For Quick Alerts
ALLOW NOTIFICATIONS  
For Daily Alerts
 

74ರ ಹರೆಯಕ್ಕೆ ಕಾಲಿಟ್ಟ ಸುನಿಲ್ ಗವಾಸ್ಕರ್: ಲಿಟಲ್ ಮಾಸ್ಟರ್ ಹುಟ್ಟುಹಬ್ಬಕ್ಕೆ ಸಚಿನ್ ವಿಶೇಷ ಸಂದೇಶ

ಭಾರತ ಕಂಡ ಶ್ರೇಷ್ಠ ಟೆಸ್ಟ್ ಕ್ರಿಕೆಟಿಗರಲ್ಲಿ ಒಬ್ಬರೆನಿಸಿದ ಸುನಿಲ್ ಗವಾಸ್ಕರ್ 74ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ದಿಗ್ಗಜ ಕ್ರಿಕೆಟಿಗನ ಈ ಜನ್ಮದಿನಕ್ಕೆ ಕ್ರಿಕೆಟ್ ಅಭಿಮಾನಿಗಳು ಹಾಗೂ ಕ್ರಿಕೆಟ್ ಆಟಗಾರರು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮತ್ತೋರ್ವ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸುನಿಲ್ ಗವಾಸ್ಕರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಬರಹವನ್ನು ಹಂಚಿಕೊಳ್ಳುವ ಮೂಲಕ ಶುಭಾಶಯ ತಿಳಿಸಿದ್ದಾರೆ.

ಕ್ರಿಕೆಟ್‌ನಲ್ಲಿ ಮಾಡಿರುವ ವಿಶೇಷ ಸಾಧನೆಗಳ ಕಾರಣದಿಂದಾಗಿ ಸುನಿಲ್ ಗವಾಸ್ಕರ್ ಭಾರತ ಮಾತ್ರವಲ್ಲದೆ ವಿಶ್ವ ಕಂಡ ಶ್ರೇಷ್ಠ ಕ್ರಿಕೆಟ್ ಆಟಗಾರರಲ್ಲಿ ಒಬ್ಬರು ಎಂದು ಕರೆಸಿಕೊಳ್ಳುತ್ತಾರೆ. ಭಾರತದ ಪರವಾಗಿ ಸಾಕಷ್ಟು ದಾಖಲೆಗಳು ಹಾಗೂ ಅನೇಕ ಮೈಲಿಗಲ್ಲುಗಳನ್ನು ಸ್ಥಾಪಿಸಿದವರು ಸುನಿಲ್ ಗವಾಸ್ಕರ್. ಸಚಿನ್ ತೆಂಡೂಲ್ಕರ್ ಅವರಂಥಾ ದಿಗ್ಗಜ ಆಟಗಾರನಿಗೂ ಇವರೇ ಸ್ಪೂರ್ತಿ ಎನ್ನುವುದನ್ನು ಸ್ವತಃ ಸಚಿನ್ ತೆಂಡೂಲ್ಕರ್ ಹೇಳಿಕೊಂಡಿದ್ದು ಇದೀಗ 74ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅದನ್ನು ತೆಂಡೂಲ್ಕರ್ ಮತ್ತೊಮ್ಮೆ ಹಂಚಿಕೊಂಡಿದ್ದಾರೆ.

Sunil Gavaskar celebrating 74th birthday: Sachin Tendulkar sends special birthday message

ಸುನಿಲ್ ಗವಾಸ್ಕರ್ ವೆಸ್ಟ್ ವಿಂಡೀಸ್ ವಿರುದ್ಧ ಆಡಿದ ಪದಾರ್ಪಣಾ ಸರಣಿಯಲ್ಲಿಯೇ ಅದ್ಭುತ ಪ್ರದರ್ಶನ ನೀಡಿ ಮಿಂಚಿದ ಆಟಗಾರ. ಬಲಾಢ್ಯ ಆಟಗಾರರನ್ನು ಒಳಗೊಂಡಿದ್ದ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಗವಾಸ್ಕರ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ದಾಖಲೆ ಅಬ್ಬರಿಸಿದ್ದರು. ವೆಸ್ಟ್ ಇಂಡೀಸ್ ತಂಡದಲ್ಲಿ ಅಪಾಯಕಾರಿ ಬೌಲರ್‌ಗಳು ಇದ್ದರೂ ತಮ್ಮ ಆ ಚೊಚ್ಚಲ ಸರಣಿಯಲ್ಲಿಯೇ ಗವಾಸ್ಕರ್ 774 ರನ್‌ಗಳನ್ನು ಬಾರಿಸಿ ಮಿಂಚಿದ್ದರು ಗವಾಸ್ಕರ್. ಟೆಸ್ಟ್ ಕ್ರಿಕೆಟ್‌ನ ಪದಾರ್ಪಣಾ ಸರಣಿಯಲ್ಲಿ ಇದು ಈವರೆಗೂ ಅತಿ ಹೆಚ್ಚಿನ ರನ್ ಎಂಬ ದಾಖಲೆಯಾಗಿ ಈಗಲೂ ಉಳಿದುಕೊಂಡಿದೆ.

ಅಲ್ಲದೆ ಸುನಿಲ್ ಗವಾಸ್ಕರ್ ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್‌ಗಳ ಮೈಲಿಗಲ್ಲು ದಾಟಿದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ದಾಖಲೆಯನ್ನು ಸುದೀರ್ಘ ಕಾಲ ತಮ್ಮಲ್ಲೇ ಇಟ್ಟುಕೊಂಡಿದ್ದ ಸುನಿಲ್ ಗವಾಸ್ಕರ್ ಬಳಿಕ 2005ರಲ್ಲಿ ಸಚಿನ್ ತೆಂಡೂಲ್ಕರ್ ಈ ದಾಖಲೆಯನ್ನು ಮುರಿದಿದ್ದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಭಾರತೀಯ ಬ್ಯಾಟರ್‌ಗಳ ಪಟ್ಟಿಯಲ್ಲಿ ಸುನಿಲ್ ಗವಾಸ್ಕರ್ ಈಗಲೂ ಮೂರನೇ ಸ್ಥಾನದಲ್ಲಿದ್ದಾರೆ. ಇನ್ನು ಈ ದಿಗ್ಗಜ ಆಟಗಾರ 1983ರಲ್ಲಿ ವಿಶ್ವಕಪ್ ಗೆದ್ದ ಬಾರತೀಯ ತಂಡದ ಭಾಗವೂ ಆಗಿದ್ದರು ಎಂಬುದು ವಿಶೇಷ. ಸುನಿಲ್ ಗವಾಸ್ಕರ್ ತಮ್ಮ ವೃತ್ತಿಜೀವನದಲ್ಲಿ 125 ಟೆಸ್ಟ್ ಮತ್ತು 108 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ ದಿಗ್ಗಜ ಆಟಗಾರ ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ 10,122 ರನ್‌ಗಳನ್ನು ಗಳಿಸಿದ್ದು ಏಕದಿನ ಮಾದರಿಯಲ್ಲಿ 3092 ರನ್‌ಗಳನ್ನು ಗಳಿಸಿದ್ದಾರೆ.

ಈ ದಿಗ್ಗಜ ಆಟಗಾರನಿಗೆ ಸಚಿನ್ ತೆಂಡೂಲ್ಕರ್ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡು ಶುಭಹಾರೈಸಿದ್ದಾರೆ. ಈ ಫೋಟೋ ಜೊತೆಗೆ ಬ್ಯಾಟಿಂಗ್‌ನಲ್ಲಿ ತನಗೆ ಆದರ್ಶನವಾಗಿದ್ದರು ಎಂಬುದನ್ನು ಸಚಿನ್ ತೆಂಡೂಲ್ಕರ ಮತ್ತೊಮ್ಮೆ ಹೇಳಿಕೊಂಡಿದ್ದಾರೆ. ಅಲ್ಲದೆ ತನ್ನನ್ನೂ ಸೇರಿದಂತೆ ಎಲ್ಲರೂ ಇವರಂತೆ ಬ್ಯಾಟಿಂಗ್ ಮಾಡಬೇಕು ಬಯಸುತ್ತಿದ್ದ ಕ್ರಿಕೆಟಿಗ ಎಂದು ಸಚಿನ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

"ನನ್ನ ಬ್ಯಾಟಿಂಗ್ ಆದರ್ಶ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು. ನಾವೆಲ್ಲಾ ಬಾಲ್ಯದಲ್ಲಿದ್ದಾಗ ಇವರಂತೆಯೇ ಬ್ಯಾಟಿಂಗ್ ಮಾಡಬೇಕು ಎಂದು ಬಯಸಿದ್ದವರು. ಹ್ಯಾಪಿ ಬರ್ತ್‌ಡೇ ಗವಾಸ್ಕರ್ ಸರ್!" ಎಂದು ಸಚಿನ್ ತೆಂಡೂಲ್ಕರ್ ಕ್ರಿಕೆಟ್ ದಿಗ್ಗಜನಿಗೆ ಶುಭಾಶಯಕೋರಿದ್ದಾರೆ.

Story first published: Monday, July 10, 2023, 17:12 [IST]
Other articles published on Jul 10, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+