Srilanka Central Contract 2022-23: A1 ಲಿಸ್ಟ್‌ನಲ್ಲಿ ನಾಲ್ವರು ಆಟಗಾರರು

ಶ್ರೀಲಂಕಾ ಕ್ರಿಕೆಟ್ (SLC) ಕೇಂದ್ರಿಯ ಗುತ್ತಿಗೆ ಆಟಗಾರರ ಪಟ್ಟಿಯನ್ನ ಬಿಡುಡೆ ಮಾಡಿದ್ದು, 2022-23ರ ವರ್ಷದಲ್ಲಿ 19 ಆಟಗಾರರನ್ನ ವಿವಿಧ ಹಂತದ ವರ್ಗಗಳಲ್ಲಿ ವಿಂಗಡಿಸಲಾಗಿದೆ.
ಶ್ರೀಲಂಕಾ ಕ್ರಿಕೆಟ್ ಸಿಇಒ ಆ್ಯಶ್ಲಿ ಡಿ ಸಿಲ್ವಾ ಪ್ರಕಾರ ಎಲ್ಲಾ ಕ್ರಿಕೆಟಿಗರು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ, ಕಳೆದ ವರ್ಷಕ್ಕಿಂತ ಭಿನ್ನವಾಗಿ ಆಟಗಾರರ ಆಯ್ಕೆ ಮಾಡಲಾಗಿದ್ದು, ಪ್ರದರ್ಶನ ಆಧಾರಿತ ಒಪ್ಪಂದವನ್ನು ನೀಡುವ ಬಗ್ಗೆ ಪ್ರಶ್ನೆ ಎತ್ತಿದ್ದರು. ಅದರ ಜೊತೆಗೆ, ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಫಿಟ್ನೆಸ್ ಮಟ್ಟಗಳಿಗೆ ಮಾನದಂಡವನ್ನು ಹೆಚ್ಚಿಸಿದೆ, ಅದನ್ನು ಕಳೆದ ವರ್ಷ ಸ್ವಾಗತಿಸಲಾಗಿಲ್ಲ.
ಕೇಂದ್ರಿಯ ಗುತ್ತಿಗೆ ಆಟಗಾರರ ವಿಚಾರಕ್ಕೆ ಬಂದ್ರೆ ಒಟ್ಟು ಐದು ವರ್ಗಗಳಾಗಿ ವಿಂಗಡಿಸಲಾಗಿದ್ದು, A1 ನಿಂದ C2ವರೆಗೆ ಆಟಗಾರರ ಗುತ್ತಿಗೆಯನ್ನ ವಿಂಗಡಿಸಲಾಗಿದೆ. ದೇಶೀಯ ಆಟಗಾರರಿಗೆ ಬೇರೆ ವಿಂಗಡಣೆ ಮಾಡಲಾಗಿದೆ.
ಅಂದಾಜಿಸಿದಂತೆ ನಿರೋಶನ್ ಡಿಕ್ವೆಲ್ಲ, ಧನುಷ್ ಗುಣತಿಲಕ ಮತ್ತು ಕುಸಾಲ್ ಮೆಂಡೀಸ್ C2 ಕ್ಯಾಟಗರಿಗೆ ಸೇರಿಸಲಾಗಿದೆ. ಹಲವು ತಿಂಗಳು ಕಾಲ ಬ್ಯಾನ್‌ಗೆ ಒಳಗಾಗಿದ್ದ ಈ ಆಟಗಾರರು ಕಳೆದ ವರ್ಷ ಇಂಗ್ಲೆಂಡ್ ಪ್ರವಾಸದಲ್ಲಿ ಬಯೋ ಬಬಲ್ ನಿಯಮಗಳನ್ನ ಉಲ್ಲಂಘಿಸಿದ್ದರು.
A1 ಕ್ಯಾಟಗರಿಯಲ್ಲಿ ದಿಮುತ್ ಕರುಣರತ್ನೆ, ಧನಂಜಯ ಡಿಸಿಲ್ವಾ, ಧಶ್ಮುತ ಚಮೀರ ಮತ್ತು ವಹಿಂದು ಹಸರಂಗ ಸ್ಥಾನ ಪಡೆದಿದ್ದಾರೆ. ಚಮೀರ ಮತ್ತು ಹಸರಂಗ ಮೂರು ಫಾರ್ಮೆಟ್‌ನಲ್ಲಿ ಶ್ರೀಲಂಕಾ ಪರ ಸ್ಥಾನ ಪಡೆದಿ್ದದಾರೆ.
ಶ್ರೀಲಂಕಾದ ಕೇಂದ್ರೀಯ ಗುತ್ತಿಗೆ ಆಟಗಾರರ ಪಟ್ಟಿ ಈ ಕೆಳಗಿದೆ
A1 - ದಿಮುತ್ ಕರುಣಾರತ್ನೆ, ಧನಂಜಯ ಡಿ ಸಿಲ್ವಾ, ದುಷ್ಮಂತ ಚಮೀರ, ಮತ್ತು ವನಿಂದು ಹಸರಂಗ.
B1 - ಪಾತುಮ್ ನಿಸ್ಸಾಂಕ, ಲಹಿರು ತಿರಿಮನ್ನೆ, ದಸುನ್ ಶನಕ, ದಿನೇಶ್ ಚಾಂಡಿಮಾಲ್, ಕುಸಾಲ್ ಪೆರೆರಾ, ಏಂಜೆಲೊ ಮ್ಯಾಥ್ಯೂಸ್.
B2 - ಲಸಿತ್ ಎಂಬುಲ್ದೇನಿಯ, ರಮೇಶ್ ಮೆಂಡಿಸ್, ಚರಿತ್ ಅಸಲಂಕ
C1 - ವಿಶ್ವ ಫೆರ್ನಾಂಡೋ, ಅವಿಷ್ಕಾ ಫರ್ನಾಂಡೋ, ಚಾಮಿಕಾ ಕರುಣಾರತ್ನೆ,
ದೇಶೀಯ ಆಟಗಾರರು - ಪ್ರವೀಣ್ ಜಯವಿಕ್ರಮ, ಓಷಾದ ಫೆರ್ನಾಂಡೋ, ಭಾನುಕಾ ರಾಜಪಕ್ಸೆ, ಲಕ್ಷಣ್ ಸಂಡಕನ್, ಮಹೇಶ್ ತೀಕ್ಷಣ, ನುವಾನ್ ಪ್ರದೀಪ್, ಬಿನೂರ ಫೆರ್ನಾಂಡೋ, ಲಹಿರು ಕುಮಾರ, ಮಿನೋದ್ ಭಾನುಕ, ಕಮಿಂದು ಮೆಂಡಿಸ್.
C2 - ನಿರೋಶನ್ ಡಿಕ್ವೆಲ್ಲಾ, ದನುಷ್ಕಾ ಗುಣತಿಲಕ, ಮತ್ತು ಕುಸಾಲ್ ಮೆಂಡಿಸ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications