Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2024: ಐಪಿಎಲ್‌ನಲ್ಲಿ ಅತ್ಯುತ್ತಮ ಆರಂಭಿಕ ಜೋಡಿಯನ್ನು ಆಯ್ಕೆ ಮಾಡಿದ ಸುನಿಲ್ ಗವಾಸ್ಕರ್

ಬಹು ನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್ 17ರ ಆರಂಭಕ್ಕೆ ದಿನಗಣನೆ ಶುರುವಾಗಿದೆ ಮತ್ತು ಶ್ರೀಮಂತ ಕ್ರಿಕೆಟ್ ಲೀಗ್‌ಗಾಗಿ ಎಲ್ಲಾ ಹತ್ತು ಫ್ರಾಂಚೈಸಿಗಳು ತಯಾರಿ ನಡೆಸಿವೆ.

ಇದೇ ವೇಳೆ ಭಾರತದ ಲೆಜೆಂಡರಿ ಬ್ಯಾಟರ್ ಸುನಿಲ್ ಗವಾಸ್ಕರ್ ಅವರು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ರುತುರಾಜ್ ಗಾಯಕ್ವಾಡ್ ಮತ್ತು ಡೆವೊನ್ ಕಾನ್ವೇ ಜೋಡಿಯನ್ನು ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಅತ್ಯುತ್ತಮ ಆರಂಭಿಕ ಜೋಡಿ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಸಿಎಸ್‌ಕೆ ತಂಡವನ್ನು ಐದನೇ ಐಪಿಎಲ್ ಪ್ರಶಸ್ತಿಗೆ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಇಬ್ಬರು ಬ್ಯಾಟರ್‌ಗಳಿಗೆ ಸುನಿಲ್ ಗವಾಸ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಆರಂಭಿಕ ಜೋಡಿಯಾದ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಜೋಡಿಗಿಂತ ಸಿಎಸ್‌ಕೆ ಜೋಡಿಯನ್ನು ಮೇಲಿರಿಸಿದರು.

Sunil Gavaskar Picks Best Opening Pair Ahead IPL 2024

ಇತ್ತೀಚಿನ ಸಂವಾದದಲ್ಲಿ ಸುನಿಲ್ ಗವಾಸ್ಕರ್ ಅವರು ಸಿಎಸ್‌ಕೆ ತಂಡದ 4 ಮತ್ತು 5ನೇ ಕ್ರಮಾಂಕದ ಬ್ಯಾಟರ್‌ಗಳ ಮೇಲಿನ ಒತ್ತಡವನ್ನು ಹೇಗೆ ತಗ್ಗಿಸಿದರು ಎಂಬುದರ ಕುರಿತು ವಿಶೇಷ ಒತ್ತು ನೀಡುವ ಮೂಲಕ ಡೆವೊನ್ ಕಾನ್ವೇ ಮತ್ತು ರುತುರಾಜ್ ಗಾಯಕ್ವಾಡ್‌ಗೆ ಪ್ರಶಂಸೆ ವ್ಯಕ್ತಪಡಿಸಿದರು.

"ಇದು ಕೆಲವು ವರ್ಷಗಳಲ್ಲಿ ಸಿಎಸ್‌ಕೆ ತಂಡದ ಅನುಕೂಲವಾಗಿದೆ. ಈ ಎಲ್ಲಾ ವರ್ಷಗಳಲ್ಲಿ ಅವರು ಯಾವಾಗಲೂ ಅಗ್ರಸ್ಥಾನದಲ್ಲಿರುವ ಬ್ಯಾಟರ್‌ಗಳನ್ನು ಹೊಂದಿದ್ದಾರೆ. ಮೊದಲ ಎಸೆತದಿಂದಲೇ ಎದುರಾಳಿ ತಂಡದ ವಿರುದ್ಧ ಆಕ್ರಮಣಕಾರಿ ಆಟವನ್ನು ತೆಗೆದುಕೊಳ್ಳಬಹುದು ಮತ್ತು ನಂತರ ಅವರು ಫಿನಿಶರ್‌ಗಳನ್ನು ಸಹ ಪಡೆದರು," ಎಂದು ಸುನಿಲ್ ಗವಾಸ್ಕರ್ ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಹೇಳಿದರು.

"ರುತುರಾಜ್ ಗಾಯಕ್ವಾಡ್ ಮತ್ತು ಡೆವೊನ್ ಕಾನ್ವೇ ಅವರ ಎಡ ಮತ್ತು ಬಲಗೈ ಆರಂಭಿಕ ಸಂಯೋಜನೆಯು ಬಹುಶಃ ಐಪಿಎಲ್‌ನಲ್ಲಿ ಅತ್ಯುತ್ತಮ ಆರಂಭಿಕ ಜೋಡಿಯಾಗಿದೆ. ಏಕೆಂದರೆ ಈ ಜೋಡಿ ಕಳೆದ ವರ್ಷ ಉತ್ತಮ ಆರಂಭವನ್ನು ನೀಡಿದರು. ಹಾಗಾಗಿ 4 ಮತ್ತು 5ನೇ ಕ್ರಮಾಂಕದಲ್ಲಿ ಬರುತ್ತಿದ್ದ ಬ್ಯಾಟರ್‌ಗಳ ಮೇಲೆ ಒತ್ತಡ ಸ್ವಲ್ಪ ಕಡಿಮೆಯಾಯಿತು," ಎಂದು ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಹೇಳಿದರು.

ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ಚಟುವಟಿಕೆಗಳಿಂದ ಸುನಿಲ್ ಗವಾಸ್ಕರ್ ತುಂಬಾ ಪ್ರಭಾವಿತರಾಗಿದ್ದಾರೆ ಮತ್ತು ಎಂಎಸ್ ಧೋನಿ ನಾಯಕತ್ವದ ತಂಡಕ್ಕೆ ಸಂಬಂಧಿಸಿದಂತೆ ದೊಡ್ಡ ಭವಿಷ್ಯ ನುಡಿದಿದ್ದಾರೆ.

Sunil Gavaskar Picks Best Opening Pair Ahead IPL 2024

2023ರ ಐಪಿಎಲ್ ಸಮಯದಲ್ಲಿ ಸಿಎಸ್‌ಕೆ ಬೌಲಿಂಗ್‌ನಲ್ಲಿ ಸ್ವಲ್ಪ ಕೊರತೆಯನ್ನು ಹೊಂದಿತ್ತು. ಆದರೆ ಇದೀಗ ಆ ಸೇರ್ಪಡೆಗಳು ಬೌಲಿಂಗ್ ವಿಭಾಗದಲ್ಲಿ ತಂಡವನ್ನು ಬಲಪಡಿಸಿದೆ ಎಂದು ಸುನಿಲ್ ಗವಾಸ್ಕರ್ ಹೇಳಿದರು.

"ಹರಾಜು ಟೇಬಲ್‌ನಲ್ಲಿ ಸಿಎಸ್‌ಕೆ ಫ್ರಾಂಚೈಸಿ ಮಾಡಿದ ಖರೀದಿಗಳನ್ನು ನೀವು ನೋಡಿದರೆ, ಅವರು ಬಲಪಡಿಸಬೇಕಾದ ಅಂಶಗಳತ್ತ ಗಮನ ಹರಿಸಿದ್ದಾರೆ. ಕಳೆದ ವರ್ಷ ಬೌಲಿಂಗ್‌ನಲ್ಲಿ ಸ್ವಲ್ಪ ಕೊರತೆ ಇದ್ದಂತೆ ತೋರುತ್ತಿತ್ತು ಮತ್ತು ಅಂಬಟಿ ರಾಯುಡು ಅವರ ನಿವೃತ್ತಿಯ ನಂತರ ಬ್ಯಾಟಿಂಗ್‌ನಲ್ಲಿಯೂ ಅವರು ಮಧ್ಯಮ ಕ್ರಮಾಂಕವನ್ನು ಸ್ವಲ್ಪ ಬಲಪಡಿಸಬೇಕಾಯಿತು. ಅದನ್ನೆಲ್ಲ ಮಾಡಿದೆ".

"ಸಿಎಸ್‌ಕೆ ಯುವ ಮತ್ತು ಅನುಭವದ ಉತ್ತಮ ಮಿಶ್ರಣವನ್ನು ಹೊಂದಿದೆ. ಆದ್ದರಿಂದ, ಸಿಎಸ್‌ಕೆ ಯಾವಾಗಲೂ ಮೊದಲ ನಾಲ್ಕು ಸ್ಥಾನಗಳಲ್ಲಿ ಬರುತ್ತದೆ ಎಂದು ನಾನು ಭಾವಿಸುತ್ತೇನೆ," ಎಂದು ಸುನಿಲ್ ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ತಿಳಿಸಿದರು.

ಇಷ್ಟು ವರ್ಷಗಳ ಕಾಲ ಚೆನ್ನೈ ಸೂಪರ್ ಕಿಂಗ್ಸ್ ಪ್ರದರ್ಶನ ನೀಡಿದ ರೀತಿಯನ್ನು ನೋಡಿದರೆ, ಆಡಿದ 16 ಆವೃತ್ತಿಗಳಲ್ಲಿ 12ರಲ್ಲಿ ಪ್ಲೇಆಫ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಹಾಗಾಗಿ ಇದು 13ನೇ ಬಾರಿಗೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಿದರು.

Story first published: Friday, February 9, 2024, 20:26 [IST]
Other articles published on Feb 9, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+