ಕೆಎಲ್ ರಾಹುಲ್, ಅಥಿಯಾ ಶೆಟ್ಟಿ ಮದುವೆ ಗುಸುಗುಸುಗೆ ಸುನೀಲ್ ಶೆಟ್ಟಿ ಪ್ರತಿಕ್ರಿಯೆ ಏನಿದೆ?

ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಮತ್ತು ಭಾರತದ ಕ್ರಿಕೆಟಿಗ ಕೆಎಲ್ ರಾಹುಲ್ ಕೆಲವು ವರ್ಷಗಳಿಂದ ಆತ್ಮೀಯವಾಗಿದ್ದು, ಇತ್ತೀಚೆಗಷ್ಟೇ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇನ್ನು ಮೂರು ತಿಂಗಳಲ್ಲಿ ಅಥಿಯಾ ಮತ್ತು ರಾಹುಲ್ ಮದುವೆಯಾಗಲಿದ್ದಾರೆ ಎಂದು ಕೆಲವು ಸುದ್ದಿ ಮೂಲಗಳು ತಿಳಿಸಿವೆ.
ಬಾಲಿವುಡ್ ನಟ, ಮೂಲತಃ ಕನ್ನಡಿಗರಾಗಿರುವ ಸುನೀಲ್ ಮತ್ತು ಮನ ಶೆಟ್ಟಿ ಅವರ ಪುತ್ರಿ ಅಥಿಯಾ ಶೆಟ್ಟಿ ಕೂಡ ನಟಿಯಾಗಿದ್ದರೆ, ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಮತ್ತು ಭಾರತ ರಾಷ್ಟ್ರೀಯ ತಂಡದ ಉಪ ನಾಯಕರಾಗಿದ್ದಾರೆ. ಅಥಿಯಾ ತಂದೆ ಸುನೀಲ್ ಶೆಟ್ಟಿ ಅವರು ವದಂತಿಗಳಿಗೆ ನೇರವಾಗಿ ಪ್ರತಿಕ್ರಿಯಿಸಿದ್ದಾರೆ ಮತ್ತು ಮದುವೆಯ ಕಾರ್ಡ್ ಶೀಘ್ರದಲ್ಲೇ ತಯಾರಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಅಥಿಯಾ, ಕೆಎಲ್ ರಾಹುಲ್ ಮದುವೆಗೆ ಸುನೀಲ್ ಶೆಟ್ಟಿ ಪ್ರತಿಕ್ರಿಯೆ
ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಇತ್ತೀಚೆಗೆ ಶಸ್ತ್ರಚಿಕಿತ್ಸೆಗಾಗಿ ಜರ್ಮನಿಯ ಮ್ಯೂನಿಚ್‌ಗೆ ಒಟ್ಟಿಗೆ ಪ್ರಯಾಣ ಬೆಳೆಸಿದ್ದರು. ದಂಪತಿಗಳು ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎಂದು ಹಲವಾರು ವರದಿಗಳು ಹೇಳಿದವು. ರೇಡಿಯೋ ಮಿರ್ಚಿಯಲ್ಲಿ ಮನೆಯವರು ಮದುವೆಗೆ ಸಿದ್ಧತೆ ಆರಂಭಿಸಿದ್ದಾರೆಯೇ ಎಂದು ಸುನೀಲ್ ಶೆಟ್ಟಿ ಅವರನ್ನು ಕೇಳಿದಾಗ, "ಇಲ್ಲ, ಇನ್ನೂ ಯಾವುದನ್ನೂ ಯೋಜಿಸಲಾಗಿಲ್ಲ!" ಎಂದರು.
ಇದಕ್ಕೂ ಒಂದು ವಾರದ ಮೊದಲು, ಅಥಿಯಾ ಶೆಟ್ಟಿ ಅವರ ಸಹೋದರ ಅಹಾನ್ ಶೆಟ್ಟಿ ದೈನಿಕ್ ಭಾಸ್ಕರ್‌ಗೆ ಪ್ರತಿಕ್ರಿಯಿಸಿ, "ಮದುವೆಗೆ ಸಂಬಂಧಿಸಿದಂತೆ, ಯಾವುದೇ ವ್ಯವಸ್ಥೆ ಮಾಡುತ್ತಿಲ್ಲ. ಅಂತಹ ಯಾವುದೇ ಸಮಾರಂಭವಿಲ್ಲ, ಇದೆಲ್ಲವೂ ವದಂತಿಗಳು. ಮದುವೆಯೇ ಇಲ್ಲದಿರುವಾಗ, ನಾವು ನಿಮಗೆ ದಿನಾಂಕವನ್ನು ಹೇಗೆ ನೀಡುವುದು?," ಎಂದು ಮರು ಪ್ರಶ್ನಿಸಿದರು.

ಅಥಿಯಾ, ಕೆಎಲ್ ರಾಹುಲ್ ಮುಂದಿನ 3 ತಿಂಗಳಲ್ಲಿ ವಿವಾಹವಾಗುತ್ತಾರಾ?
ಕಳೆದ ಮೂರು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿರುವ ನಟಿ ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ ಮುಂದಿನ ಮೂರು ತಿಂಗಳಲ್ಲಿ ಪರಸ್ಪರ ಮದುವೆಯಾಗಲಿದ್ದಾರೆ ಎಂದು ಅಥಿಯಾ ಶೆಟ್ಟಿ ಅವರ ಆಪ್ತ ಮೂಲವೊಂದು ತಿಳಿಸಿದೆ.
ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, "ಕೆಎಲ್ ರಾಹುಲ್ ಅವರ ಪೋಷಕರು ಇತ್ತೀಚೆಗೆ ಅಥಿಯಾ ಅವರ ಕುಟುಂಬವನ್ನು ಭೇಟಿ ಮಾಡಲು ಮುಂಬೈಗೆ ಬಂದಿದ್ದರು. ದಂಪತಿಗಳು ತಮ್ಮ ಕುಟುಂಬಗಳೊಂದಿಗೆ ಅವರು ಶೀಘ್ರದಲ್ಲೇ ನೆಲೆಸಲಿರುವ ಹೊಸ ಮನೆಗೆ ಭೇಟಿ ನೀಡಿ, ಪ್ರಗತಿಯನ್ನು ವೀಕ್ಷಿಸಿದರು. ಈ ಜೋಡಿಯ ಮದುವೆಯು ಮುಂದಿನ ಮೂರು ತಿಂಗಳೊಳಗೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಮುಂಬೈನಲ್ಲಿ ಎರಡೂ ಕುಟುಂಬಗಳಿಗೆ ಅದ್ಧೂರಿ ಆಚರಣೆಯಾಗಲಿದೆ ಮತ್ತು ಮದುವೆಯ ಪ್ರತಿಯೊಂದು ವಿವರಗಳನ್ನು ಸ್ವತಃ ವಧು ಕಡೆಯವರು ನೋಡಿಕೊಳ್ಳುತ್ತಾರೆ," ಎಂದು ಮೂಲಗಳು ತಿಳಿಸಿವೆ.

ಕೆಎಲ್ ರಾಹುಲ್ ಜೊತೆ ಜರ್ಮನಿಗೆ ಅಥಿಯಾ ಶೆಟ್ಟಿ
ಇತ್ತೀಚೆಗಷ್ಟೇ ಅಥಿಯಾ ಶೆಟ್ಟಿ ಅವರು ಗಾಯಗೊಂಡಿದ್ದ ಕೆಎಲ್ ರಾಹುಲ್ ಅವರ ಚಿಕಿತ್ಸೆಗಾಗಿ ಜರ್ಮನಿಗೆ ತೆರಳಿದ್ದರು. ಗಾಯದ ಸಮಸ್ಯೆಯಿಂದಾಗಿ ಕ್ರಿಕೆಟಿಗ ಭಾರತದ ಇಂಗ್ಲೆಂಡ್ ಪ್ರವಾಸದಿಂದ ಹೊರಗುಳಿದಿದ್ದರು. ತೊಡೆಸಂದು ಗಾಯಕ್ಕೆ ಒಳಗಾದ 30 ವರ್ಷ ವಯಸ್ಸಿನ ಕೆಎಲ್ ರಾಹುಲ್ ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ರಾಹುಲ್ ಸುಮಾರು ಒಂದು ತಿಂಗಳ ಕಾಲ ಅಲ್ಲಿಯೇ ಇರುತ್ತಾರೆ ಮತ್ತು ಅಥಿಯಾ ಅವರು ಚೇತರಿಸಿಕೊಳ್ಳುವ ಸಮಯದಲ್ಲಿ ಅವರ ಪಕ್ಕದಲ್ಲಿದ್ದು, ನೋಡಿಕೊಳ್ಳುತ್ತಿದ್ದಾರೆ ಎಂದು ಮೂಲವು ಬಹಿರಂಗಪಡಿಸಿದೆ. ಅಲ್ಲಿ ಇಬ್ಬರೂ ಜೊತೆಗಿರುವ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.
ಆಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಕಳೆದ ವರ್ಷ ಅಹಾನ್ ಶೆಟ್ಟಿಯ ಚೊಚ್ಚಲ ಚಿತ್ರ ತಡಪ್‌ನ ಪ್ರಥಮ ಪ್ರದರ್ಶನದ ಸಮಯದಲ್ಲಿ ಒಟ್ಟಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಅಥಿಯಾ ಶೆಟ್ಟಿ ಆಗಾಗ್ಗೆ ಕೆಎಲ್ ರಾಹುಲ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡುವಾಗ ವಿಐಪಿ ಗ್ಯಾಲರಿಯಲ್ಲಿ ಕಾಣಿಸಿಕೊಳ್ಳುತ್ತಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications