For Quick Alerts
ALLOW NOTIFICATIONS  
For Daily Alerts
 

WI vs AUS Test: 7 ಬ್ಯಾಟರ್‌ 0 ಸಾಧನೆ, ವಿಂಡೀಸ್‌ 27 ರನ್‌ಗೆ ಆಲೌಟ್‌, ಬೇಡದ ದಾಖಲೆ

ಲಾರ್ಡ್ಸ್‌ನಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಮೂರನೇ ಟೆಸ್ಟ್‌ ರೋಚಕ ಅಂತ್ಯ ಕಂಡಿತು. ಇನ್ನು ಇತ್ತ ಕಿಂಗ್‌ಸ್ಟನ್‌ ಮೈದಾನದಲ್ಲಿ ನಡೆದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ಅಬ್ಬರಿಸಿದೆ. ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್‌ ಮಾರಕ ದಾಳಿಗೆ ವೆಸ್ಟ್‌ ಇಂಡೀಸ್‌ ಧರಾಶಾಹಿ ಆಗಿದೆ. ರನ್‌ಗಳಿಸಲು ಪರದಾಟ ನಡೆಸಿದ ವಿಂಡೀಸ್‌ ಕ್ಲೀನ್‌ ಸ್ವೀಪ್‌ ಸೋಲಿಗೆ ಬಲಿಯಾಗಿದೆ.

ಸೋಮವಾರ ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್‌ನಲ್ಲಿ 6 ವಿಕೆಟ್‌ ನಷ್ಟಕ್ಕೆ 99 ರನ್‌ಗಳಿಂದ ಆಟ ಮುಂದುವರೆಸಿ 121 ರನ್‌ಗಳಿಗೆ ಆಲೌಟ್ ಅಯಿತು. ಆಸೀಸ್‌ ಬ್ಯಾಟರ್‌ಗಳನ್ನು ಅಲ್ಜಾರಿ ಜೋಸೆಫ್‌ 5 ವಿಕೆಟ್‌ ಪಡೆದು ಮಿಂಚಿದರು. ಯುವ ವೇಗದ ಬೌಲರ್‌ ಶಮಾರ್‌ ಜೋಸೆಫ್‌ 4 ವಿಕೆಟ್‌ ಕಬಳಿಸಿದರು. ಈ ಮೂಲಕ ಆಸೀಸ್‌ ವಿಂಡೀಸ್‌ಗೆ 203 ರನ್‌ಗಳ ಗುರಿಯನ್ನು ನೀಡಿತು.

Starc s 6-Wicket Haul Sinks West Indies for 27 in Dominant Australian Test Win

ಗುರಿಯನ್ನು ಬೆನ್ನಟ್ಟಿದ ವಿಂಡೀಸ್‌ ತಂಡದ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ವಿಂಡೀಸ್‌ ತಂಡದ ಜಾನ್ ಕ್ಯಾಂಪ್ಬೆಲ್, ಕೆವ್ಲಾನ್ ಆಂಡರ್ಸನ್, ಬ್ರಾಂಡನ್ ಕಿಂಗ್, ರೋಸ್ಟನ್ ಚೇಸ್, ಶಮರ್ ಜೋಸೆಫ್, ಜೋಮೆಲ್ ವಾರಿಕನ್, ಜೇಡನ್ ಸೀಲ್ಸ್ ರನ್‌ ಬಾರಿಸಲೇ ಇಲ್ಲ. ಈ ಆಟಗಾರರು ಸೊನ್ನೆ ಸುತ್ತಿದರು. ವಿಂಡೀಸ್ ತಂಡಕ್ಕೆ ಆಸ್ಟ್ರೇಲಿಯಾದ ವೇಗದ ಬೌಲರ್‌ಗಳು ಕಾಟ ನೀಡಿದರು.

ಎರಡನೇ ಇನಿಂಗ್ಸ್‌ನಲ್ಲಿ ವಿಂಡೀಸ್ ಕೇವಲ 14.3 ಓವರ್‌ ಬ್ಯಾಟ್ ಮಾಡಿತು. ಈ ವೇಳೆ ಮಿಚೆಲ್‌ ಸ್ಟಾರ್ಕ್‌ ಅವರ ಬೆಂಕಿಯಂತೆ ಬರುತ್ತಿರುವ ಚೆಂಡಿಗೆ ಉತ್ತರಿಸಲು ಸ್ಟಾರ್ಕ್‌ ವಿಫಲರಾದರು. ಇವರು 7.3 ಓವರ್‌ಗಳಲ್ಲಿ 9 ರನ್‌ ನೀಡಿ 6 ವಿಕೆಟ್‌ ಕಬಳಿಸಿದರು. ಇನ್ನು ಸ್ಕಾಟ್ ಬೋಲ್ಯಾಂಡ್ ಸಹ 3 ವಿಕೆಟ್‌ ಪಡೆದರು. ಈ ಮೂಲಕ ಮಿಚೆಲ್‌ ಸ್ಟಾರ್ಕ್‌ ತಮ್ಮ ನೂರನೇ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ಮಿಂಚಿದರು.

7 ಬ್ಯಾಟರ್‌ಗಳು ಡಕೌಟ್

ವಿಂಡೀಸ್ ತಂಡದ 4 ಟಾಪ್ ಆರ್ಡರ್‌ ಬ್ಯಾಟರ್‌ಗಳು ಸೊನ್ನೆ ಸುತ್ತಿದರು. ವೆಸ್ಟ್ ಇಂಡೀಸ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಒಟ್ಟು 7 ಬ್ಯಾಟ್ಸ್‌ಮನ್‌ಗಳು ಡಕ್ ಔಟ್ ಆದರು. ಈ ರೀತಿಯಾಗಿ, ವೆಸ್ಟ್ ಇಂಡೀಸ್ ಟೆಸ್ಟ್‌ನ ಒಂದು ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸೊನ್ನೆ ಸುತ್ತಿದ ವಿಶ್ವ ದಾಖಲೆಯನ್ನು ಸಹ ಬರೆಯಿತು. ಇದಕ್ಕೂ ಮೊದಲು 6 ಆಟಗಾರರು ಡಕೌಟ್ ಆಗಿದ್ದರು.

ವೆಸ್ಟ್‌ಇಂಡೀಸ್‌ 27 ರನ್‌ಗೆ ಆಲೌಟ್

ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ವಿಂಡೀಸ್ ಬೇಡವಾದ ದಾಖಲೆ ಬರೆಯಿತು. ಟೆಸ್ಟ್‌ನಲ್ಲಿ ಅತಿ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಎರಡನೇ ತಂಡ ಎಂಬ ಬೇಡವಾದ ದಾಖಲೆ ವಿಂಡೀಸ್ ಪಾಲಾಯಿತು.

ಟೆಸ್ಟ್‌ನಲ್ಲಿ ಕಡಿಮೆ ಮೊತ್ತಕ್ಕೆ ಆಲೌಟ್ ಆದ ತಂಡ

ನ್ಯೂಜಿಲೆಂಡ್‌ 26 ರನ್‌, ಇಂಗ್ಲೆಂಡ್ ವಿರುದ್ಧ
ವೆಸ್ಟ್‌ ಇಂಡೀಸ್‌ 27 ರನ್‌, ಆಸ್ಟ್ರೇಲಿಯಾ ವಿರುದ್ಧ
ದಕ್ಷಿಣ ಆಫ್ರಿಕಾ 30 ರನ್‌, ಇಂಗ್ಲೆಂಡ್‌ ವಿರುದ್ಧ
ದಕ್ಷಿಣ ಆಫ್ರಿಕಾ 30 ರನ್‌, ಇಂಗ್ಲೆಂಡ್‌ ವಿರುದ್ಧ
ದಕ್ಷಿಣ ಆಫ್ರಿಕಾ 35 ರನ್‌, ಇಂಗ್ಲೆಂಡ್‌ ವಿರುದ್ಧ

Story first published: Tuesday, July 15, 2025, 8:24 [IST]
Other articles published on Jul 15, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+