ್ ಹಾಗು ಬ್ಯಾಟ್ನಲ್ಲಿ ಪಂದ್ಯದ ದಿಕ್ಕನ್ನೇ ಬದಲಿಸಿದ್ದು ಹೇಗೆ | Oneindia Kannada

ಕೊಲಂಬೋ: ಕೊಲಂಬೋದ ಆರ್‌ ಪ್ರೇಮದಾಸ ಸ್ಟೇಡಿಯಂನಲ್ಲಿ ಮಂಗಳವಾರ (ಜುಲೈ 20) ನಡೆದ ಭಾರತ ಮತ್ತು ಶ್ರೀಲಂಕಾ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ ರೋಚಕ 3 ವಿಕೆಟ್ ಜಯ ಗಳಿಸಿದೆ. ಬ್ಯಾಟ್ಸ್‌ಮನ್‌ಗಳು ಕೈಚೆಲ್ಲಿದಾಗ ಭಾರತ ಸೋಲುವ ಮುನ್ಸೂಚನೆ ಲಭಿಸಿತ್ತು. ಆದರೆ ಬೌಲರ್‌ಗಳಾದ ದೀಪಕ್ ಚಾಹರ್ ಮತ್ತು ಭುವನೇಶ್ವರ್ ಕುಮಾರ್ ಜೊತೆಯಾಟ ತಂಡಕ್ಕೆ ಗೆಲುವಿನ ಉಡುಗೊರೆ ನೀಡಿತು.

ಈ ಪಂದ್ಯದೊಂದಿಗೆ ದೀಪಕ್ ಚಾಹರ್ ಏಕದಿನ ವೃತ್ತಿ ಬದುಕಿನ ಚೊಚ್ಚಲ ಅರ್ಧ ಶತಕ ದಾಖಲಿಸಿದ್ದಾರೆ. ಭಾರತ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-0ಯ ಜಯ ದಾಖಲಿಸಿದೆ. ಔಪಚಾರಿಕ ಪಂದ್ಯ ಜುಲೈ 23ರಂದು ನಡೆಯಲಿದೆ.

ಅವಿಷ್ಕ, ಅಸಲಂಕ ಅರ್ಧ ಶತಕ

ಅವಿಷ್ಕ, ಅಸಲಂಕ ಅರ್ಧ ಶತಕ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ, ಅವಿಷ್ಕ ಫೆರ್ನಾಂಡೋ 50, ಮಿನೋದ್ ಭಾನುಕಾ 36, ಧನಂಜಯ ಡೆ ಸಿಲ್ವಾ 32, ಚರಿತ್ ಅಸಲಂಕ 65, ದಶುನ್ ಶನಕಾ 16, ವನಿಂದು ಹಸರಂಗ 8, ಚಮಿಕ ಕರುಣರತ್ನೆ 44 ರನ್‌ನೊಂದಿಗೆ 50 ಓವರ್‌ಗೆ 9 ವಿಕೆಟ್ ಕಳೆದು 275 ರನ್ ಗಳಿಸಿತ್ತು.

ಚಾಹರ್, ಭುವಿ ಅಜೇಯ ಬ್ಯಾಟಿಂಗ್

ಚಾಹರ್, ಭುವಿ ಅಜೇಯ ಬ್ಯಾಟಿಂಗ್

ಗುರಿ ಬೆನ್ನಟ್ಟಿದ ಭಾರತದಿಂದ ಪೃಥ್ವಿ ಶಾ 13, ಶಿಖರ್ ಧವನ್ 29, ಮನೀಷ್ ಪಾಂಡೆ 37, ಸೂರ್ಯಕುಮಾರ್ ಯಾದವ್ 53 (44), ಕೃನಾಲ್ ಪಾಂಡ್ಯ 35, ದೀಪಕ್ ಚಾಹರ್ ಅಜೇಯ 69 (82), ಭುವನೇಶ್ವರ್ ಕುಮಾರ್ ಅಜೇಯ 19 ರನ್ ಸೇರಿಸಿದರು. ಭಾರತ 49.1 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 277 ರನ್ ಗಳಿಸಿತು.

ಚಾಹರ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ

ಚಾಹರ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ

ಶ್ರೀಲಂಕಾ ಇನ್ನಿಂಗ್ಸ್‌ನಲ್ಲಿ ಭಾರತದ ಭುವನೇಶ್ವರ್ ಕುಮಾರ್ 3, ದೀಪಕ್ ಚಾಹರ್ 2, ಯುಜುವೇಂದ್ರ ಚಾಹಲ್ 3 ವಿಕೆಟ್‌ ಪಡೆದರೆ, ಭಾರತದ ಇನ್ನಿಂಗ್ಸ್‌ನಲ್ಲಿ ಕಸುನ್ ರಜಿತ 1, ವನಿಂದು ಹಸರಂಗ 3, ಲಕ್ಷನ್ ಸಂದಕನ್ 1, ದಸುನ್ ಶನಕ 1 ವಿಕೆಟ್‌ನೊಂದಿಗೆ ಗಮನ ಸೆಳೆದರು. ಆಲ್ ರೌಂಡರ್ ಆಟ ನೀಡಿದ ದೀಪಕ್ ಚಾಹರ್ ಪಂದ್ಯಶ್ರೇಷ್ಠರೆನಿಸಿದರು.

Story first published: Wednesday, July 21, 2021, 9:57 [IST]
Other articles published on Jul 21, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+