ಸಚಿನ್ ದಾಖಲೆ ಮುರಿದಿದ್ದ ಸರ್ಫರಾಜ್ ಈಗ ನವತಾರೆ!
ಬೆಂಗಳೂರು, ಏ.30: ಭಾರತೀಯ ಕ್ರಿಕೆಟ್ ಲೋಕದ ಹೊಸ ಪ್ರತಿಭೆ ಸರ್ಫರಾಜ್ ಖಾನ್ ಯಾರು? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಇಂಡಿಯನ್ ಪ್ರಿಮಿಯರ್ ಲೀಗ್ 2015ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಬ್ಯಾಟ್ ಬೀಸುತ್ತಿದ್ದಾರೆ. ಸಚಿನ್ ಶಾಲಾ ದಿನಗಳಲ್ಲಿ ನಿರ್ಮಿಸಿದ್ದ ವಿಶ್ವದಾಖಲೆ ಮುರಿದಿದ್ದ ಸರ್ಫರಾಜ್ ಈಗ 17ವರ್ಷ ವಯಸ್ಸಿನ ನವತಾರೆ.
ಮಾಜಿ ಕ್ರಿಕೆಟರ್ ರವಿಶಾಸ್ತ್ರಿ ಸೇರಿದಂತೆ ಹಲವಾರು ಮಂದಿ ಕ್ರಿಕೆಟ್ ಫ್ಯಾನ್ಸ್ ಸರ್ಫರಾಜ್ ರನ್ನು ಪಾಕಿಸ್ತಾನ ದಿಗ್ಗಜ 'ಜಾವೇದ್ ಮಿಯಾಂದಾದ್' ಗೆ ಹೋಲಿಸಿದ್ದು ವಿಶೇಷವಾಗಿತ್ತು. ಟಿ20 ಪಂದ್ಯವೆಂದರೆ ಹಾಗೆ ಇಲ್ಲಿ ಎಲ್ಲಾ ತ್ವರಿತವಾಗಿ ಆಗಿಬಿಡುತ್ತದೆ. 20 ಓವರ್ ಮುಗಿಯುವುದರೊಳಗೆ ಹೊಸ ಸ್ಟಾರ್ ಗಳು ಮಿನುಗುತ್ತಿರುತ್ತವೆ.
[47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್] | [8 ತಂಡಗಳ ನೂರೆಂಟು ಆಟಗಾರರು] | [ಐಪಿಎಲ್ 2015: ಫ್ಯಾನ್ಸಿಗೆ ಗೈಡ್]
ಮುಂಬೈ ಮೂಲದ ಸರ್ಫರಾಜ್ ಈಗ ಬೆಂಗಳೂರಿನ ಆರ್ ಸಿಬಿ ತಂಡದ ನೆಚ್ಚಿನ ಆಟಗಾರ. ರಾಜಸ್ಥಾನ್ ರಾಯಲ್ಸ್ ವಿರುದ್ಧ 21 ಎಸೆತಗಳಲ್ಲಿ 45 ರನ್ (6 ಬೌಂಡರಿ, 1 ಸಿಕ್ಸರ್) ಸಿಡಿಸಿದ ಸರ್ಫರಾಜ್ ಅವರಿಗೆ ವಿಶ್ವದೆಲ್ಲೆಡೆಯಿಂದ ಪ್ರಶಂಸೆಯ ಸುರಿಮಳೆಯಾಯಿತು. ಈ ನಡುವೆ ಮಳೆಗೆ ಪಂದ್ಯದ ಆಹುತಿಯಾಗಿದ್ದು ಎಷ್ಟೋ ಮಂದಿಗೆ ನೆನಪೇ ಆಗಲಿಲ್ಲ.
ಸರ್ಫರಾಜ್ ಎಲ್ಲಿಯವ?: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಶಾಲಾ ದಿನಗಳಲ್ಲಿ ನಿರ್ಮಿಸಿದ್ದ ವಿಶ್ವದಾಖಲೆಯನ್ನು ಮುಂಬೈ ಮೂಲದ ಸರ್ಫರಾಜ್ ಖಾನ್ ಮುರಿಯುವ ಮೂಲಕ ಬೆಳಕಿಗೆ ಬಂದರು.

ಸಚಿನ್ ದಾಖಲೆ ಮುರಿದಿದ್ದ ಸರ್ಫರಾಜ್
12 ವರ್ಷ ವಯಸ್ಸಿನಲ್ಲೇ 439ರನ್ ಚೆಚ್ಚಿದ್ದ ಸರ್ಫರಾಜ್ ಅವರು ಸಚಿನ್ ದಾಖಲೆ ಮುರಿದಿದ್ದರು. 2009ರಲ್ಲಿ ಹ್ಯಾರೀಸ್ ಶೀಲ್ಡ್ ಟೂರ್ನಿಯಲ್ಲಿ ಸರ್ಫರಾಜ್ 439 ರನ್ (421 ಎಸೆತ, 56X4, 12X6) ಗಳಿಸಿ ಎಲ್ಲರ ಗಮನ ಸೆಳೆದಿದ್ದರು. ಇದು ಅವರ ಮೊದಲ ಪಂದ್ಯವಾಗಿತ್ತು ಎಂಬುದು ವಿಶೇಷ.

ತಂದೆ ನೌಷದ್ ಕೋಚ್
ರಿಜ್ವಿ ಸ್ಪ್ರಿಂಗ್ ಫೀಲ್ಡ್ ಪರ ಆಡಿದ ಸರ್ಫರಾಜ್ ಅವರಿಗೆ ಅವರ ತಂದೆ ನೌಷದ್ ಖಾನ್ ಅವರೇ ಕೋಚ್ ಆಗಿದ್ದರು. ಇಂಟರ್ ಸ್ಕೂಲ್ ಚಾಂಪಿಯನ್ ಶಿಪ್ ನಲ್ಲಿ ಬಲಗೈ ಬ್ಯಾಟ್ಸ್ ಮನ್ ಹಾಗೂ ಆಫ್ ಸ್ಪಿನ್ ಬೌಲರ್ ಆಗಿ ಸರ್ಫರಾಜ್ ಗುರುತಿಸಿಕೊಂಡಿದ್ದರು. ಶಾಲಾ ದಿನಗಳಲ್ಲಿ ಕಲಿತ ರಿವರ್ಸ್ ಬ್ಯಾಟ್ ಹೊಡೆತ, ಸ್ಕೂಪ್ ಎಲ್ಲವೂ ಐಪಿಎಲ್ ನಲ್ಲೂ ಪ್ರದರ್ಶಿಸಿದ್ದು ವಿಶೇಷ.
ಅಂಡರ್ 19 ವಿಶ್ವಕಪ್
2014ರಲ್ಲಿ ದುಬೈನಲ್ಲಿ ನಡೆದ ಅಂಡರ್ 19 ವಿಶ್ವಕಪ್ ನಲ್ಲಿ ಟೀಂ ಇಂಡಿಯಾದಲ್ಲಿ ಸರ್ಫರಾಜ್ ಸ್ಥಾನ ಪಡೆದಿದ್ದರು. ಡಿಸೆಂಬರ್ 2014ರಲ್ಲಿ ಮುಂಬೈ ಪರ ಮೊದಲ ಪಂದ್ಯವಾಡಿ ಬೆಂಗಾಲ ಬೌಲರ್ಸ್ ಎದುರಿಸಿದ್ದರು. ಈಡನ್ ಗಾರ್ಡನ್ಸ್ ನಲ್ಲಿ ಕೇವಲ 1 ರನ್ ಗಳಿಸಿದ್ದ ಸರ್ಫರಾಜ್ ಇನ್ನೆರಡು ಪಂದ್ಯಗಳಲ್ಲಿ ಒಂದು ಅರ್ಧಶತಕ ಬಾರಿಸಿದ್ದರು
ಅದೃಷ್ಟ ಬಾಗಿಲು ತೆರೆದ ಐಪಿಎಲ್
ವಿಶಿಷ್ಟ ರೀತಿಯಲ್ಲಿ ಹರಾಜು ಕೂಗುವ ವಿಜಯ್ ಮಲ್ಯ 2014ರಲ್ಲೂ ಕೂಡಾ 50 ಲಕ್ಷ ರು ನೀಡಿ ಸರ್ಫರಾಜ್ ಆಯ್ಕೆ ಮಾಡಿಕೊಂಡಾಗ ಎಲ್ಲರೂ ನಗೆಯಾಡಿದ್ದರು. ಏ.22ರಂದು ಮೊದಲ ಐಪಿಎಲ್ ಪಂದ್ಯವಾಡಿದ ಸರ್ಫರಾಜ್ ಚೆನ್ನೈ ವಿರುದ್ಧ ಹೆಚ್ಚು ರನ್ ಗಳಿಸಲಿಲ್ಲ. ಅದರೆ, ಟೂರ್ನಿಯ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ಬರೆದರು.

ಉತ್ತಪ್ಪ ಜೊತೆ ಕಿರಿಕ್
ಸರ್ಫರಾಜ್ ಖಾನ್ ಕಾಲರ್ ಹಿಡಿದ ರಾಬಿನ್ ಉತ್ತಪ್ಪ,ಕೆಕೆಆರ್ ನಾಯಕ ಗಂಭೀರ್ ಸಮರ್ಥನೆ, ಎಂಬ ಹೆಡ್ ಲೈನ್ ಗಳು ಈ ಹಿಂದೆ ಸರ್ಫರಾಜ್ ಮೇಲೆ ಸರ್ಚ್ ಲೈಟ್ ಹರಿಸುವಂತೆ ಮಾಡಿತ್ತು. ಈ ಬಗ್ಗೆ ಇಲ್ಲಿ ಓದಿ
ಈ ಹಿಂದೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್ಸ್ ಕೂಡಾ ನಿಜವಾದ ವಯಸ್ಸು ಮರೆಮಾಚಿದ್ದ ಕಾರಣಕ್ಕೆ ಕ್ಯಾಂಪಿನಿಂದ ಹೊರಹಾಕಿ ಎಚ್ಚರಿಕೆ ನೀಡಿತ್ತು ಎಂದು ಇಎಸ್ ಪಿಎನ್ ಕ್ರಿಕ್ ಇನ್ಫೋ ವರದಿ ಮಾಡಿದೆ.
ಸರ್ಫರಾಜ್ ಸ್ಕೂಪ್ ಸಿಕ್ಸ್ ನೆನಪು
ಇತ್ತೀಚಿಗೆ ಮುಕ್ತಾಯವಾದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬರೋಡಾ ವಿರುದ್ಧ ಮುಂಬೈ ತಂಡಕ್ಕೆ ಕೊನೆ ಎಸೆತದಲ್ಲಿ 3 ರನ್ ಬೇಕಿತ್ತು. ಸರ್ಫರಾಜ್ ಅವರು ವೇಗಿ ಎಸೆದ ಚೆಂಡನ್ನು ಸ್ಕೂಪ್ ಮಾಡಿ ಸಿಕ್ಸ್ ಗೆ ಕಳಿಸಿದರು. ಇದು ನನಗೆ ಖುಷಿ ಕೊಟ್ಟ ಶಾಟ್ ಎಂದು ಸರ್ಫರಾಜ್ ತಂದೆ ನೌಷದ್ ಅವರು ಆರ್ ಸಿಬಿ ವೆಬ್ ಸೈಟ್ ಗೆ ಹೇಳಿದ್ದಾರೆ.
ಕ್ರಿಕೆಟ್ ದಿಗ್ಗಜರ ಜೊತೆ ಸರ್ಫರಾಜ್
ಕ್ರಿಕೆಟ್ ದಿಗ್ಗಜರ ಜೊತೆ ಸರ್ಫರಾಜ್: 2008ರಲ್ಲಿ ಐಪಿಎಲ್ ಶುರುವಾದಾಗ ಇನ್ನೂ ಬಾಲ ಪ್ರತಿಭೆ ಸರ್ಫರಾಜ್ ಯಾರು ಎಂದು ಕ್ರಿಕೆಟ್ ಲೋಕಕ್ಕೆ ತಿಳಿದಿರಲಿಲ್ಲ. 12ನೇ ವಯಸ್ಸಿನ ಸಚಿನ್ ದಾಖಲೆ ಮುರಿದಿದ್ದು, 17ನೇ ವಯಸ್ಸಿನಲ್ಲಿ ಐಪಿಎಲ್ 8ರಲ್ಲಿ ನವತಾರೆಯಾಗಿ ಬೆಳಗುತ್ತಿರುವುದು ಅವರ ಪ್ರತಿಭೆಗೆ ಸಾಕ್ಷಿ.
ಕ್ರಿಸ್ ಗೇಲ್, ವಿರಾಟ್ ಕೊಹ್ಲಿ, ಎಬಿ ಡಿ ವಿಲೆಯರ್ಸ್, ಮಿಚೆಲ್ ಸ್ಟಾರ್ಕ್ ರಂಥ ಪ್ರಮುಖ ಆಟಗಾರರ ನಡುವೆ ಸರ್ಫರಾಜ್ ತನ್ನದೇ ಆದ ಛಾಪು ಮೂಡಿಸುತ್ತಿದ್ದಾರೆ.
ಸರ್ಫರಾಜ್ ಖಾನ್ ವಿವರ
* DoB: 27/10/1997.
* ಬಲಗೈ ಬ್ಯಾಟ್ಸ್ ಮನ್, ಆಫ್ ಸ್ಪಿನ್
* 17ವರ್ಷ ವಯಸ್ಸು
* ಪ್ರಥಮ ದರ್ಜೆ ಪಂದ್ಯ: 3
* ಲಿಸ್ಟ್ ಎ (50 ಓವರ್ಸ್): 5
* ಟ್ವೆಂಟಿ 20: 9
* ಮುಂಬೈ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications