ಐಪಿಎಲ್ 2020: ರೈನಾ ಅಲಭ್ಯತೆಯ ಹೊರತಾಗಿಯೂ ಸಿಎಸ್‌ಕೆ ಅದ್ಭುತ ಪ್ರದರ್ಶನ: ಶ್ರೀಕಾಂತ್

ಮೂರು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಐಪಿಎಲ್ ಆರಂಭಕ್ಕೂ ಮುನ್ನವೇ ಹಿನ್ನಡೆಯನ್ನು ಕಂಡಿದೆ. ತಂಡದ ಪ್ರಮುಖ ಬ್ಯಾಟ್ಸ್‌ಮನ್ ಉಪ ನಾಯಕ ಸುರೇಶ್ ರೈನಾ ಈ ಬಾರಿಯ ಆವೃತ್ತಿಯಿಂದ ಹೊರಗುಳಿದಿದ್ದಾರೆ. ಆದರೆ ಇದು ತಂಡದ ಪ್ರದರ್ಶನಕ್ಕೆ ಯಾವುದೇ ಅಡ್ಡಿಯಾಗಲಾರದು. ಟೂರ್ನಿಯ ಟಾಪ್ 4 ತಂಡಗಳಲ್ಲಿ ಸಿಎಸ್‌ಕೆ ಕೂಡ ಇರಲಿದೆ ಎಂದು ಕ್ರಿಸ್ ಶ್ರೀಕಾಂತ್ ಹೇಳಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಖಂಡಿತವಾಗಿಯೂ ಸುರೇಶ್ ರೈನಾ ಅವರ ಗೈರು ಕಾಡಲಿದೆ. ಆದರೆ ಎಂಎಸ್ ಧೋನಿ ಇಂತಾ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಲು ಶಕ್ತರಾಗಿದ್ದಾರೆ. ಖಂಡಿತವಾಗಿಯೂ ಚೆನ್ನೈ ಸೂರ್ ಕಿಂಗ್ಸ್ ಮತ್ತೊಂದು ಬಾರಿ ಫ್ಲೇ ಆಫ್ ಹಂತಕ್ಕೆ ಏರುವಲ್ಲಿ ಯಶಸ್ವಿಯಾಗಲಿದೆ ಎಂದು ಕ್ರಿಸ್ ಶ್ರೀಕಾಂತ್ ಅಭಿಪ್ರಾಯವನ್ನು ವ್ಯಕ್ತಡಿಸಿದ್ದಾರೆ.
ಚೆನ್ನಯ ಸೂಪರ್ ಕಿಂಗ್ಸ್ ತಂಡ ಖಂಡಿತವಾಗಿಯೂ ಸುರೇಶ್ ರೈನಾ ಅವರನ್ನು ಮಿಸ್ ಮಾಡಿಕೊಳ್ಳಲಿದೆ. ಆಟಗಾರನಾಗಿ, ಬ್ಯಾಟ್ಸ್‌ಮನ್ ಆಗಿ, ಫೀಲ್ಡರ್ ಆಗಿ ಹಾಗೂ ಅರೆಕಾಲಿಕ ಬೌಲರ್ ಆಗಿ ಮತ್ತು ಉಪನಾಯಕನಾಗಿ ನಾಯಕ ಧೊನಿಗೆ ರೈನಾ ಯಾವಾಗಲೂ ಬೆಂಬಲವಾಗಿರುತ್ತಿದ್ದರು. ತಂಡಕ್ಕೆ ಅವರು ಸಾಕಷ್ಟು ಶಕ್ತಿಯನ್ನು ತುಂಬುತ್ತಿದ್ದರು ಎಂದು ಶ್ರಿಕಾಂತ್ ಹೇಳಿದ್ದಾರೆ.
ಹರ್ಭಜನ್ ಸಿಂಗ್ ಕೂಡ ಸಿಎಸ್‌ಕೆ ತಂಡಕ್ಕೆ ಮುಖ್ಯ ಅಸತ್ರವಾಗಿದ್ದರು. ಯುಎಇನಲ್ಲಿ ಸ್ಪಿನ್ ಬೌಲಿಂಗ್ ಪರಿಣಾಮಕಾರಿಯಾಗಿರುತ್ತದೆ. ಹರ್ಭಜನ್ ಸಿಂಗ್ ಅನುಭವ ತಂಡಕ್ಕೆ ಲಾಭವಾಗುತ್ತಿತ್ತು. ಚೆನ್ನೈ ತಂಡದ ಪರವಾಗಿ ಅದ್ಭುತವಾಗಿ ಪ್ರದರ್ಶನವನ್ನು ನೀಡಿದ್ದರು ಎಂದು ಶ್ರೀಕಾಂತ್ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಸುರೇಶ್ ರೈನಾ ಅಲಭ್ಯತೆ ಮುರಳಿ ವಿಜಯ್ ಪಾಲಿಗೆ ಸುವರ್ಣಾವಕಾಶವಾಗಿದೆ. ಐಪಿಎಲ್‌ನಲ್ಲಿ ಮತ್ತೆ ಕೆರಿಯರ್ ಮುನರಾರಂಭಿಸಲು ಇದು ಉತ್ತಮ ಸಂದರ್ಭವಾಗಿದೆ ಎಂದಿರುವ ಶ್ರೀಕಾಂತ್ ಶೇನ್ ವಾಟ್ಸನ್ ಜೊತೆಗೆ ಇನ್ನಿಂಗ್ಸ್ ಆರಂಭಿಸಲು ಮುರಳಿ ವಿಜಯ್ ಅತ್ಯುತ್ತಮ ಆಯ್ಕೆ ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications