ಸುನಿಲ್ ಗವಾಸ್ಕರ್ 10,000 ರನ್ ಈಗಿನ 16,000 ರನ್‌ಗೆ ಸಮ: ಇನ್ಝಮಾಮ್

ಇಸ್ಲಮಾಬಾದ್, ಜುಲೈ 17: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇನ್ಝಮಾಮ್ ಉಲ್ ಹಕ್, ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್, ದಂತಕತೆ ಸುನಿಲ್ ಗವಾಸ್ಕರ್ ಅವರನ್ನು ಶ್ಲಾಘಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಸುನಿಲ್ ಗವಾಸ್ಕರ್ ಮಾಡಿದ 10,000 ರನ್ ಸಾಧನೆ ಯೋಚಿಸಲಾಗದ್ದು ಎಂದಿದ್ದಾರೆ.
ಸುನಿಲ್ ಗವಾಸ್ಕರ್ ಯುಗದಲ್ಲಿ ಅನೇಕ ಶ್ರೇಷ್ಠ ಆಟಗಾರರಿದ್ದರು. ಜಾವೆದ್ ಮಿಯಾಂದಾದ್, ವಿವಿಯನ್ ರಿಚರ್ಡ್ಸ್ ಇಂಥ ಅನೇಕ ದಿಗ್ಗಜರಿದ್ದರು. ಆದರೆ ಅವರ್ಯಾರಿಗೂ 10,000 ರನ್ ಗಡಿ ದಾಟಲು ಸಾಧ್ಯವಾಗಿರಲಿಲ್ಲ ಎಂದು ಇನ್ಝಮಾಮ್ ಉಲ್ ಹಕ್ ಹೇಳಿದ್ದಾರೆ.
ತನ್ನ ಯೂ ಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಹಕ್, 'ಗವಾಸ್ಕರ್ ಯುಗ ಮತ್ತು ಅದಕ್ಕೂ ಹಿಂದೆ ಶ್ರೇಷ್ಠ ಆಟಗಾರರಿದ್ದರು. ಜಾವೆದ್ ಮಿಯಾಂದಾದ್, ಗ್ಯಾರಿ ಸೋಬರ್ಸ್, ಡಾನ್ ಬ್ರಾಡ್ಮನ್ ಇಂಥವರಿದ್ದರು. ಆದರೆ ಇವರ್ಯಾರಿಗೂ 10,000 ರನ್ ಗಡಿ ದಾಟಲಾಗಿಲ್ಲ. ಈಗ ಕೂಡ ಕೆಲವೇ ಕೆಲವು ಆಟಗಾರರು ಮಾತ್ರ ಈ ಸಾಧನೆ ಮಾಡಿದ್ದಾರೆ,' ಎಂದಿದ್ದಾರೆ.
'ನೀವು ನನ್ನ ಬಳಿ ಕೇಳಿದರೆ, ಆಗಿನ ಯುಗದಲ್ಲಿ ಸುನಿಲ್ ಗವಾಸ್ಕರ್ ಗಳಿಸಿದ 10,000 ರನ್ ಈಗಿನ 16,000 ರನ್‌ಗೆ ಸಮ. ಆ 10,000 ರನ್ ಈಗಿನ 16,000 ರನ್‌ಗೂ ಹೆಚ್ಚೇ ಹೊರತು ಕಡಿಮೆಯಂತೂ ಆಗಲಾರದು,' ಎಂದು ಇನ್ಝಮಾಮ್ ಹೇಳಿದ್ದಾರೆ. ಮಾರ್ಚ್ 1987ರಲ್ಲಿ ಗವಾಸ್ಕರ್ ಅವರು ಪಾಕಿಸ್ತಾನ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಮಾಡಿದ ವಿಶ್ವದ ಮೊದಲ ಕ್ರಿಕೆಟಿಗನಾಗಿ ದಾಖಲೆ ನಿರ್ಮಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications