ಶ್ರೀಲಂಕಾ ಪ್ರವಾಸ ಕೈಗೊಂಡಿರುವ ಪಾಕಿಸ್ತಾನ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಿದೆ. ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಆತಿಥೆಯ ಶ್ರೀಲಂಕಾ ಬೌಲಿಂಗ್‌ನಲ್ಲಿ ಆರಂಭಿಕ ಯಶಸ್ಸು ಸಾಧಿಸಿದ್ದರೂ ನಂತರ ಪಾಕಿಸ್ತಾನ ತಿರುಗಿ ಬಿದ್ದಿದ್ದು ಉತ್ತಮ ಮೊತ್ತದತ್ತ ಹೆಜ್ಜೆಯಿಟ್ಟಿದೆ. ಮೂರನೇ ದಿನದಾಟದಲ್ಲಿ ಪಾಕಿಸ್ತಾನ ಶ್ರೀಲಂಕಾ ವಿರುದ್ಧ ಮುನ್ನಡೆ ಸಾಧಿಸುವ ಗುರಿಯೊಂದಿಗೆ ಕಣಕ್ಕಿಳಿಯುತ್ತಿರುವುದು ಸ್ಪಷ್ಟ.
ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ ಪರವಾಗಿ ಧನಂಜಯ ಡಿಸಿಲ್ವ ಭರ್ಜರಿ ಶತಕ ಸಿಡಿಸಿ ಅಬ್ಬರಿಸಿದರು. ಇನ್ನು ಏಂಜಲೋ ಮ್ಯಾಥ್ಯೂಸ್ ಕೂಡ ಅರ್ಧ ಶತಕದ ಕೊಡುಗೆ ನೀಡಿದ್ದಾರೆ. ಇದರ ಪರಿಣಾಮವಾಗಿ ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ 312 ರನ್‌ಗಳನ್ನು ಗಳಿಸಿ ಆಲೌಟ್ ಆಗಿತ್ತು.

ಲೈವ್ ಸ್ಕೋರ್ ಹೀಗಿದೆ
ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ಆರಂಬಿಕ ಹಿನ್ನಡೆ ಅನುಭವಿಸಿತು. ತಂಡದ ಮೊತ್ತ 101 ಆಗುವಷ್ಟರಲ್ಲಿ ಪ್ರಮುಖ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು ಪಾಕಿಸ್ತಾನ. ಆದರೆ ಅದಾದ ಬಳಿಕ ಸೌದ್ ಶಕೀಲ್ ಹಾಗೂ ಅಘಾ ಸಲ್ಮಾನ್ ಅದ್ಭುತ ಜೊತೆಯಾಟ ನೀಡುವ ಮೂಲಕ ಗಮನಸೆಳೆದಿದ್ದಾರೆ. ಇಬ್ಬರು ಕೂಡ ಅರ್ಧ ಶತಕ ಸಿಡಿಸಿದ್ದು ಮೂರನೇ ದಿನ ಬ್ಯಾಟಿಂಗ್ ಮುಂದಿವರಿಸಿದ್ದಾರೆ.
ಶ್ರೀಲಂಕಾ ಆಡುವ ಬಳಗ: ದಿಮುತ್ ಕರುಣಾರತ್ನೆ (ನಾಯಕ), ನಿಶಾನ್ ಮದುಷ್ಕಾ, ಕುಸಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ದಿನೇಶ್ ಚಾಂಡಿಮಲ್, ಸದೀರ ಸಮರವಿಕ್ರಮ (ವಿಕೆಟ್ ಕೀಪರ್), ರಮೇಶ್ ಮೆಂಡಿಸ್, ಪ್ರಭಾತ್ ಜಯಸೂರ್ಯ, ವಿಶ್ವ ಫೆರ್ನಾಂಡೋ, ಕಸುನ್ ರಜಿತ
ಬೆಂಚ್: ಪಾತುಂ ನಿಸ್ಸಾಂಕ, ಕಾಮಿಂದು ಮೆಂಡಿಸ್, ಪ್ರವೀಣ್ ಜಯವಿಕ್ರಮ, ದಿಲ್ಶನ್ ಮಧುಶಂಕ, ಲಕ್ಷಿತಾ ಮಾನಸಿಂಗ್
ಪಾಕಿಸ್ತಾನ ಆಡುವ ಬಳಗ: ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಶಾನ್ ಮಸೂದ್, ಬಾಬರ್ ಅಜಮ್ (ನಾಯಕ), ಸೌದ್ ಶಕೀಲ್, ಸರ್ಫರಾಜ್ ಅಹ್ಮದ್ (ವಿಕೆಟ್ ಕೀಫರ್), ಅಘಾ ಸಲ್ಮಾನ್, ನೌಮನ್ ಅಲಿ, ಅಬ್ರಾರ್ ಅಹ್ಮದ್, ಶಾಹೀನ್ ಅಫ್ರಿದಿ, ನಸೀಮ್ ಶಾ
ಬೆಂಚ್: ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ಹುರೈರಾ, ಮೊಹಮ್ಮದ್ ನವಾಜ್, ಅಮೀರ್ ಜಮಾಲ್, ಹಸನ್ ಅಲಿ