Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ತಿಲಕ್ ವರ್ಮಾ ಶತಕದ ಅಬ್ಬರ: ಟೈಟಾನ್ಸ್‌ಗೆ 200 ರನ್‌ ಗುರಿ ನೀಡಿದ ಮುಂಬೈ

ಅಹಮದಾಬಾದ್: ಭರವಸೆಯ ಬ್ಯಾಟರ್‌ ತಿಲಕ್ ವರ್ಮಾ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ 19ನೇ ಆವೃತ್ತಿ ಐಪಿಎಲ್‌ನ 30ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕೆ 200 ರನ್‌ಗಳ ಗುರಿಯನ್ನು ನೀಡಿದೆ.

ಟಾಸ್‌ ಸೊತರೂ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕರಾಗಿ ಆಡುವ ಅವಕಾಶವನ್ನು ಪಡೆದ ಡ್ಯಾನಿಶ್ ಮಾಲೆವಾರ್ (2) ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ವಿಫಲರಾದರು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದ ವಿಕೆಟ್‌ ಕೀಪರ್ ಬ್ಯಾಟರ್ ಕ್ವಿಂಟನ್‌ ಡಿಕಾಕ್‌ ಅವರಿಗೆ ಕಗಿಸೊ ರಬಾಡ ಖೆಡ್ಡಾ ತೋಡಿದರು. ಇವರು 13 ರನ್‌ಗಳಿಗೆ ಆಟ ಮುಗಿಸಿದರು.

Tilak Varma

ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಅವಕಾಶವನ್ನು ಪಡೆದ ಸೂರ್ಯಕುಮಾರ್ ಯಾದವ್ ರನ್‌ ಮಹಲ್ ಕಟ್ಟಲಿಲ್ಲ. ಇವರು 15 ರನ್‌ ಬಾರಿಸಿ ಔಟ್ ಆದರು. ಈ ಮೂಲಕ 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಸೂರ್ಯಕುಮಾರ್ ಯಾದವ್ ಅವರ ಕಳಪೆ ಫಾರ್ಮ್‌ ಮುಂದುವರಿದಿದೆ. ಮುಂಬೈ ಇಂಡಿಯನ್ಸ್‌ ಪವರ್ ಪ್ಲೇನಲ್ಲಿ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು.

44 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನಮನ್‌ ಧೀರ್ ಹಾಗೂ ತಿಲಕ್ ವರ್ಮಾ ಜೋಡಿ ಆಧಾರವಾಯಿತು. ಈ ಜೋಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿತು. ಈ ಜೋಡಿ 40 ಎಸೆತಗಳಲ್ಲಿ 81 ರನ್‌ ಸಿಡಿಸಿತು. ಈ ಹಂತದಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಾಯದಿಂದ 45 ರನ್‌ ಬಾರಿಸಿ ಪ್ರಸಿದ್ಧ್ ಕೃಷ್ಣಾಗೆ ವಿಕೆಟ್‌ ಒಪ್ಪಿಸಿದರು. ನಾಯಕ ಹಾರ್ದಿಕ್ ಪಾಂಡ್ಯ ಮೊಹಮ್ಮದ್ ಸಿರಾಜ್ ಅವರು ಎಸೆದ ಗಂಟೆಗೆ 140 ಕಿಲೋ ಮೀಟರ್ ವೇಗದಲ್ಲಿ ಮಾಡಿದ ಚೆಂಡನ್ನು ಸಿಕ್ಸರ್ ಬಾರಿಸಲು ಹೋಗಿ ಗ್ಲೆನ್ ಫಿಲಿಪ್ಸ್‌ಗೆ ಕ್ಯಾಚ್ ನೀಡಿದರು.

ತಿಲಕ್ ಶತಕದ ಅಬ್ಬರ

ಒತ್ತಡದಲ್ಲಿದ್ದ ಮಧ್ಯಮ ಕ್ರಮಾಂಕದ ಆಟಗಾರ ತಿಲಕ್ ವರ್ಮಾ ತಮ್ಮ ಅನುಭವ ಬಳಿಸಿಕೊಂಡು ಬ್ಯಾಟ್ ಮಾಡಿದರು. ಇವರು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ತಂಡಕ್ಕೆ ಆಧಾರವಾದರು. ಇವರು ತಮ್ಮ ಐಪಿಎಲ್‌ ವೃತ್ತಿ ಜೀವನದ ಮೊದಲ ಶತಕ ಬಾರಿಸಿದರು. ಇವರು 45 ಎಸೆತಗಳಲ್ಲಿ 8 ಬೌಂಡರಿ, 7 ಸಿಕ್ಸರ್‌ ಸಹಾಯದಿಂದ ಅಜೇಯ 101 ಬಾರಿಸಿ ಅಬ್ಬರಿಸಿದರು. ಅಂತಿಮಾಗಿ ಮುಂಬೈ ಇಂಡಿಯನ್ಸ್‌ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 199 ರನ್‌ ಕಲೆ ಹಾಕಿತು.

Story first published: Monday, April 20, 2026, 21:28 [IST]
Other articles published on Apr 20, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+