ಗಬ್ಬಾದಲ್ಲಿ ಅಬ್ಬರಿಸಿದ ಗಬ್ಬರ್ ಸಿಂಗ್, ಟಿ20 ರನ್ ಗಳಿಕೆಯಲ್ಲಿ ಕಿಂಗ್

ಬ್ರಿಸ್ಬೇನ್, ನವೆಂಬರ್ 22: ಇಲ್ಲಿನ ಗಬ್ಬಾ ಮೈದಾನದಲ್ಲಿ ಅತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ
ಟೀಂ ಇಂಡಿಯಾಕ್ಕೆ ಸೋಲುಂಟಾಗಿದೆ. ಆದರೆ, ಆರಂಭಿಕ ಆಟಗಾರ 'ಗಬ್ಬರ್ ಸಿಂಗ್' ಶಿಖರ್ ಧವನ್ ಮಾತ್ರ ಘರ್ಜಿಸಿದ್ದಾರೆ.
ಸ್ಫೋಟಕ 76 ರನ್ ಸಿಡಿಸಿದ ಧವನ್ ಅವರು ಟಿ20ಐನಲ್ಲಿ ಅತ್ಯಧಿಕ ರನ್ ಗಳಿಕೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದ್ದಾರೆ.
2018 ರ ಟಿ20 ಕ್ರಿಕೆಟ್ ಪಂದ್ಯಗಳಲ್ಲಿ ಶಿಖರ್ ಧವನ್ ಒಟ್ಟಾರೆ 646 ರನ್ಗಳನ್ನ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಅವರನ್ನ ಹಿಂದಿಕ್ಕಿದ್ದಾರೆ. 2016 ರಲ್ಲಿ ವಿರಾಟ್ ಕೊಹ್ಲಿ 641 ರನ್ ಬಾರಿಸುವ ಮೂಲಕ ಅತಿ ಹೆಚ್ಚು ರನ್ ಬಾರಿಸಿದ ಕೀರ್ತಿ ಹೊಂದಿದ್ದರು.
ಕೊಹ್ಲಿ ಅವರು 2016ರಲ್ಲಿ 646 ರನ್ ಬಾರಿಸುವ ಮೂಲಕ ಅಗ್ರಸ್ಥಾನಕ್ಕೇರಿದ್ದರು. ಒಂದು ಕ್ರಿಕೆಟ್ ಕ್ಯಾಲೆಂಡರ್ ವರ್ಷದಲ್ಲಿ ಅತಿಹೆಚ್ಚು ರನ್ ಬಾರಿಸಿದ ದಾಖಲೆಯನ್ನು ಈಗ ಈ ವರ್ಷ ಗಬ್ಬರ್ಸಿಂಗ್ ಮುರಿದಿದ್ದಾರೆ.
500ಕ್ಕೂ ಹೆಚ್ಚು ರನ್ ಬಾರಿಸಿದವರ ಪಟ್ಟಿ:
646 - ಶಿಖರ್ ಧವನ್ (2018)
641 - ವಿರಾಟ್ ಕೊಹ್ಲಿ (2016)
576 - ಫಖಾರ್ ಜಮಾನ್ (2018)
567 - ರೋಹಿತ್ ಶರ್ಮಾ (2018)
563 - ಬಾಬರ್ ಅಜಂ (2018)
520 - ಎಂ ಶಾಜಾದ್ (2016)
503 - ಆರೋನ್ ಫಿಂಚ್ (2018)
500 - ಕಾಲಿನ್ ಮುನ್ರೋ (2018)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications