Suryakumar Yadav: ಸೂರ್ಯಕುಮಾರ್ ಯಾದವ್ ಫಿಟ್ನೆಸ್ ಬಗ್ಗೆ ಬಿಗ್ ಅಪ್‌ಡೇಟ್
;ಭಾರತ ಏಷ್ಯಾ ಕಪ್ ಟಿ20 ಟೂರ್ನಿಯನ್ನು ಎದುರು ನೋಡುತ್ತಿದೆ. ಈ ವೇಳೆ ಟೀಮ್ ಇಂಡಿಯಾ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಕುರಿತಾದ ಒಂದು ಸುದ್ದಿ ಹೊರ ಬಂದಿದೆ. ಈ ಸುದ್ದಿ ನಿಜಕ್ಕೂ ಟೀಮ್ ಇಂಡಿಯಾ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸಲಿದೆ. ಹಾಗಿದ್ದರೆ ಆ ಸುದ್ದಿ ಯಾವುದು ಎಂಬ ಬಗ್ಗೆ ಇಂಟ್ರಸ್ಟಿಂಗ್ ರಿಪೋರ್ಟ್ ಇಲ್ಲಿದೆ.
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ ಕಳೆದ ಕೆಲವು ತಿಂಗಳು ಗಳಿನಿಂದ ಮೈದಾನದಿಂದ ದೂರ ಉಳಿದಿದ್ದರು. ಇವರು ಕ್ರೀಡಾ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈಗ ಅವರ ಫಿಟ್ನೆಸ್ ಬಗ್ಗೆ ದೊಡ್ಡ ಅಪ್‌ಡೇಟ್ ಸಿಕ್ಕಿದೆ. ಟೀಮ್ ಇಂಡಿಯಾದ ಮಿಡ್ಲ್ ಆರ್ಡರ್ ಆಧಾರ ಸ್ಥಂಬ ಎಂದೇ ಗುರುತಿಸಿಕೊಂಡಿರುವ ಸೂರ್ಯ ಫಿಟ್ ಆಗುತ್ತಾರಾ ಎಂಬ ಚರ್ಚೆಗಳು ಈ ಮೊದಲು ಆರಂಭವಾಗಿದ್ದವು. ಈಗ ಇದಕ್ಕೆ ಉತ್ತರ ಸಿಕ್ಕಿದೆ.

ಸೂರ್ಯಕುಮಾರ್ ಯಾದವ್ ಬಹುಕಾಲ ಸ್ಪೋರ್ಟ್ಸ್ ಹರ್ನಿಯಾದಿಂದ ಬಳಲುತ್ತಿದ್ದರು. ಹೀಗಾಗಿ ಐಪಿಎಲ್ ಪಂದ್ಯಗಳು ಮುಗಿದ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾದರು. ಹೀಗಾಗಿ ಇವರಿಗೆ ಫಿಟ್ ಆಗಲು ಸಾಕಷ್ಟು ಸಮಯ ಸಿಕ್ಕಿತು. ಕಳೆದ ಐಪಿಎಲ್ ಆವೃತ್ತಿ ಸೂರ್ಯಕುಮಾರ್ ಯಾದವ್ ಅವರಿಗೆ ಸ್ಮರಣೀಯವಾಗಿತ್ತು. ಇವರು 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಒಟ್ಟು 717 ರನ್ ಸಿಡಿಸಿದ್ದರು. ಆದರೂ ಸಹ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ತಲುಪುವಲ್ಲಿ ವಿಫಲವಾಗಿತ್ತು.
ಸೂರ್ಯಕುಮಾರ್ ಯಾದವ್ ಫಿಟ್
ಸೂರ್ಯಕುಮಾರ್ ಯಾದವ್ ಅವರು ಬೆಂಗಳೂರಿನಲ್ಲಿ ಎನ್‌ಸಿಎನಲ್ಲಿ ಪುನರ್ವಸತಿ ಆರಂಭಿಸಿದ್ದರು. ಹೀಗಾಗಿ ಸೂರ್ಯ ಫಿಟ್ ಆಗುತ್ತಾರಾ? ಬಿಗ್ ಈವೆಂಟ್‌ನಲ್ಲಿ ತಂಡವನ್ನು ಮುನ್ನಡೆಸುತ್ತಾರಾ ಎಂಬ ಪ್ರಶ್ನೆಗಳು ಉದ್ಭವಿಸಿದ್ದವು. ಈಗ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ವರದಿ ಇದಕ್ಕೆಲ್ಲಾ ಉತ್ತರ ನೀಡಿದೆ. ಸೂರ್ಯಕುಮಾರ್ ಯಾದವ್ 2025 ರ ಏಷ್ಯಾ ಕಪ್‌ಗೆ ಮುಂಚಿತವಾಗಿ ಫಿಟ್‌ನೆಸ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಇವರು ಭಾರತದ ಆತಿಥ್ಯದಲ್ಲಿ ನಡೆಯಲಿರುವ ಏಷ್ಯಾಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಲು ಸಿದ್ಧರಾಗಿದ್ದಾರೆ.
ಸೂರ್ಯಕುಮಾರ್ ಯಾದವ್ ಇತ್ತೀಚಿಗೆ ಒಂದು ಡ್ಯಾನ್ಸ್ ವಿಡಿಯೋವನ್ನು ಶ್ರೇಯಾಂಕಾ ಪಾಟೀಲ್ ಜೊತೆ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗಿತ್ತು. ಇದನ್ನು ನೋಡಿದ ಅಭಿಮಾನಿಗಳು ಸಖತ್ ಖುಷಿ ಪಟ್ಟಿದ್ದರು. ಈಗ ಹೊರ ಬಂದಿರುವ ಸುದ್ದಿ ನಿಜಕ್ಕೂ ಅಭಿಮಾನಿಗಳ ಮುಖದಲ್ಲಿ ಸಂತಸ ತರಿಸಿದೆ. ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಸೆಪ್ಟಂಬರ್ 9 ರಿಂದ ಯುಎಇನಲ್ಲಿ ಆರಂಭವಾಗಲಿದೆ. ಈ ಸರಣಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿದ್ದು, 2 ಗುಂಪಿನಲ್ಲಿ ವಿಂಗಡಿಸಲಾಗಿದೆ. ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಉಭಯ ದೇಶಗಳ ನಡುವಣ ಮೊದಲ ಪಂದ್ಯ ಸೆ.14 ರಂದು ನಡೆಯಲಿದೆ.
ಲೀಗ್ ಹಂತದಲ್ಲಿ ಅಗ್ರ 2 ಸ್ಥಾನವನ್ನು ಪಡೆದ ತಂಡಗಳು ಸೂಪರ್ 4 ಹಂತಕ್ಕೆ ಪ್ರವೇಶ ಪಡೆಯಲಿದೆ. ಈ ವೇಳೆ ಅಗ್ರ ಎರಡು ತಂಡಗಳು ಫೈನಲ್‌ನಲ್ಲಿ ಕಾದಾಟ ನಡೆಸಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications