Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕ್ರಿಕೆಟ್ ದಿಗ್ಗಜ ಗವಾಸ್ಕರ್ ತಂಡಕ್ಕೆ ಸೇರಿದ ನವತಾರೆ ಸರ್ಫರಾಜ್

ಮುಂಬೈ, ಜುಲೈ 24: ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಅವರ ಪ್ರೊಫೆಷನಲ್ ಮ್ಯಾನೇಜ್ಮೆಂಟ್ ಗ್ರೂಪ್ (ಪಿಎಂಜಿ) ಗೆ ಐಪಿಎಲ್ ನ ನವತಾರೆ ಸರ್ಫರಾಜ್ ಖಾನ್ ಸೇರ್ಪಡೆಗೊಂಡಿದ್ದಾರೆ.

ಪಿಎಂಜಿ ಸಂಸ್ಥೆ ಜೊತೆ ಸರ್ಫರಾಜ್ ಖಾನ್ ಜೊತೆ ಗುರುವಾರ(ಜುಲೈ 23) ಮೂರು ವರ್ಷಗಳ ಕಾಲ ಒಪ್ಪಂದ ಮಾಡಿಕೊಂಡಿದ್ದಾರೆ. ಗವಾಸ್ಕರ್ ಹಾಗೂ ಸ್ಯಾಮ್ ಬಲ್ಸಾರಾ ಸಹ ಮಾಲೀಕತ್ವದ ಮ್ಯಾಡಿಸನ್ ಹಾಗೂ ನೂಮಿ ಮೆಹ್ತಾ ಹಾಗೂ ಸೆಲ್ವೆಲ್ ಒನ್ ಗ್ರೂಪ್ ಸಂಸ್ಥೆ ಈಗ ಸರ್ಫರಾಜ್ ಖಾನ್ ಅವರ ವಾಣಿಜ್ಯ ಡೀಲಿಂಗ್ ಗಳನ್ನು ನೋಡಿಕೊಳ್ಳಲಿದೆ. ಟೈಮ್ಸ್ ಆಫ್ ಇಂಡಿಯಾ ವರದಿಯಂತೆ 2 ಕೋಟಿ ರು ಗೆ ಈ ಡೀಲ್ ಆಗಿದೆಯಂತೆ. [ಸಚಿನ್ ದಾಖಲೆ ಮುರಿದಿದ್ದ ಸರ್ಫರಾಜ್ ಈಗ ನವತಾರೆ!]

Sunil Gavaskar's PMG signs 'Rs 2 crore' deal with batsman Sarfaraz Khan

ಇಂಡಿಯನ್ ಪ್ರಿಮಿಯರ್ ಲೀಗ್ 2015ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಬ್ಯಾಟ್ ಬೀಸಿದ್ದರು. ಸಚಿನ್ ಶಾಲಾ ದಿನಗಳಲ್ಲಿ ನಿರ್ಮಿಸಿದ್ದ ವಿಶ್ವದಾಖಲೆ ಮುರಿದಿದ್ದ ಸರ್ಫರಾಜ್ ನವತಾರೆಯಾಗಿ ಮಿಂಚಿದ್ದರು.

2014ರಲ್ಲಿ ದುಬೈನಲ್ಲಿ ನಡೆದ ಅಂಡರ್ 19 ವಿಶ್ವಕಪ್ ನಲ್ಲಿ ಟೀಂ ಇಂಡಿಯಾದಲ್ಲಿ ಸರ್ಫರಾಜ್ ಸ್ಥಾನ ಪಡೆದಿದ್ದರು. ಡಿಸೆಂಬರ್ 2014ರಲ್ಲಿ ಮುಂಬೈ ಪರ ಮೊದಲ ಪಂದ್ಯವಾಡಿ ಬೆಂಗಾಲ್ ಬೌಲರ್ಸ್ ಎದುರಿಸಿದ್ದರು. ಈಡನ್ ಗಾರ್ಡನ್ಸ್ ನಲ್ಲಿ ಕೇವಲ 1 ರನ್ ಗಳಿಸಿದ್ದ ಸರ್ಫರಾಜ್ ಇನ್ನೆರಡು ಪಂದ್ಯಗಳಲ್ಲಿ ಒಂದು ಅರ್ಧಶತಕ ಬಾರಿಸಿದ್ದರು

2008ರಲ್ಲಿ ಐಪಿಎಲ್ ಶುರುವಾದಾಗ ಇನ್ನೂ ಬಾಲ ಪ್ರತಿಭೆ ಸರ್ಫರಾಜ್ ಯಾರು ಎಂದು ಕ್ರಿಕೆಟ್ ಲೋಕಕ್ಕೆ ತಿಳಿದಿರಲಿಲ್ಲ. 12ನೇ ವಯಸ್ಸಿನ ಸಚಿನ್ ದಾಖಲೆ ಮುರಿದಿದ್ದು, 17ನೇ ವಯಸ್ಸಿನಲ್ಲಿ ಐಪಿಎಲ್ 8ರಲ್ಲಿ ನವತಾರೆಯಾಗಿ ಬೆಳಗುತ್ತಿರುವುದು ಅವರ ಪ್ರತಿಭೆಗೆ ಸಾಕ್ಷಿಯಾಗಿದೆ.

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+