ಲಿಫ್ಟ್‌ನಲ್ಲಿ ಸಿಲುಕಿಕೊಂಡ ಆಸ್ಟ್ರೇಲಿಯಾ ಕ್ರಿಕೆಟಿಗ ಸ್ಟೀವನ್ ಸ್ಮಿತ್: 1 ಗಂಟೆಗೂ ಹೆಚ್ಚು ಕಾಲ ಹೊರಬರಲಾಗದೆ ಪರದಾಟ!

ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡದ ಉಪನಾಯಕ ಸ್ಟೀವನ್ ಸ್ಮಿತ್ ಒಂದು ಗಂಟೆಗೂ ಹೆಚ್ಚು ಕಾಲ ಲಿಫ್ಟ್‌ನೊಳಗೆ ಸಿಲುಕಿಕೊಂಡು ಹೊರಬರಲಾಗದ ಘಟನೆ ಪಾರ್ಕ್ ಹಯಾಟ್ ಮೆಲ್ಬೋರ್ನ್ನಲ್ಲಿ ನಡೆದಿದೆ.
30ನೇ ಡಿಸೆಂಬರ್ 2021 ರಂದು ಸ್ಟೀವ್ ಸ್ಮಿತ್ ಒಂದು ಗಂಟೆಗೂ ಹೆಚ್ಚು ಕಾಲ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದರು. ಲಿಫ್ಟ್‌ನೊಳಗೆ ಏನಾಯಿತು ಎಂಬುದರ ಕುರಿತಾಗಿ ಇನ್‌ಸ್ಟಾಗ್ರಾಮ್ ಪೋಸ್ಟ್ ಮಾಡಿದ ಸ್ಮಿತ್ , ಲಿಫ್ಟಿನಲ್ಲಿ ಸಿಲುಕಿಗೊಂಡಿದ್ದೇನೆ, ಲಿಫ್ಟ್ ಬಾಗಿಲು ತೆರೆಯಲು ಸಾಧ್ಯವಾಗುತ್ತಿಲ್ಲ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಲಿಫ್ಟ್ ಸರಿಯಾದ ಸಮಯಕ್ಕೆ ಸರ್ವೀಸ್ ಆಗದೆ ಇರುವುದು ಈ ಅವಾಂತರಕ್ಕೆ ಕಾರಣವಾಗಿರಬಹುದು ಎಂದು ಸ್ಮಿತ್ ಅಭಿಪ್ರಾಯಪಟ್ಟಿದ್ದಾರೆ. ಸ್ಮಿತ್ ಲಿಫ್ಟ್ ಒಳಗೆ ಸಿಲುಕಿಕೊಂಡ ಬಳಿಕ ಒಳಗಿನಿಂದ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾರೆ. ಇನ್ನು ಹೊರಗಿನಿಂದ ಆಸ್ಟ್ರೇಲಿಯಾದ ಸಹ ಕ್ರಿಕೆಟಿಗ ಮಾರ್ನಸ್ ಲ್ಯಾಬುಸ್ಚಾಗ್ನೆ ಹೊರಗೆ ಬಾಗಿಲು ತೆರೆಯಲು ಯತ್ನಿಸಿದ್ದಾರೆ. ಆದ್ರೆ ಇವರ ಒಂದು ಗಂಟೆಗಳ ಕಾಲ ಪ್ರಯತ್ನ ವ್ಯರ್ಥವಾಗಿದೆ.
"ನಾನು ಲಿಫ್ಟ್ ಬೇಸ್‌ನಲ್ಲಿದ್ದೇನೆ, ನಾನು ಈ ಮಟ್ಟದಲ್ಲಿ ಇದ್ದರೂ ಅದರ ಬಾಗಿಲು ತೆರೆಯುತ್ತಿಲ್ಲ. ಮೇಲ್ನೋಟಕ್ಕೆ ಇದು ಸರ್ವೀಸ್ ಆಗದೆ ಇರುವಂತಿದೆ. ನಾನು ಒಳಗಿನಿಂದ ಬಾಗಿಲು ತೆರೆಯಲು ಪ್ರಯತ್ನಿಸಿದೆ, ಮಾರ್ನಸ್ ಇನ್ನೊಂದು ಬದಿಯಲ್ಲಿ ಅದನ್ನು ತೆರೆಯಲು ಪ್ರಯತ್ನಿಸುತ್ತಿದ್ದಾರೆ, ಆದ್ರೆ ಹೆಚ್ಚು ಪ್ರಯೋಜನವಿಲ್ಲ. ಪ್ರಾಮಾಣಿಕವಾಗಿ ಹೇಳುವುದಾದ್ರೆ, ನಾನು ಯೋಜಿಸಿದ ಸಂಜೆ ಇದಾಗಿಲ್ಲ "ಎಂದು ಸ್ಮಿತ್ ಅವರು ಇನ್‌ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಸ್ಟೀವ್ ಸ್ಮಿತ್ ಅವರು ಲಿಫ್ಟ್ ಒಳಗೆ ಬೇರೇನೂ ಮಾಡದ ಕಾರಣ ಅವರು ನೆಲದ ಮೇಲೆ ಕುಳಿತುಕೊಂಡಿದ್ದರು. ಲಿಫ್ಟ್‌ನಲ್ಲಿ ಸಿಲುಕಿಕೊಂಡ ವ್ಯಕ್ತಿಯಿಂದ ಏನು ಮಾಡಬಹುದು ಎಂದು ಇನ್‌ಸ್ಟಾಗ್ರಾಮ್ ಮೂಲಕ ತನ್ನ ಅಭಿಮಾನಿಗಳನ್ನು ಕೇಳಿದ್ದಾರೆ.
ಇದರ ನಡುವೆ ಆಸೀಸ್ ಕ್ರಿಕೆಟಿಗ ಮಾರ್ನಸ್ ಸ್ಮಿತ್ ರನ್ನು ಹೊರತರಲು ಲಿಫ್ಟ್ ಅನ್ನು ಮುರಿಯಲು ಪ್ರಯತ್ನಿಸಿದರು. ಆದ್ರೆ ಸಾಧ್ಯವಾಗಲಿಲ್ಲ, ಕೊನೆಗೆ ಲಿಫ್ಟ್ ಆಪರೇಟರ್‌ಗಳು ಆಗಮಿಸಿ ಸಿಲುಕಿಕೊಂಡಿದ್ದ ಸ್ಮಿತ್‌ರನ್ನ ಮುಕ್ತಗೊಳಿಸಿದರು.
ಜನವರಿ 5ರಂದು ನಾಲ್ಕನೇ ಆ್ಯಷಸ್ ಟೆಸ್ಟ್ ಪಂದ್ಯದಲ್ಲಿ ಸ್ವೀವನ್ ಸ್ಮಿತ್ ಆಡಲಿದ್ದಾರೆ. ಈಗಾಗಲೇ ಆಸ್ಟ್ರೇಲಿಯಾವು ಇಂಗ್ಲೆಂಡ್ ವಿರುದ್ಧ 3-0 ಅಂತರದಲ್ಲಿ ಗೆಲುವು ಸಾಧಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications