ಕಿಂಗ್, ರಸೆಲ್ ಸ್ಫೋಟಕ ಬ್ಯಾಟಿಂಗ್: ಶ್ರೀಲಂಕಾ ಮಣಿಸಿದ ವೆಸ್ಟ್ ಇಂಡೀಸ್

ಪಲ್ಲೆಕೆಲೆ, ಮಾರ್ಚ್ 6: ಬ್ರ್ಯಾಂಡನ್ ಕಿಂಗ್, ಶಿಮ್ರನ್ ಹೆಟ್ಮೈಯರ್ ಮತ್ತು ಆ್ಯಂಡ್ರೆ ರಸೆಲ್ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ವಿರುದ್ಧದ ಎರಡನೇ ಮತ್ತು ಕೊನೆಯ ಟಿ20 ಪಂದ್ಯದಲ್ಲಿ ಕೀರನ್ ಪೊಲಾರ್ಡ್ ನಾಯಕತ್ವದ ಕೆರಿಬಿಯನ್ ತಂಡ 7 ವಿಕೆಟ್ ಸುಲಭ ಜಯ ಗಳಿಸಿದೆ. ಈ ಗೆಲುವಿನೊಂದಿಗೆ ವಿಂಡೀಸ್, 2 ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್‌ಸ್ವೀಪ್‌ಗೊಳಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಶ್ರೀಲಂಕಾ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಕುಸಾಲ್ ಪೆರೆರಾ 15, ಶೆಹನ್ ಜಯಸೂರ್ಯ 16, ಕುಸಾಲ್ ಮೆಂಡಿಸ್ 11, ಏಂಜೆಲೊ ಮ್ಯಾಥ್ಯೂಸ್ 23, ದಸುನ್ ಶನಕಾ 31, ತಿಸರ ಪೆರೆರಾ 21 ರನ್ ಸೇರ್ಪಡೆಯೊಂದಿಗೆ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದು 155 ರನ್ ಮಾಡಿತು.
ಗುರಿ ಬೆಂಬತ್ತಿದ ವೆಸ್ಟ್ ಇಂಡೀಸ್ ತಂಡದಿಂದ ಬ್ರ್ಯಾಂಡನ್ ಕಿಂಗ್ 43 (21 ಎಸೆತ), ಶಿಮ್ರನ್ ಹೆಟ್ಮೈಯೆರ್ ಅಜೇಯ 43, ಆ್ಯಂಡ್ರೆ ರಸೆಲ್ ಅಜೇಯ 40 (14 ಎಸೆತ) ರನ್ ಕೊಡುಗೆಯಿತ್ತರು. ಕೆರಿಬಿಯನ್ನರು 17 ಓವರ್‌ಗೆ 3 ವಿಕೆಟ್ ನಷ್ಟದಲ್ಲಿ 158 ರನ್ ಪೇರಿಸಿದರು.
ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಆ್ಯಂಡ್ರೆ ರಸೆಲ್‌ಗೆ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಎರಡೂ ಪ್ರಶಸ್ತಿಗಳು ಲಭಿಸಿದವು. ಟಿ20 ಸರಣಿಗೂ ಮುನ್ನ ನಡೆದಿದ್ದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆತಿಥೇಯ ಶ್ರೀಲಂಕಾ ತಂಡ 3-0ಯ ಗೆಲುವು ದಾಖಲಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications