ಐಪಿಎಲ್ 2019: ರಾಜಸ್ಥಾನ್ ರಾಯಲ್ಸ್‌ಗೆ ಸ್ಟೀವ್ ಸ್ಮಿತ್ ನೂತನ ನಾಯಕ

ಜೈಪುರ, ಏಪ್ರಿಲ್ 20: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿಗಳಲ್ಲಿ ಒಂದಾದ ರಾಜಸ್ಥಾನ್ ರಾಯಲ್ಸ್, ನಾಯಕತ್ವದಿಂದ ಅಜಿಂಕ್ಯ ರಹಾನೆ ಅವರನ್ನು ಕೆಳಗಿಳಿಸಿದೆ. ನೂತನ ನಾಯಕನಾಗಿ ಆಸ್ಟ್ರೇಲಿಯಾ ಆಟಗಾರರಾದ ಸ್ಟೀವ್ ಸ್ಮಿತ್ ಅವರನ್ನು ನೇಮಿಸಲಾಗಿದೆ.
ಐಪಿಎಲ್ 2019: ರಾಜಸ್ಥಾನ್ vs ಮುಂಬೈ ಪಂದ್ಯ, Live Score ಕೆಳಗಿದೆ
2019ರ ಐಪಿಎಲ್ ಸೀಸನ್‌ನಲ್ಲಿ ಆಡಿರುವ ಒಟ್ಟು 8 ಪಂದ್ಯಗಳಲ್ಲಿ ಕೇವಲ ಎರಡರಲ್ಲಷ್ಟೇ ರಾಯಸ್ಥಾನ್ ರಾಯಲ್ಸ್ ಜಯಿಸಿದೆ. ಸದ್ಯ ಐಪಿಎಲ್ ಅಂಕಪಟ್ಟಿಯಲ್ಲಿ ರಾಸ್ಥಾನ್ ರಾಯಲ್ಸ್ 7ನೇ ಸ್ಥಾನದಲ್ಲಿದೆ. ತಂಡದ ಕಳಪೆ ಪ್ರದರ್ಶನದಿಂದ ಅಜಿಂಕ್ಯ ರಹಾನೆಯವನ್ನು ಕೆಳಗಿಳಿಸಿರುವುದಾಗಿ ಹೇಳಲಾಗಿದೆ.
'ಮುಂಬರಲಿರುವ ಐಪಿಎಲ್ ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಆಸ್ಟ್ರೇಲಿಯಾ ಬ್ಯಾಟ್ಸ್ಮನ್ ಸ್ಟಿವ್ ಸ್ಮಿತ್ ಮುನ್ನಡೆಸಲಿದ್ದಾರೆ. ಕಳೆದ ವರ್ಷ ತಂಡ ಪ್ಲೇ ಆಫ್ ಪ್ರವೇಶಿಸುವಲ್ಲಿ ನಾಯಕ ಅಜಿಂಕ್ಯ ರಹಾನೆ ಅದ್ಭುತವಾಗಿ ಶ್ರಮಿಸಿದ್ದರು. ಆದರೆ ಈ ಬಾರಿ ತಂಡ ಮತ್ತೆ ಗೆಲುವಿನ ದಾರಿ ಹಿಡಿಯಲು ಹೊಸ ನಾಯಕನ ಅಗತ್ಯವನ್ನು ಫ್ರಾಂಚೈಸಿ ಬಯಸಿದೆ' ಎಂದು ರಾಜಸ್ಥಾನ್ ಹೇಳಿಕೆಯಲ್ಲಿ ತಿಳಿಸಿದೆ.
ಸದ್ಯ ಐಪಿಎಲ್ ಅಂಕಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೆಳ ತುದಿಯಲ್ಲಿದೆ. ಅನಂತರ ರಾಜಸ್ಥಾನ ತಂಡವಿದೆ. ಈ ಸಾರಿ ಆಡಿರುವ ಅಷ್ಟೂ ಪಂದ್ಯಗಳಲ್ಲಿ ರಹಾನೆ ಗಮನಾರ್ಹ ಪ್ರದರ್ಶನ ನೀಡಿಲ್ಲ. ಆದರೆ ಸ್ಮಿತ್, ಹಲವಾರು ಪಂದ್ಯಗಳಲ್ಲಿ ತಂಡದ ಗೆಲುವಿಗಾಗಿ ಕೊಸರಾಡಿದ್ದಿದೆ. ಆರ್‌ಆರ್ ನಾಯಕತ್ವ ಬದಲಾವಣೆಗೆ ಇದೂ ಕಾರಣವಿರಬಹುದು ಎಂಬ ಮಾತುಗಳು ಕೇಳಿ ಬಂದಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications