For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಸರಣಿಯಿಂದ ಕ್ಲಾರ್ಕ್ ಹೊರಕ್ಕೆ, ಸ್ಮಿತ್ ನಾಯಕ

By Mahesh

ಸಿಡ್ನಿ, ಡಿ.15: ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆಸ್ಟ್ರೇಲಿಯಾ ತಂಡದ ನಾಯಕ ಮೈಕಲ್ ಕ್ಲಾರ್ಕ್ ಅವರುಟೆಸ್ಟ್ ಸರಣಿಯಿಂದ ಹೊರಗುಳಿಯಬೇಕಾಗಿದೆ. ಭಾರತ ವಿರುದ್ಧದ ಉಳಿದ ಪಂದ್ಯಗಳಿಗೆ ಸ್ಟೀವ್ ಸ್ಮಿತ್ ರನ್ನು ನಾಯಕರಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಆಯ್ಕೆ ಮಾಡಿದೆ.

ಭಾರತ ಹಾಗೂ ಆಸ್ಟ್ರೇಲಿಯ ವಿರುದ್ಧದ ಅಡಿಲೇಡ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಕೊನೆಯ ದಿನದಂದು ಕ್ಲಾರ್ಕ್ ಮತ್ತೊಮ್ಮೆ ಬೆನ್ನುನೋವಿನಿಂದ ಬಳಲಿದ್ದರು. ಆಟದ ಮಧ್ಯದಲ್ಲೇ ಮೈದಾನ ತೊರೆದಿದ್ದ ಕ್ಲಾರ್ಕ್ ಅವರು ನಂತರ ಸುದ್ದಿಗೋಷ್ಠಿಯಲ್ಲಿ ಸರಣಿಯ ಉಳಿದ ಪಂದ್ಯಗಳನ್ನು ಆಡುವುದು ಅನುಮಾನ ಎಂದಿದ್ದರು. [ಅಂತ್ಯದಲ್ಲಿ ಅಡಿಗೆ ಬಿದ್ದ ಭಾರತ]

ನನಗೆ ಮತ್ತೊಮ್ಮೆ ಆಡುವ ಅವಕಾಶ ಸಿಗುವ ಭರವಸೆಯಿಲ್ಲ. ನಾನು ಮತ್ತೊಮ್ಮೆ ಆಡುವ ವಿಶ್ವಾಸವೂ ನನಗಿಲ್ಲ. ತಂಡಕ್ಕೆ ಮರಳುವ ಕುರಿತು ಶಕ್ತಿಮೀರಿ ಪ್ರಯತ್ನ ನಡೆಸುತ್ತಿದ್ದೇನೆ. 'ನಾನು ಸ್ಕಾನಿಂಗ್‌ಗೆ ಒಳಗಾಗಿದ್ದೇನೆ. ಸ್ಕಾನಿಂಗ್ ವರದಿ ಆಶಾದಾಯಕವಾಗಿಲ್ಲ. ತಜ್ಞ ವೈದ್ಯರು ವರದಿಯನ್ನು ಪರಿಶೀಲಿಸುತ್ತಿದ್ದಾರೆ. ಭಾರತ ವಿರುದ್ಧ ಟೆಸ್ಟ್ ಸರಣಿಯಲ್ಲಿ ನನಗೆ ಆಡಲು ಸಾಧ್ಯವಿಲ್ಲ ಎಂದು ಖಚಿತವಾಗಿ ಹೇಳಬಲ್ಲೆ' ಎಂದು ಕ್ಲಾರ್ಕ್ ಹೇಳಿದ್ದರು.

Steve Smith named Australia's Test captain

ಮೊದಲ ಟೆಸ್ಟ್‌ನ ಮೊದಲ ದಿನ ಬ್ಯಾಟಿಂಗ್ ಮಾಡುತ್ತಿದ್ದಾಗಲೇ ಕ್ಲಾರ್ಕ್‌ಗೆ ವಿಪರೀತ ಬೆನ್ನುನೋವು ಕಾಣಿಸಿಕೊಂಡು ಗಾಯಾಳುವಾಗಿ ನಿವೃತ್ತರಾಗಿದ್ದರು.ನಂತರ ನೋವು ನಿವಾರಕ ಇಂಜೆಕ್ಷನ್ ತೆಗೆದುಕೊಂಡು ಬ್ಯಾಟಿಂಗ್ ಮುಂದುವರಿಸಿದ್ದ ಕ್ಲಾರ್ಕ್ 28ನೆ ಟೆಸ್ಟ್ ಶತಕವನ್ನು ಸಿಡಿಸಿದ್ದರು. [ಬೌನ್ಸರ್ ಪೆಟ್ಟು ತಿಂದ ಶತಕ ವೀರ ಕೊಹ್ಲಿ]

'ನನಗೆ ಇದೀಗ ಗಾಯದ ಸಮಸ್ಯೆಯೇ ಚಿಂತೆಯಾಗಿ ಕಾಡುತ್ತಿದೆ. ಮುಂದಿನ ದಿನಗಳಲ್ಲಿ ಸಂಪೂರ್ಣ ಫಿಟ್ ಆಗಿ ಮರಳಲು ತಜ್ಞರ ಸಲಹೆಯನ್ನು ಪಡೆಯುವೆ' ಎಂದು ಇತ್ತೀಚೆಗಿನ ದಿನಗಳಲ್ಲಿ ಪದೇ ಪದೇ ಗಾಯದ ಸಮಸ್ಯೆ ಎದುರಿಸುತ್ತಿರುವ 33ರ ಹರೆಯದ ಕ್ಲಾರ್ಕ್ ತಿಳಿಸಿದ್ದರು.

ಬ್ರಿಸ್ಬೇನ್‌ನಲ್ಲಿ ಬುಧವಾರ ಆರಂಭವಾಗಲಿರುವ ಭಾರತ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಉಪನಾಯಕರಾಗಿದ್ದ 25ರ ಹರೆಯದ ಸ್ಟೀವ್ ಸ್ಮಿತ್ ಅವರಿಗೆ ನೀಡಲಾಗಿದೆ. ಆಸ್ಟ್ರೇಲಿಯಾದ 45ನೇ ಟೆಸ್ಟ್ ನಾಯಕರಾಗಿ ಸ್ಮಿತ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಆಯ್ಕೆ ಸಮಿತಿ ಸದಸ್ಯ ರಾಡ್ ಮಾರ್ಷ್ ಹೇಳಿದ್ದಾರೆ.

Story first published: Wednesday, January 3, 2018, 10:12 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+