Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನಿಷೇಧಕ್ಕೀಡಾಗಿರುವ ಆಸೀಸ್ ನ ಸ್ಮಿತ್, ವಾರ್ನರ್ ಮತ್ತೆ ಕಣಕ್ಕೆ

Steve Smith, David Warner cleared to play club cricket in Australia

ಸಿಡ್ನಿ, ಮೇ 11: ಒಂದು ವರ್ಷ ನಿಷೇಧಾಗಾಥಕ್ಕೊಳಗಾಗಿದ್ದ ಆಸ್ಟ್ರೇಲಿಯಾ ಮಾಜಿ ನಾಯಕ ಸ್ವೀವ್ ಸ್ಮಿತ್ ಮತ್ತು ಮಾಜಿ ಉಪ ನಾಯಕ ಡೇವಿಡ್ ವಾರ್ನರ್ ಕೊಂಚ ನಿರಾಳರಾಗಿದ್ದಾರೆ. ಆಸ್ಟ್ರೇಲಿಯಾ ಕ್ಲಬ್ ಕ್ರಿಕೆಟ್ ನಲ್ಲಿ ಆಡಲು ಅನುಮತಿ ದೊರೆತಿರುವುದರಿಂದ 'ಚೆಂಡು ವಿರೂಪ' ನೋವಿನಿಂದ ಸುಧಾರಿಸಿಕೊಳ್ಳಲು ಇಬ್ಬರಿಗೂ ಸಣ್ಣ ಅವಕಾಶ ದೊರೆತಂತಾಗಿದೆ.

ಸ್ಟೀವ್ ಮತ್ತು ವಾರ್ನರ್ ಅವರು ಆಟವನ್ನು ನಿಲ್ಲಿಸಲು ಬಿಟ್ಟುಕೊಡುವುದಿಲ್ಲ ಎಂದು ದ ನ್ಯೂ ಸೌತ್ ವೇಲ್ಸ್ ಕ್ರಿಕೆಟ್ ಅಸೋಸಿಯೇಶನ್ ಖಾತರಿ ಪಡಿಸಿರುವುದರಿಂದ ಇಬ್ಬರೂ ಆಟಗಾರರೂ ನೆಚ್ಚಿನ ಕ್ರಿಕೆಟ್ ನಲ್ಲಿ ಮತ್ತೆ ತೊಡಗಿಕೊಳ್ಳಲಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಆಫ್ರಿಕಾ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ವೇಳೆ ಬಾಲ್ ಟ್ಯಾಂಪರಿಂಗ್ ನಲ್ಲಿ ಪಾಲ್ಗೊಂಡು 9 ತಿಂಗಳ ನಿಶೇಧಕ್ಕೆ ಗುರಿಯಾಗಿದ್ದ ಮತ್ತೊಬ್ಬ ಆಸ್ಟ್ರೇಲಿಯಾ ಆಟಗಾರ ಕ್ಯಾಮರಾನ್ ಬ್ಯಾನ್ ಕ್ರಾಫ್ಟ್ ಅವರಿಗೂ ಕ್ಲಬ್ ಕ್ರಿಕೆಟ್ ನಲ್ಲಿ ಆಡಲು ಅವಕಾಶ ದೊರೆಯುವುದರಲ್ಲಿದ್ದು, ಅದಕ್ಕಾಗಿ ಬ್ಯಾನ್ ಕ್ರಾಫ್ಟ್ ಕೊಂಚ ಕಾಯಬೇಕಾಗಿದೆ.

ಬ್ಯಾನ್ ಕ್ರಾಫ್ಟ್ ಅವರಿಗೆ ದ ವೆಸ್ಟರ್ನ್ ಆಸ್ಟ್ರೇಲಿಯಾ ಡಿಸ್ಟ್ರಿಕ್ಟ್ ಕ್ರಿಕೆಟ್ ಕೌನ್ಸಿಲ್ ನಿಂದ ನಿರಾಪೇಕ್ಷಣೆ ದೊರೆತುಬಿಟ್ಟರೆ ಅವರೂ ಈ ವರ್ಷ ಪರ್ತ್ ನಲ್ಲಿ ನಡೆಯಲಿರುವ ಕ್ಲಬ್ ಕ್ರಿಕೆಟ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.

ದಕ್ಷಿಣ ಆಫ್ರಿಕಾ ಟೆಸ್ಟ್ ಸಂದರ್ಭ ನಡೆದಿದ್ದ ಚೆಂಡು ವಿರೂಪ ಪ್ರಕರಣದಿಂದ ಇಡೀ ಆಸ್ಟ್ರೇಲಿಯಾವೇ ತಲೆ ತಗ್ಗಿಸಿತ್ತು. ಜೊತೆಗೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದ ಈ ಮೂವರೂ ಶಿಕ್ಷೆಗೆ ಗುರಿಯಾಗಿದ್ದರು. ಪ್ರಕರಣದಿಂದಾಗಿ ನೊಂದುಕೊಂಡಿದ್ದ ಈ ಆಸೀಸ್ ಆಟಗಾರರು ತಪ್ಪಿಗಾಗಿ ಜನತೆಯಲ್ಲಿ ಕ್ಷಮೆಯಾಚಿಸಿದ್ದನ್ನು, ಕಣ್ಣೀರಿಟ್ಟಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

Story first published: Friday, May 11, 2018, 1:55 [IST]
Other articles published on May 11, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+