ಶ್ರೇಯಸ್ ಅಯ್ಯರ್ ಮೊಹಾಲಿ, ಬೆಂಗಳೂರು ಟೆಸ್ಟ್‌ನಲ್ಲಿ ಸ್ವಯಂಚಾಲಿತ ಆಯ್ಕೆಯಾಗಿದ್ದಾರೆ:ಸುನಿಲ್ ಗವಾಸ್ಕರ್

ಲಿಟ್ಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಸ್ವಯಂಚಾಲಿತವಾಗಿ ಟೀಂ ಇಂಡಿಯಾ ಪ್ಲೇಯಿಂಗ್ 11ನಲ್ಲಿ ಆಯ್ಕೆಯಾಗುವ ಆಟಗಾರ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಇದೇ ತಿಂಗಳ ಮಾರ್ಚ್ 4ರಿಂದ ಪ್ರಾರಂಭಗೊಳ್ಳಲಲಿದ್ದು, ಪಂಜಾಬ್ ಕ್ರಿಕೆಟ್ ಅಸೋಸಿಯೇಶ್ನ್‌ನ ಐಎಸ್ ಬಿಂದ್ರಾ ಸ್ಟೇಡಿಯಂ ಮೊಹಾಲಿಯಲ್ಲಿ ನಡೆಯಲದೆ. ಎರಡನೇ ಟೆಸ್ಟ್ ಪಂದ್ಯ ಮಾರ್ಚ್ 12ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ.
ಹಿರಿಯ ಆಟಗಾರರಾದ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರ ಭಾರತ ಟೆಸ್ಟ್ ತಂಡದಿಂದ ಹೊರಗಿಡಲಾಗಿದ್ದು, ವೃದ್ದಿಮಾನ್ ಸಾಹಾ ಮತ್ತು ಇಶಾಂತ್ ಶರ್ಮಾ ಭಾರತ ತಂಡದಿಂದ ಸ್ಥಾನ ಕಳೆದುಕೊಂಡಿದ್ದಾರೆ.
ಹೀಗಾಗಿ 3ನೇ ಕ್ರಮಾಂಕ ಮತ್ತು 5ನೇ ಕ್ರಮಾಂಕದ ಬ್ಯಾಟಿಂಗ್ ಸ್ಥಾನಗಳು ಖಾಲಿ ಉಳಿದಿದ್ಉದ, ಹನುಮ ವಿಹಾರಿ, ಶ್ರೇಯಸ್ ಅಯ್ಯರ್ ಮತ್ತು ಶುಭಮನ್ ಗಿಲ್ ಎರಡು ಸ್ಥಾನಕ್ಕೆ ಪೈಪೋಟಿ ನಡೆಸುತ್ತಿರುವ ಆಟಗಾರರಾಗಿದ್ದಾರೆ.
ಏತನ್ಮಧ್ಯೆ, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಸುನಿಲ್ ಗವಾಸ್ಕರ್ ಅವರನ್ನು ಅಯ್ಯರ್ ಅವರು ಟೆಸ್ಟ್ ಆಡುವ ಇಲೆವೆನ್‌ನಲ್ಲಿ ಸ್ವಯಂಚಾಲಿತ ಆಯ್ಕೆಯಾಗಿದ್ದಾರೆಯೇ ಎಂದು ಕೇಳಲಾದ ಪ್ರಶ್ನೆಗೆ, "ಅದರ ಬಗ್ಗೆ ಯಾವುದೇ ಪ್ರಶ್ನೆಯಿಲ್ಲ" ಟೆಸ್ಟ್ ತಂಡದಲ್ಲಿ ಅಯ್ಯರ್ ಅವರ ಬ್ಯಾಟಿಂಗ್ ಸ್ಥಾನ ಮಾತ್ರ ಪ್ರಶ್ನೆಯಾಗಿದೆ ಎಂದು ಅವರು ಹೇಳಿದರು.
"ನೂರು ಪ್ರತಿಶತ, ಅದರ ಬಗ್ಗೆ ಯಾವುದೇ ಪ್ರಶ್ನೆಯಿಲ್ಲ. ಹೌದು, ಅವರು ದಕ್ಷಿಣ ಆಫ್ರಿಕಾದಲ್ಲಿ ಆಡಲಿಲ್ಲ, ನೂರಕ್ಕೆ ನೂರರಷ್ಟು ಫಿಟ್ ಆಗಿರಲಿಲ್ಲ. ಅವನಿಗೆ ಹೊಟ್ಟೆಯಲ್ಲಿ ಹುಣ್ಣು ಇದೆ ಎಂದು ನಾನು ಭಾವಿಸುತ್ತೇನೆ, ಅದಕ್ಕಾಗಿಯೇ ಅವರು ಆಯ್ಕೆಗೆ ಲಭ್ಯವಿರಲಿಲ್ಲ'' ಎಂದು ಗವಾಸ್ಕರ್ ಹೇಳಿದ್ದಾರೆ.
ಇದೇ ವೇಳೆಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಶುಭ್ಮನ್ ಗಿಲ್ ಉತ್ತಮ ಆಯ್ಕೆಯೇ ಎಂದು ಕೇಳಿದ ಪ್ರಶ್ನೆಗೆ, ಅವರು ಅಯ್ಯರ್, ವಿಹಾರಿ ಮತ್ತು ಗಿಲ್ ಅವರಲ್ಲಿ ಇಬ್ಬರು ಮಾತ್ರ ತಂಡದಲ್ಲಿ ಸ್ಥಾನ ಪಡೆಯುತ್ತಾರೆ ಎಂದು ಪ್ರತಿಕ್ರಿಯಿಸಿದರು. ಗಿಲ್ ತಂಡದಲ್ಲಿ ಆರಂಭಿಕರಾಗಿ ಮಾತ್ರ ಆಡಿದ್ದಾರೆ ಮತ್ತು ಅವರು ಇನ್ನಿಂಗ್ಸ್ ತೆರೆಯದಿದ್ದರೆ ತಂಡದಲ್ಲಿ ಸ್ಥಾನ ಪಡೆಯುವುದಿಲ್ಲ ಎಂದು ಅವರು ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications