For Quick Alerts
ALLOW NOTIFICATIONS  
For Daily Alerts
 

SL vs Pak 1st Test: ಗೆಲುವಿನ ಮೇಲೆ ಪಾಕಿಸ್ತಾನ ಕಣ್ಣು: ಅಂತಿಮ ದಿನದಾಟದ Live ಸ್ಕೋರ್

ಶ್ರೀಲಂಕಾ ಹಾಗೂ ಪಾಕಿಸ್ತಾನ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಕೊನೆಯ ದಿನಕ್ಕೆ ಕಾಲಿಟ್ಟಿದೆ. ಈ ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಪಂದ್ಯದಲ್ಲಿ ಪಾಕಿಸ್ತಾನ ಗೆಲುವಿನ ಸನಿಹಕ್ಕೆ ತಲುಪಿದ್ದು ಶ್ರೀಲಂಕಾ ಬೌಲರ್‌ಗಳು ಕೊನೆಯ ದಿನದಾಟದಲ್ಲಿ ಮ್ಯಾಜಿಕ್ ಮಾಡುವ ವಿಶ್ವಾಸದಲ್ಲಿದ್ದಾರೆ. ಪಾಕಿಸ್ತಾನ ಬಹುತೇಕ ಗೆಲುವಿನ ಅಂಚಿನಲ್ಲಿದ್ದು ಆತಿಥೆಯ ಲಂಕಾ ತಿರುಗಿ ಬೀಳಲಿದೆಯಾ ಎಂಬುದು ಕುತೂಹಲ ಮೂಡಿಸಿದೆ.

ನಾಲ್ಕನೇ ದಿನದಾಟದಲ್ಲಿ ಶ್ರೀಲಂಕಾದ ಬ್ಯಾಟಿಂಗ್ ವಿಭಾಗದ ವಿರುದ್ಧ ಪಾಕಿಸ್ತಾನದ ಬೌಲಿಂಗ್ ಪಡೆ ಯಶಸ್ಸು ಸಾಧಿಸಿತ್ತು. ಹೀಗಾಗಿ ಪಾಕಿಸ್ತಾನ ಅಂತಿಮ ಇನ್ನಿಂಗ್ಸ್‌ನಲ್ಲಿ ಗೆಲ್ಲಲು ಸುಲಭ ಸವಾಲು ಪಡೆದುಕೊಂಡಿದೆ. ಆದರೆ ಆರಂಭದಲ್ಲಿಯೇ ಪಾಕ್‌ನ ಮೂರು ವಿಕೆಟ್‌ಗಳನ್ನು ಕಬಳಿಸುವಲ್ಲಿ ಲಂಕಾ ಪಡೆ ಯಶಸ್ವಿಯಾದ ಕಾರಣ ಕೊನೆಯ ದಿನದಾಟದ ಕುತೂಹಲ ಮೂಡಿಸಿದೆ.

Sri Lanka vs Pakistan, 1st Test: Pakistan eye on victory; 5th day Live score

ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ ತಂಡ 461 ರನ್‌ಗಳನ್ನು ಗಳಿಸಿ ಆಲೌಟ್ ಆಗಿತ್ತು. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 149 ರನ್‌ಗಳ ಮುನ್ನಡೆಯನ್ನು ಪಡೆದುಕೊಂಡಿತ್ತು. ನಂತರ ಬ್ಯಾಟಿಂಗ್ ನಡೆಸಿರುವ ಶ್ರೀಲಂಕಾ ಎರಡನೇ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡಿತು. ಧನಂಜಯ ಡಿಸಿಲ್ವ 82 ರನ್‌ಗಳಿಸಿದ್ದರೆ ನಿಶನ್ ಮಧುಶಂಕ 52 ರನ್‌ಗಳ ಕೊಡುಗೆ ನೀಡಿದ್ದು ಹೊರತುಪಡಿಸಿದರೆ ಉಳಿದ ಬ್ಯಾಟರ್‌ಗಳು ನಿರಾಸೆ ಮೂಡಿಸಿದರು. ಈ ಕಾರಣದಿಂದಾಗಿ ಶ್ರೀಲಂಕಾ 279 ರನ್‌ಗಳನ್ನು ಮಾತ್ರವೇ ಗಳಿಸಲು ಶಕ್ತವಾಯಿತು.

Live ಸ್ಕೋರ್ ಹೀಗಿದೆ

1
57729

ಶ್ರೀಲಂಕಾ ತಂಡವನ್ನು ಈ ಮೊತ್ತಕ್ಕೆ ಆಲೌಟ್ ಮಾಡಿದ ಕಾರಣ ಪಾಕಿಸ್ತಾನ ಎರಡನೇ ಇನ್ನಿಂಗ್ಸ್‌ನಲ್ಲಿ ಪಂದ್ಯವನ್ನು ಗೆಲ್ಲಲು 131 ರನ್‌ಗಳ ಸುಲಭ ಸವಾಲನ್ನು ಪಡೆದುಕೊಂಡಿದೆ. ಆದರೆ ಈ ಮೊತ್ತವನ್ನು ಬೆನ್ನಟ್ಟಿರುವ ಪಾಕಿಸ್ತಾನ ತಂಡ ಕೂಡ ಆರಂಭಿಕ ಆಘಾತವನ್ನು ಅನುಭವಿಸಿದ್ದು ನಾಲ್ಕನೇ ದಿನದಾಟದ ಅಂತ್ಯದಲ್ಲಿ 48 ರನ್‌ಗಳನ್ನು ಗಳಿಸಿ 3 ವಿಕೆಟ್ ಕಳೆದುಕೊಂಡಿದೆ. ಹೀಗಾಗಿ ಕೊನೆಯ ದಿನ ಭಾರೀ ಕುತೂಹಲ ಮೂಡಿಸಿದೆ.

ಗುರುವಾರ ಪಂದ್ಯದ ಕೊನೆಯ ದಿನದಾಟವಾಗಿದ್ದು ಪಾಕಿಸ್ತಾನ ತಂಡಕ್ಕೆ ಗೆಲ್ಲಲು ಇನ್ನು ಕೇವಲ 83 ರನ್‌ಗಳ ಅವಶ್ಯಕತೆಯಿದೆ. ಮತ್ತೊಂದೆಡೆ ಶ್ರೀಲಂಕಾ ಕೂಡ ಗೆಲುವಿಗಾಗಿ ಹೋರಾಟ ಮುಂದುವರಿಸಿದ್ದು 7 ವಿಕೆಟ್‌ಗಳನ್ನು ಕಬಳಿಸುವ ಸವಾಲು ಹೊಂದಿದೆ. ಹೀಗಾಗಿ ಕೊನೆಯ ದಿನ ಲಂಕಾ ಪಡೆಯ ಬೌಲರ್‌ಗಳ ಮ್ಯಾಜಿಕ್ ನಡೆಯುತ್ತಾ ಅಥವಾ ಪಾಕ್ ಪಡೆ ಸುಲಭ ಗೆಲುವು ಸಾಧಿಸಲಿದೆಯಾ ಎಂಬ ಕುತೂಹಲ ಮೂಡಿಸಿದೆ.

ಶ್ರೀಲಂಕಾ ಆಡುವ ಬಳಗ: ದಿಮುತ್ ಕರುಣಾರತ್ನೆ (ನಾಯಕ), ನಿಶಾನ್ ಮದುಷ್ಕಾ, ಕುಸಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ದಿನೇಶ್ ಚಾಂಡಿಮಲ್, ಸದೀರ ಸಮರವಿಕ್ರಮ (ವಿಕೆಟ್ ಕೀಪರ್), ರಮೇಶ್ ಮೆಂಡಿಸ್, ಪ್ರಭಾತ್ ಜಯಸೂರ್ಯ, ವಿಶ್ವ ಫೆರ್ನಾಂಡೋ, ಕಸುನ್ ರಜಿತ
ಬೆಂಚ್: ಪಾತುಂ ನಿಸ್ಸಾಂಕ, ಕಮಿಂದು ಮೆಂಡಿಸ್, ಪ್ರವೀಣ್ ಜಯವಿಕ್ರಮ, ದಿಲ್ಶನ್ ಮಧುಶಂಕ, ಲಕ್ಷಿತಾ ಮಾನಸಿಂಗ್

ಪಾಕಿಸ್ತಾನ ಆಡುವ ಬಳಗ: ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಶಾನ್ ಮಸೂದ್, ಬಾಬರ್ ಅಜಮ್ (ನಾಯಕ), ಸೌದ್ ಶಕೀಲ್, ಸರ್ಫರಾಜ್ ಅಹ್ಮದ್ (ವಿಕೆಟ್ ಕೀಫರ್), ಅಘಾ ಸಲ್ಮಾನ್, ನೌಮನ್ ಅಲಿ, ಅಬ್ರಾರ್ ಅಹ್ಮದ್, ಶಾಹೀನ್ ಅಫ್ರಿದಿ, ನಸೀಮ್ ಶಾ
ಬೆಂಚ್: ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ಹುರೈರಾ, ಮೊಹಮ್ಮದ್ ನವಾಜ್, ಅಮೀರ್ ಜಮಾಲ್, ಹಸನ್ ಅಲಿ

Story first published: Thursday, July 20, 2023, 10:24 [IST]
Other articles published on Jul 20, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+