SL vs Pak, ಮೊದಲ ಟೆಸ್ಟ್: ಲಂಕಾ ವಿರುದ್ಧ ಪಾಕ್ ಭರ್ಜರಿ ಮೇಲುಗೈ: ಕುತೂಹಲ ಮೂಡಿಸಿದ 4ನೇ ದಿನದಾಟ: Live ಸ್ಕೋರ್
ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ತೀವ್ರ ಕುತೂಹಲ ಮೂಡಿಸಿದೆ. ಎರಡು ತಂಡಗಳು ಕೂಡ ಸಾಕಷ್ಟು ಪೈಪೋಟಿಯ ಪ್ರದರ್ಶನ ನೀಡುತ್ತಿದ್ದು ನಾಲ್ಕನೇ ದಿನದಾಟ ಕುತೂಹಲ ಕೆರಳಿಸಿದೆ. ಮೂರನೇ ದಿನ ಪಾಖಿಸ್ತಾನ ತಂಡ ಅಮೋಘ ಪ್ರದರ್ಶನ ನೀಡಿ ಮೊದಲ ಇನ್ನಿಂಗ್ಸ್‌ನಲ್ಲಿ ಭಾರೀ ಅಂತರದ ಮುನ್ನಡೆಯನ್ನು ಪಡೆದುಕೊಳ್ಳುವಲ್ಲಿ ಸಾಧ್ಯವಾಗಿದೆ. ಹೀಗಾಗಿ ಆತಿಥೇಯ ಶ್ರೀಲಂಕಾ ತಂಡ ಹಿನ್ನಡೆ ಕಾಣುವಂತಾಯಿತು.
ಎರಡನೇ ದಿನದಾಟದಲ್ಲಿ ಪಾಕಿಸ್ತಾನದ ವಿರುದ್ಧ ಶ್ರೀಲಂಕಾ ತಂಡ ಭರ್ಜರಿಯಾಗಿ ಮೇಲುಗೈ ಸಾಧಿಸಿತ್ತು. ಅದರಲ್ಲೂ ಒಂದು ಹಂತದಲ್ಲಿ ಪಾಕಿಸ್ತಾನ ತಂಡ 101 ಆಗುವಷ್ಟರಲ್ಲಿ ಪ್ರಮುಖ ಐದು ವಿಕೆಟ್‌ಗಳನ್ನು ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಆತಂಕಕ್ಕೆ ಒಳಗಾಗಿತ್ತು. ಆದರೆ ಈ ಹಂತದಲ್ಲಿ ಸೌದ್ ಶಕೀಲ್ ಹಾಗೂ ಅಘಾ ಸಲ್ಮಾನ್ ಬೃಹತ್ ಜೊತೆಯಾಟ ನೀಡುವ ಮೂಲಕ ತಂಡಕ್ಕೆ ಆಧಾರವಾದರು.

ಸೌದ್ ಶಕೀಲ್ ಹಾಗೂ ಅಘಾ ಸಲ್ಮಾನ್ ಜೋಡಿ ಶ್ರೀಲಂಕಾ ಬೌಲಿಂಗ್ ವಿಭಾಗಕ್ಕೆ ಭಾರೀ ಆಘಾತ ನೀಡಿದ್ದು 177 ರನ್‌ಗಳ ಜೊತೆಯಾಟ ನೀಡುವ ಲಂಕಾ ಪಡೆಯ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದರು. ಅಘಾ ಸಲ್ಮಾನ್ 83 ರನ್‌ಗಳಿಸಿ ವಿಕೆಟ್ ಕಳೆದುಕೊಂಡರೆ ಸೌದ್ ಶಕೀಲ್ ಮೂರನೇ ದಿನದಾಟದಲ್ಲಿ ಸಂಪೂರ್ಣವಾಗಿ ಆಡಿ ಬೃಹತ್ ಮೊತ್ತಕ್ಕೆ ಕಾರಣವಾದರು. 361 ಎಸೆತಗಳನ್ನು ಎದುರಿಸಿದ ಅವರು ಭರ್ಜರಿ ದ್ವಿಶತಕ ಸಿಡಿಸಿ ಪಾಕಿಸ್ತಾನ ತಂಡಕ್ಕೆ ಆಸರೆಯಾಗಿದ್ದಾರೆ.
ಈ ಪಂದ್ಯದಲ್ಲಿ ಪಾಕಿಸ್ತಾನ ತಂಡ 461 ರನ್‌ಗಳನ್ನು ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 149 ರನ್‌ಗಳ ಮುನ್ನಡೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಆತಿಥೇಯ ಶ್ರೀಲಂಕಾ ವಿರುದ್ಧ ಈ ಮುನ್ನಡೆಯನ್ನು ಪಡೆದುಕೊಂಡಿರುವ ಪಾಕಿಸ್ತಾನ ತಂಡ ಆತ್ಮವಿಶ್ವಾಸದಿಂದಿದ್ದು ಪಂದ್ಯದಲ್ಲಿ ಹಿಡಿತ ಮುಂದುವರಿಸುವ ವಿಶ್ವಾಸದಲ್ಲಿದೆ.
ಇನ್ನು ಶ್ರೀಲಂಕಾ ತಂಡ ಎರಡನೇ ಇನ್ನಿಂಗ್ಸ್‌ನ ಬ್ಯಾಟಿಂಗ್ ಆರಂಭಿಸಿದ್ದು ಮೂರನೇ ದಿನದಾಟದಲ್ಲಿ 14 ರನ್‌ಗಳಿಸಿದಲ್ಲಿದ್ದ ನಾಲ್ಕನೇ ದಿನದಾಟವನ್ನು ಆರಂಭಿಸಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನದ ಸವಾಲನ್ನು ಶ್ರೀಲಂಕಾ ಬ್ಯಾಟರ್‌ಗಳು ಯಾವ ರೀತಿ ಎದುರಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಶ್ರೀಲಂಕಾ ಆಡುವ ಬಳಗ: ದಿಮುತ್ ಕರುಣಾರತ್ನೆ (ನಾಯಕ), ನಿಶಾನ್ ಮದುಷ್ಕಾ, ಕುಸಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ದಿನೇಶ್ ಚಾಂಡಿಮಲ್, ಸದೀರ ಸಮರವಿಕ್ರಮ (ವಿಕೆಟ್ ಕೀಪರ್), ರಮೇಶ್ ಮೆಂಡಿಸ್, ಪ್ರಭಾತ್ ಜಯಸೂರ್ಯ, ವಿಶ್ವ ಫೆರ್ನಾಂಡೋ, ಕಸುನ್ ರಜಿತ
ಬೆಂಚ್: ಪಾತುಂ ನಿಸ್ಸಾಂಕ, ಕಾಮಿಂದು ಮೆಂಡಿಸ್, ಪ್ರವೀಣ್ ಜಯವಿಕ್ರಮ, ದಿಲ್ಶನ್ ಮಧುಶಂಕ, ಲಕ್ಷಿತಾ ಮಾನಸಿಂಗ್
ಪಾಕಿಸ್ತಾನ ಆಡುವ ಬಳಗ: ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಶಾನ್ ಮಸೂದ್, ಬಾಬರ್ ಅಜಮ್ (ನಾಯಕ), ಸೌದ್ ಶಕೀಲ್, ಸರ್ಫರಾಜ್ ಅಹ್ಮದ್ (ವಿಕೆಟ್ ಕೀಫರ್), ಅಘಾ ಸಲ್ಮಾನ್, ನೌಮನ್ ಅಲಿ, ಅಬ್ರಾರ್ ಅಹ್ಮದ್, ಶಾಹೀನ್ ಅಫ್ರಿದಿ, ನಸೀಮ್ ಶಾ
ಬೆಂಚ್: ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ಹುರೈರಾ, ಮೊಹಮ್ಮದ್ ನವಾಜ್, ಅಮೀರ್ ಜಮಾಲ್, ಹಸನ್ ಅಲಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications