ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲಂಡನ್ ಹೋಟೆಲ್‌ನಲ್ಲಿ ಭಾರತ ಕ್ರಿಕೆಟ್‌ ಆಟಗಾರ್ತಿ ತಾನಿಯಾ ಭಾಟಿಯಾ ಬ್ಯಾಗ್ ಕಳ್ಳತನ!

Taniya Bhatia

ಇಂಗ್ಲೆಂಡ್‌ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಭಾರತದಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ. ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಗೆದ್ದ ಭಾರತ ತಂಡವು ತವರಿಗೆ ಮರಳಿದೆ. ಸರಣಿಯಲ್ಲಿ ದೀಪ್ತಿ ಶರ್ಮಾ ವಿವಾದಾತ್ಮಕ ರನೌಟ್ ಮಾಡಿರುವ ವಿಚಾರ ಇನ್ನೂ ಚರ್ಚೆಯಲ್ಲಿದೆ.

ಎದುರಾಳಿ ಆಟಗಾರ್ತಿಯನ್ನು ಚಾರ್ಲಿ ಡೀನ್‌ ಅವರನ್ನ ಮಂಕಡಿಂಗ್ ಮೂಲಕ ವಜಾಗೊಳಿಸಿರುವುದು ಆಟದ ಸ್ಪೂರ್ತಿಗೆ ವಿರುದ್ಧವಾಗಿದೆ ಎಂದು ಟೀಕೆಗಳು ಕೇಳಿಬಂದಿವೆ. ಸಾಮಾಜಿಕ ಜಾಲತಾಣಗಳಲ್ಲಿ ದೀಪ್ತಿ ಶರ್ಮಾ ಮಾಡಿದ ರನೌಟ್ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಮತ್ತೋರ್ವ ಆಟಗಾರ್ತಿ ತಾನಿಯಾ ಭಾಟಿಯಾ ವಿವಾದಾತ್ಮಕ ಬಾಂಬ್ ಸ್ಫೋಟಿಸಿದ್ದಾರೆ.

ತನ್ನ ರೂಂನಲ್ಲಿದ್ದ ಬ್ಯಾಗ್ ಅನ್ನು ಕದ್ದಿದ್ದಾರೆ ಎಂದು ತಾನಿಯಾ ಆರೋಪ

ಭಾರತ ಮಹಿಳಾ ಕ್ರಿಕೆಟ್‌ ಆಟಗಾರ್ತಿ ತಾನಿಯಾ ಭಾಟಿಯಾ ತನ್ನ ಟ್ವಿಟ್ಟರ್ ಖಾತೆಯ ಮೂಲಕ ಲಂಡನ್ ಹೋಟೆಲ್‌ ರೂಂನಲ್ಲಿ ಯಾರೋ ತನ್ನ ಬ್ಯಾಗ್ ಅನ್ನು ಕದ್ದಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

"ಮ್ಯಾರಿಯಟ್ ಹೋಟೆಲ್ ಲಂಡನ್ ಮೈದಾ ವೇಲ್ ಮ್ಯಾನೇಜ್‌ಮೆಂಟ್‌ನಿಂದ ಆಘಾತಕ್ಕೊಳಗಾಗಿದ್ದೇನೆ ಮತ್ತು ನಿರಾಶೆಗೊಂಡಿದ್ದೇನೆ. ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಭಾಗವಾಗಿ ನಾನು ಇತ್ತೀಚೆಗೆ ಉಳಿದುಕೊಂಡಿದ್ದ ಹೋಟೆಲ್‌ನಲ್ಲಿ ಯಾರೋ ನನ್ನ ವೈಯಕ್ತಿಕ ಕೋಣೆಗೆ ನುಗ್ಗಿ ಹಣ, ಕಾರ್ಡ್‌ಗಳು, ಕೈಗಡಿಯಾರಗಳು ಮತ್ತು ಆಭರಣಗಳಿರುವ ನನ್ನ ಬ್ಯಾಗ್ ಅನ್ನು ಕದ್ದಿದ್ದಾರೆ.MariottBonvoy. ಆದ್ದರಿಂದ ಈ ಹೋಟೆಲ್ ಅಸುರಕ್ಷಿತ," ಎಂದು ಟ್ವೀಟ್ ಮಾಡಿದ್ದಾಳೆ.

ಇಂಗ್ಲೆಂಡ್‌ನ ಚಾರ್ಲ್‌ ಡೀನ್ ವಿವಾದಾತ್ಮಕ ರನೌಟ್‌ ಬಗ್ಗೆ ದೀಪ್ತಿ ಶರ್ಮಾ ಸ್ಪಷ್ಟನೆ: ವಾರ್ನಿಂಗ್ ಕೊಟ್ರೂ ಮತ್ತದೇ ತಪ್ಪು!

ಶೀಘ್ರದಲ್ಲೇ ನನ್ನ ಬ್ಯಾಗ್ ಸಿಗುವ ಭರವಸೆಯಿದೆ!

ತನ್ನ ಟ್ವೀಟ್ ಅನ್ನು ಮುಂದುವರಿಸಿರುವ ತಾನಿಯಾ ''ಈ ಬಗ್ಗೆ ಶೀಘ್ರ ತನಿಖೆ ನಡೆಸಿ ಪರಿಹಾರ ಕಂಡುಕೊಳ್ಳುವ ಭರವಸೆ ಇದೆ. ECB_cricket ನ ಆದ್ಯತೆಯ ಹೋಟೆಲ್ ಪಾಲುದಾರರಲ್ಲಿ ಅಂತಹ ಭದ್ರತೆಯ ಕೊರತೆಯು ಆಶ್ಚರ್ಯಕರವಾಗಿದೆ. ಅವರು ಸಹ ಈ ಕುರಿತು ವಿಚಾರಿಸುತ್ತಾರೆ ಎಂದು ಭಾವಿಸುತ್ತೇವೆ.ಮ್ಯಾರಿಯೊಟ್ BCCIWomen BCCI'' ಎಂದು ತಾನಿಯಾ ಟ್ವೀಟ್ ಮಾಡಿದ್ದಾರೆ.

India squad for Women's Asia Cup 2022 : ಹರ್ಮನ್‌ಪ್ರೀತ್ ನಾಯಕತ್ವದ ಬಲಿಷ್ಠ ಭಾರತ ತಂಡ ಪ್ರಕಟಿಸಿದ ಬಿಸಿಸಿಐ

ತಾನಿಯಾ ಟ್ವೀಟ್‌ಗೆ ಹೋಟೆಲ್‌ ಅಧಿಕೃತ ಅಕೌಂಟ್‌ನಿಂದ ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯಿಸಿರುವ ಮ್ಯಾರಿಯಟ್ ಹೋಟೆಲ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ '' ಹಾಯ್ ತಾನಿಯಾ, ಇದನ್ನು ಕೇಳಲು ನಾವು ವಿಷಾದಿಸುತ್ತೇವೆ. ದಯವಿಟ್ಟು ನಿಮ್ಮ ಹೆಸರು ಮತ್ತು ನೀವು ಕಾಯ್ದಿರಿಸಿರುವ ಇಮೇಲ್ ವಿಳಾಸ ಮತ್ತು ನಿಮ್ಮ ವಾಸ್ತವ್ಯದ ನಿಖರವಾದ ದಿನಾಂಕಗಳನ್ನು ನಮಗೆ ಡಿಎಂ ಮಾಡಿ, ನಾವು ಇದನ್ನು ಮತ್ತಷ್ಟು ಪರಿಶೀಲಿಸಬಹುದು'' ಎಂದು ತಿಳಿಸಲಾಗಿದೆ.

ತಾನಿಯಾ ಭಾಟಿಯಾ ಟೀಂ ಇಂಡಿಯಾ ಮಹಿಳಾ ಸ್ಕ್ವಾಡ್‌ನಲ್ಲಿ ಸ್ಥಾನ ಪಡೆದಿದ್ರೂ, ಯಾವುದೇ ಏಕದಿನ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿರಲಿಲ್ಲ. ಆದ್ರೆ ಇದಕ್ಕೂ ಮೊದಲು ನಡೆದ ಟಿ20 ಸರಣಿಯಲ್ಲಿ ಸೆಪ್ಟೆಂಬರ್ 6ರಂದು ನಡೆದ ಪಂದ್ಯದಲ್ಲಿ ಭಾಗವಹಿಸಿದ್ರು. ಈ ವಿಕೆಟ್ ಕೀಪರ್ ಬ್ಯಾಟರ್ ಇದುವರೆಗೆ 19 ಏಕದಿನ ಮತ್ತು 53 ಟಿ20 ಪಂದ್ಯಗಳಲ್ಲಿ ಭಾರತ ಮಹಿಳಾ ತಂಡದ ಪರ ಆಡಿದ್ದಾರೆ.

Story first published: Monday, September 26, 2022, 20:02 [IST]
Other articles published on Sep 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X