Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬೆನ್ ಸ್ಟೋಕ್ಸ್, ಹೇಲ್ಸ್ ಗೆ ಅನಿರ್ಧಿಷ್ಟಾವಧಿ ನಿಷೇಧ

ಲಂಡನ್, ಸೆ. 29: ಇಂಗ್ಲೆಂಡಿನ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಹಾಗೂ ಅಲೆಕ್ಸ್ ಹೇಲ್ಸ್ ಅವರು ನೈಟ್ ಕ್ಲಬ್ ರಾದ್ಧಾಂತಕ್ಕೆ ಭಾರಿ ಬೆಲೆ ತೆತ್ತಿದ್ದಾರೆ.

ಇಬ್ಬರು ಪ್ರಮುಖ ಆಟಗಾರರ ಮೇಲೆ ಅನಿರ್ಧಿಷ್ಟಾವಧಿಗೆ ನಿಷೇಧ ಹೇರಿ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಆದೇಶ ಹೊರಡಿಸಿದೆ.

Stokes and Hales suspended indefinitely by England

ಬೆನ್ ಸ್ಟೋಕ್ಸ್ ರನ್ನು ಬ್ರಿಸ್ಟಲ್ ನ ಪೊಲೀಸರು ಬಂಧಿಸಿದ್ದರಿಂದ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದರು. ಘಟನೆ ನಡೆದಾಗ ಸ್ಟೋಕ್ಸ್ ಜೊತೆಗಿದ್ದ ಅಲೆಕ್ಸ್ ಹೇಲ್ಸ್ ಕೂಡ ಇದ್ದರು ಎಂದು ತಿಳಿದು ಬಂದಿದ್ದರಿಂದ ಅವರನ್ನು ನಾಲ್ಕನೇ ಪಂದ್ಯದಿಂದ ಕೈಬಿಡಲಾಗಿತ್ತು. ಈಗ ಇಬ್ಬರು ಆಟಗಾರರು ಮುಂಬರುವ ಆಷ್ಯಸ್ ಸರಣಿಯಿಂದ ಹೊರಗುಳಿಯಬೇಕಾಗಿದೆ.

ಏನಿದು ಘಟನೆ?: ನೈಟ್ ಕ್ಲಬ್ ಕಿತ್ತಾಡಿಕೊಂಡಿದ್ದ ಬೆನ್ ಸ್ಟೋಕ್ಸ್, ಕ್ಲಬ್ ಹೊರಗೆ ಬಂದು ಕಿತ್ತಾಟ ಮುಂದುವರೆಸಿದ್ದರು. 27 ವರ್ಷದ ವ್ಯಕ್ತಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದರು. ಹೊಡೆದಾಟದಲ್ಲಿ ಬೆನ್ ಸ್ಟೋಕ್ಸ್ ಕೈಗೆ ಗಾಯವಾಗಿದೆ. ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ನೈಟ್ ಕ್ಲಬ್ ನಲ್ಲಿ ನಡೆದಿದ್ದೇನು ಎಂಬ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಇಲ್ಲ.

ವಿಡಿಯೋ ಪ್ರಸಾರವಾದ ಎಚ್ಚೆತ್ತುಕೊಂಡಿರುವ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ, ಮುಂದಿನ ಆದೇಶ ಬರುವ ತನಕ ಇಬ್ಬರನ್ನು ಆಯ್ಕೆ ಮಾಡುವಂತಿಲ್ಲ ಎಂದು ತನ್ನ ಆದೇಶದಲ್ಲಿ ಹೇಳಿದೆ.

ನವೆಂಬರ್ ನಲ್ಲಿ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಲಿರುವ ಇಂಗ್ಲೆಂಡ್ ತಂಡದ ಉಪ ನಾಯಕರಾಗಿದ್ದ ಸ್ಟೋಕ್ಸ್ ಈಗ ಅನಿವಾರ್ಯವಾಗಿ ಇಂಗ್ಲೆಂಡ್ ನಲ್ಲೇ ಉಳಿಯಬೇಕಿದೆ.

ನೈಟ್ ಕ್ಲಬ್ ನಲ್ಲಿ ಗುದ್ದಾಟದಿಂದ ಸ್ಟೋಕ್ಸ್ ಕೈ ಕೂಡಾ ಮುರಿದಿದೆ.ಘಟನೆಗೆ ಸಂಬಂಧಿಸಿದಂತೆ ಇಸಿಬಿ ಹಾಗೂ ಪೊಲೀಸರ ತನಿಖೆ ಮುಂದುವರೆದಿದೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+