
ವಿವಾದಗಳಿಗೆ ಸಾರಿ ಕೇಳಿದ ನಾಯಕ
ಮಂಗಳವಾರ, ಧರ್ಮಶಾಲಾದ ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಮಿತ್, ''ಈ ಬಾರಿಯ ಭಾರತ ಪ್ರವಾಸದ ವೇಳೆ ನಾನು ಭಾವನೆಗಳನ್ನು ನಿಯಂತ್ರಿಸಿಕೊಳ್ಳಲಾರದೆ ಕೆಲವಾರು ವಿವಾದಗಳನ್ನು ಮೈಮೇಲೆಳೆದುಕೊಂಡೆ. ಅಷ್ಟೇ ಅಲ್ಲ, ಈ ವಿವಾದವು, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಹಲವಾರು ಆಸ್ಟ್ರೇಲಿಯಾ, ಭಾರತದ ಮಾಜಿ ಕ್ರಿಕೆಟರ್ ಗಳನ್ನು ತನ್ನೊಳಗೆ ಸೆಳೆದುಕೊಂಡಿತು. ಇದು ವಿಷಾದನೀಯ. ಇದ್ಕಕಾಗಿ ಕ್ಷಮೆ ಕೋರುತ್ತೇನೆ'' ಎಂದು ತಿಳಿಸಿದರು.[ಆಸೀಸ್ ಬಗ್ಗುಬಡಿದ ಟೀಂ ಇಂಡಿಯಾಕ್ಕೆ ನಗದು ಬಹುಮಾನ]

ಡಿಆರ್ ಎಸ್ ಬಗ್ಗೆ ಸ್ಮಿತ್ ತಪ್ಪು ನಡೆ
ಇದೇ ಟೆಸ್ಟ್ ಸರಣಿಯ ಎರಡನೇ ಪಂದ್ಯವು ಫೆಬ್ರವರಿ 4ರಿಂದ 6ರವರೆಗೆ ಬೆಂಗಳೂರಿನಲ್ಲಿ ನಡೆದಿದ್ದಾಗ, ಸ್ಮಿತ್ ಅವರು ಡಿಆರ್ ಎಸ್ ನ ವಿವಾದದಲ್ಲಿ ಸಿಲುಕಿದ್ದರು. ಆ ಪಂದ್ಯದಲ್ಲಿ ದ್ವಿತೀಯ ಇನಿಂಗ್ಸ್ ನಲ್ಲಿ ಅವರು ವೇಗಿ ಉಮೇಶ್ ಯಾದವ್ ಅವರಿಗೆ ಎಲ್ ಬಿಡಬ್ಲ್ಯೂ ಬಲೆಗೆ ಬಿದ್ದಾಗ ಡಿಆರ್ ಎಸ್ ಮೊರೆ ಹೋಗಿದ್ದರು. ಆದರೆ, ತಕ್ಷಣ ಡಿಆರ್ ಎಸ್ ಬಗ್ಗೆ ಯಾಚಿಸದೇ ತಮ್ಮ ಆಟಗಾರರಿರುವ ಡ್ರೆಸ್ಸಿಂಗ್ ರೂಂ ಕಡೆಗೆ ನೋಡಿ ಅಲ್ಲಿಂದ ಹಸಿರು ನಿಶಾನೆ ಸಿಕ್ಕ ನಂತರ ಡಿಆರ್ ಎಸ್ ಮೊರೆ ಹೋಗಿದ್ದರು.[ದಾಖಲೆ:ಎಲ್ಲಾ ಟೆಸ್ಟ್ ತಂಡಗಳ ವಿರುದ್ಧ ಟೀಂ ಇಂಡಿಯಾಕ್ಕೆ ಸರಣಿ ಗೆಲುವು]

ಸ್ಮಿತ್ ನಡೆಗೆ ಆಕ್ಷೇಪ
ಇದನ್ನು, ಟೀಕಿಸಿದ್ದ ಕೊಹ್ಲಿ ಮೈದಾನದಲ್ಲಿ ಸ್ಮಿತ್ ಜತೆಗೆ ವಾಗ್ವಾದ ನಡೆಸಿದ್ದರು. ನಿಯಮಗಳ ಪ್ರಕಾರ, ಆಟಗಾರನು ಡಿಆರ್ ಎಸ್ ಸೌಲಭ್ಯಕ್ಕಾಗಿ ಸ್ವಯಂ ನಿರ್ಧಾರ ಕೈಗೊಳ್ಳಬೇಕು. ಹೀಗೆ, ಇತರ ಆಟಗಾರರಿಂದ ನಿಶಾನೆ ಪಡೆದಿದ್ದು ಮೋಸದಾಟ ಆಡಿದ್ದಾರೆಂದು ಟೀಕಿಸಿದ್ದರು.[ಬಾರ್ಡರ್ -ಗವಾಸ್ಕರ್ ಟ್ರೋಫಿ ಕಸಿದುಕೊಂಡ ಭಾರತಕ್ಕೆ ಬಹುಪರಾಕ್]

ಮಾಧ್ಯಮಗಳದ್ದೂ ದೇಣಿಗೆ!
ಇದು ಆನಂತರ ವಿವಾದದ ಸ್ವರೂಪ ಪಡೆದು, ಆಸೀಸ್ ಕೆಲವಾರು ಮಾಜಿ ಕ್ರಿಕೆಟಿಗರು ಸ್ಮಿತ್ ಪರವಾಗಿ ಮಾತನಾಡಿದರೆ, ಸುನಿಲ್ ಗವಾಸ್ಕರ್ ಸೇರಿದಂತೆ ಅನೇಕ ಭಾರತದ ಮಾಜಿ ಕ್ರಿಕೆಟರ್ ಗಳು ಕೊಹ್ಲಿ ಬೆಂಬಲಕ್ಕೆ ನಿಂತರು. ಕೊನೆಗೆ ಆಸೀಸ್ ಮಾಧ್ಯಮಗಳು ಕೊಹ್ಲಿಯನ್ನು ಜಾಗತಿಕ ಕ್ರೀಡಾಲೋಕದ ಡೊನಾಲ್ಡ್ ಟ್ರಂಪ್ ಎಂದೂ ಟೀಕಿಸಿದವು. ಇದು ವಿವಾದದ ಬೆಂಕಿಗೆ ತುಪ್ಪ ಸುರಿದಿತ್ತು.

ವಿವಾದವೆದ್ದಿದ್ದಕ್ಕೆ ಅಸಮಾಧಾನ
ಆದರೆ, ಆಸೀಸ್ ನ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಮಾತ್ರ ಕೊಹ್ಲಿ ಪರವಾಗಿ ಮಾತನಾಡಿದ್ದರು. ಡಿಆರ್ ಎಸ್ ವಿಚಾರವನ್ನು ಸುಮ್ಮನೇ ದೊಡ್ಡದಾಗಿ ಬಿಂಬಿಸಿದ ಆಸೀಸ್ ಮಾಧ್ಯಮಗಳ ಮೇಲೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.


Click it and Unblock the Notifications