ಸಿಎಸ್‌ಕೆ ಹೆಡ್ ಕೋಚ್ ಸ್ಥಾನದಿಂದ ಕೆಳಗಿಳಿದ ಸ್ಟೀಫನ್ ಫ್ಲೆಮಿಂಗ್
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಯಶಸ್ವಿ ತಂಡಗಳಲ್ಲಿ ಒಂದಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಕಳೆದ 18 ವರ್ಷಗಳಿಂದ ತಂಡದ ಕೋಚ್ ಆಗಿದ್ದ ಸ್ಟೀಫನ್ ಫ್ಲೆಮಿಂಗ್ ಈಗ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ. ಮುಂದಿನ ಆವೃತ್ತಿಯ ಐಪಿಎಲ್‌ನಲ್ಲಿ ಸ್ಟೀಫನ್ ಫ್ಲೇಮಿಂಗ್ ತಂಡದ ಕೋಚ್ ಪಾತ್ರದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಚೆನ್ನೈ ತಂಡದೊಂದಿಗಿನ ಸಂಬಧವನ್ನು ಸ್ಟೀಫನ್ ಫ್ಲೇಮಿಂಗ್ ಕೊನೆಗೊಳಿಸಿದ್ದಾರೆ. ಫ್ರಾಂಚೈಸಿ ಹಾಗೂ ಕೋಚ್ ಇಬ್ಬರೂ ಬೇರ್ಪಡಲು ನಿರ್ಧರಿಸಿದ್ದು, ಸಿಎಸ್‌ಕೆ ತನ್ನ ಸಾಮಾಜಿಕ ತಾಣದಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ.
ಮುಖ್ಯ ಕೋಚ್ ಫ್ಲೆಮಿಂಗ್ ಅಧಿಕಾರ ಅವಧಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಐದು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ. ಇವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಮೊದಲ ಆವೃತ್ತಿಯಲ್ಲಿ ಬ್ಯಾಟರ್ ಆಗಿ ಆಡಿದ್ದಾರೆ. ಆದರೆ 2009ರಂದು ಅವರನ್ನು ತಂಡದ ಹೆಡ್ ಕೋಚ್ ಆಗಿ ಫ್ರಾಂಚೈಸಿ ನೇಮಕ ಮಾಡಿತ್ತು. ಅಲ್ಲಿಂದ ಈ ವರೆಗೆ ಫ್ಲೇಮಿಂಗ್ ಹಾಗೂ ಧೋನಿ ಜೋಡಿ ಚೆನ್ನೈ ತಂಡದ ಪರ ಕಮಾಲ್ ಪ್ರದರ್ಶನ ನೀಡಿದೆ. ಇವರ ಕೋಚಿಂಗ್ ಅವಧಿಯಲ್ಲಿ ಚೆನ್ನೈ 5 ಬಾರಿ ಐಪಿಎಲ್, 2 ಬಾರಿ ಚಾಂಪಿಯನ್ಸ್ ಲೀಗ್ ಮುಕುಟವನ್ನು ಸಹ ಅಲಂಕರಿಸಿದೆ. ಇವರ ಮುಂದಾಳತ್ವದಲ್ಲಿ ಚೆನ್ನೈ ತಂಡ 12 ಬಾರಿ ಪ್ಲೇ ಆಫ್ ಪ್ರವೇಶಿಸಿದ ದಾಖಲೆ ನಿರ್ಮಿಸಿದೆ.

ಸಿಎಸ್‌ಕೆ ಇಂದ ಹೊರ ನಡೆಯುತ್ತಿರುವ ಬಗ್ಗೆ ಮಾತನಾಡಿರುವ ಫ್ಲೇಮಿಂಗ್, 18 ವರ್ಷ ಸುದೀರ್ಘವಾಗಿರುತ್ತದೆ. ಈ ತಂಡದೊಂದಿಗೆ ಕಳೆದ ಸ್ಮರಣೀಯ ಕ್ಷಣಗಳೊಂದಿಗೆ ನಾನು ನಿರ್ಗಮಿಸುತ್ತಿದ್ದೇನೆ. ಚೆನ್ನೈ ತಂಡದೊಂದಿಗೆ ಕಳೆದ ವರ್ಷಗಳು ನನ್ನ ಕೋಚಿಂಗ್ ವೃತ್ತಿ ಜೀವನದ ಅವಿಸ್ಮರಣೀಯ ಘಳಿಗೆ ಎಂದಿದ್ದಾರೆ. ನಮ್ಮ ತಂಡ ನೀಡಿದ ಪ್ರದರ್ಶನದ ಬಗ್ಗೆ ನನಗೆ ಗೌರವ ಇದೆ ಎಂದು ತಿಳಿಸಿದ್ದಾರೆ. ಐಪಿಎಲ್ ಜೊತೆಗೆ, ಫ್ಲೆಮಿಂಗ್ ಇತರ ವಿದೇಶಿ ಲೀಗ್‌ಗಳಲ್ಲಿ ಕೋಚಿಂಗ್ ಮಾಡಿದ ಹೆಗ್ಗಳಿಕೆ ಹೊಂದಿದ್ದಾರೆ. ಎಸ್‌ಎ ಟಿ20 ಸೂಪರ್ ಕಿಂಗ್ಸ್ ಫ್ರಾಂಚೈಸಿಗೆ ತರಬೇತಿ ನೀಡಿದ್ದಾರೆ.
ಮುಂದಿನ ಕೋಚ್ ಯಾರು?
ಕೋಚ್ ಸ್ಟೀಫನ್ ಫ್ಲೇಮಿಂಗ್ ಅವರ ಸ್ಥಾನಕ್ಕೆ ಸಿಎಸ್‌ಕೆ ಬೇರೆ ಕೋಚ್ ಹುಡುಕಾಟದಲ್ಲಿದೆ. ಈ ವೇಳೆ ಟೀಮ್ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರ ಹೆಸರು ಸಹ ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ. ಸಾಮಾಜಿಕ ತಾಣದಲ್ಲಂತೂ ರಾಹುಲ್ ದ್ರಾವಿಡ್ ಅವರ ಹೆಸರೂ ಕೇಳಿ ಬರುತ್ತಿದೆ.

ಇತ್ತೀಚಿನ ದಿನಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರದರ್ಶನ ನೀರಸವಾಗಿದೆ. 2023ರಲ್ಲಿ ಚೆನ್ನೈ ತಂಡ ಕೊನೆಯ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಅಲ್ಲಿಂದ ಈ ವರೆಗೆ ಚೆನ್ನೈ ತಂಡ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದೆ. 2024ರಲ್ಲಿ ಐದನೇ ಸ್ಥಾನ, 2025ರಲ್ಲಿ ಕೊನೆಯ ಸ್ಥಾನ, 2026ರಲ್ಲಿ ತಂಡ ಎಂಟನೇ ಸ್ಥಾನವನ್ನು ಪಡೆದಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications