For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ ಮಾಲೀಕರ ಚಿತ್ತ ಕದ್ದ ಶ್ರೀಲಂಕಾ ಬ್ಯಾಟರ್‌: ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕದ ಸಾಧನೆ

ಶ್ರೀಲಂಕಾ ಕ್ರಿಕೆಟ್‌ ತಂಡ ಅದೆಷ್ಟೋ ಸ್ಟಾರ್ ಆಟಗಾರರಿಗೆ ತನ್ನ ತಂಡದಲ್ಲಿ ಸ್ಥಾನ ನೀಡಿದೆ. ಈಗ ಇದೇ ತಂಡದಲ್ಲಿರುವ ಸ್ಟಾರ್ ಯುವ ಆಟಗಾರ ವಿಶ್ವ ಕ್ರಿಕೆಟ್‌ನಲ್ಲಿ ಭಾರೀ ಸದ್ದು ಮಾಡಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಮೊದಲ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಪತುಮ್ ನಿಸ್ಸಂಕಾ ದ್ವಿಶಕತದ ಸಾಧನೆ ಮಾಡಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಶ್ರೀಲಂಕಾದ ಮೊದಲ ಬ್ಯಾಟರ್‌ ಎಂಬ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ.

ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಇಂದು ಅಂದರೆ ಫೆಬ್ರವರಿ 9 ರಂದು ನಡೆಯಿತು. ಈ ಪಂದ್ಯದಲ್ಲಿ ಉಭಯ ತಂಡಗಳು ಒಟ್ಟು 720 ರನ್ ಗಳಿಸಿದ್ದವು. ಪತುಮ್ ನಿಸ್ಸಂಕಾ ದ್ವಿಶತಕ ಹಾಗೂ ಇಬ್ಬರು ಆಟಗಾರರು ಶತಕ ಬಾರಿಸಿದರು. ಆತಿಥೇಯ ಶ್ರೀಲಂಕಾ ಅಂತಿಮವಾಗಿ ಈ ಪಂದ್ಯವನ್ನು 42 ರನ್ ಗಳಿಂದ ಗೆದ್ದಿತು.

Sri Lankan batsman who stole the heart of IPL owners: Double century achievement in ODI cricket

ಟಾಸ್ ಗೆದ್ದ ಅಫ್ಘಾನಿಸ್ತಾನ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡುವ ಮೂಲಕ ಸಂಚಲನ ಮೂಡಿಸಿತು. 25ರ ಹರೆಯದ ಯುವ ಆರಂಭಿಕ ಆಟಗಾರ ಪಾತುಮ್ ನಿಸ್ಸಾಂಕ ಇತಿಹಾಸ ನಿರ್ಮಿಸಿದರು. ಭರ್ಜರಿ ಬ್ಯಾಟಿಂಗ್ ನಡೆಸಿ ದ್ವಿಶತಕ ಬಾರಿಸಿದರು. ನಿಸ್ಸಾಂಕ 20 ಬೌಂಡರಿ ಮತ್ತು 8 ಸಿಕ್ಸರ್‌ಗಳ ಸಹಿತ 210 ರನ್‌ಗಳ ಅಜೇಯ ಇನ್ನಿಂಗ್ಸ್‌ಗಳನ್ನು ಆಡಿದರು. ಈ ಇನ್ನಿಂಗ್ಸ್‌ನೊಂದಿಗೆ ನಿಸ್ಸಾಂಕ ಶ್ರೀಲಂಕಾ ಪರ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಲ್ಲದೇ ಅವಿಷ್ಕಾ ಫೆರ್ನಾಂಡೊ ಕೂಡ 88 ರನ್ ಗಳಿಸಿದರು.

50 ಓವರ್‌ಗಳಲ್ಲಿ ಶ್ರೀಲಂಕಾ 3 ವಿಕೆಟ್‌ಗೆ 381 ರನ್ ಕಲೆ ಹಾಕಿತು. ಅಫ್ಘಾನಿಸ್ತಾನಕ್ಕೆ 382 ರನ್‌ಗಳ ದೊಡ್ಡ ಗುರಿ ನೀಡಿತು.

ಇನ್ನೂ 210 ರನ್​ಗಳಿಸಿದ ಪಥುನ್ ನಿಸಾಂಕ ಶ್ರೀಲಂಕಾ ಪರ ಏಕದಿನ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್​ಗಳಿಸಿದ ಶ್ರೀಲಂಕಾದ ಬ್ಯಾಟರ್​ ಎನಿಸಿಕೊಂಡರು. ದಿಗ್ಗಜ ಸನತ್ ಜಯಸೂರ್ಯ 23 ವರ್ಷಗಳ ಹಿಂದೆ ಭಾರತದ ವಿರುದ್ಧ 189 ರನ್​ಗಳಿಸಿದ್ದ ದಾಖಲೆಯನ್ನು ಇವರು ಅಳಿಸಿ ಹಾಕಿದರು.

Sri Lankan batsman who stole the heart of IPL owners: Double century achievement in ODI cricket

ಏಕದಿನ ಕ್ರಿಕೆಟ್​ನಲ್ಲಿ ವೇಗವಾಗಿ ದ್ವಿಶತಕ ಸಿಡಿಸಿದ ವಿಶ್ವದಾಖಲೆ ಭಾರತದ ಯುವ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಅವರ ಹೆಸರಿನಲ್ಲಿದೆ. ಕಿಶನ್ ಬಾಂಗ್ಲಾದೇಶದ ವಿರುದ್ಧ ಕೇವಲ 126 ಎಸೆತಗಳಲ್ಲಿ ಡಬಲ್ ಸೆಂಚುರಿ ಸಿಡಿಸಿದ್ದರು. ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಗ್ಲೇನ್ ಮ್ಯಾಕ್ಸ್​ವೆಲ್ ಇದ್ದು, ಅವರು 128 ಎಸೆತಗಳಲ್ಲಿ ದ್ವಿಶತಕ ಸಾಧನೆ ಮಾಡಿದ್ದಾರೆ. ಇದೀಗ ಮೂರನೇ ಸ್ಥಾನದಲ್ಲಿ ನಿಸಾಂಕ ಇದ್ದಾರೆ. ಬಿರುಗಾಳಿಯ ರೀತಿ ಬ್ಯಾಟಿಂಗ್ ಮಾಡಿದ ನಿಸಾಂಕ ಮೇಲೆ ಈಗ ಎಲ್ಲರ ಚಿತ್ತ ನೆಟ್ಟಿದೆ.

382 ರನ್‌ಗಳ ದೊಡ್ಡ ಗುರಿಯನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ 27 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಕಂಷ್ಟದಲ್ಲಿತ್ತು. ಇದಾದ ಬಳಿಕ ಗುಲ್ಬದಿನ್ ನೈಬ್ ರೂಪದಲ್ಲಿ 55 ರನ್‌ಗಳಾಗುವಷ್ಟರಲ್ಲಿ ಐದನೇ ವಿಕೆಟ್ ಪತನವಾಯಿತು. ಅಲ್ಲಿಂದ ಮೊಹಮ್ಮದ್ ನಬಿ ಮತ್ತು ಅಜ್ಮತುಲ್ಲಾ ಉಮರ್ಜಾಯ್ ಭರ್ಜರಿ ಜೊತೆಯಾಟವನ್ನುಬ ನೀಡಿದರುಯ. ಉಭಯ ಆಟಗಾರರು ಶ್ರೀಲಂಕಾ ಬೌಲರ್‌ಗಳನ್ನು ಥಳಿಸಿದರು. ಕೊನೆಯವರೆಗೂ ಗೆಲುವಿನ ಹುಮ್ಮಸ್ಸನ್ನು ಬಿಡಲಿಲ್ಲ. ನಬಿ-ಉಮರ್ಜಾಯ್ ನಡುವೆ 242 ರನ್‌ಗಳ ಜೊತೆಯಾಟ ಮೂಡಿಬಂದಿತು.

ಉಮರ್ಜಾಯ್ 115 ಎಸೆತಗಳಲ್ಲಿ 13 ಬೌಂಡರಿ ಹಾಗೂ 6 ಸಿಕ್ಸರ್‌ಗಳ ನೆರವಿನಿಂದ 149 ರನ್ ಗಳಿಸಿ ಕೊನೆಯವರೆಗೂ ಅಜೇಯರಾಗಿ ಉಳಿದರು. ಮತ್ತೊಂದೆಡೆ, ಮೊಹಮ್ಮದ್ ನಬಿ 130 ಎಸೆತಗಳಲ್ಲಿ 136 ರನ್ ಗಳಿಸಿ ಔಟಾದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 15 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಹೊಡೆದರು. ಇಬ್ಬರೂ ಶತಕ ಬಾರಿಸಿದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಅಫ್ಘಾನಿಸ್ತಾನ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 339 ರನ್ ಗಳಿಸಿ 42 ರನ್‌ಗಳಿಂದ ಸೋಲನುಭವಿಸಿತು.

Story first published: Saturday, February 10, 2024, 8:05 [IST]
Other articles published on Feb 10, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+