Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಉತ್ತರ ಪ್ರದೇಶ ರಣಜಿ ಕೋಚ್‌ ಆಗಿ ಮಾಜಿ ಸ್ಪಿನ್ನರ್ ಸುನಿಲ್ ಜೋಷಿ ಆಯ್ಕೆ

Sunil Joshi appointed Uttar Pradesh Ranji coach

ಲಕ್ನೋ, ಸೆಪ್ಟೆಂಬರ್ 3: ಭಾರತ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಸುನಿಲ್ ಜೋಷಿ ಅವರು ಉತ್ತರ ಪ್ರದೇಶ ರಣಜಿ ತಂಡದ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಜೋಷಿ, ಯುಪಿ ರಣಜಿ ತಂಡಕ್ಕೆ ಒಂದು ವರ್ಷದ ಕಾಲ ಕೋಚ್ ಆಗಿರಲಿದ್ದಾರೆ ಎಂದು ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (ಯುಪಿಸಿಎ) ಘೋಷಿಸಿದೆ.

'ನಾವು ಒಂದು ವರ್ಷದ ಮಟ್ಟಿಗೆ ಸುನಿಲ್ ಜೋಷಿ ಅವರನ್ನು ಕೋಚ್ ಆಗಿ ಆರಿಸಿದ್ದೇವೆ. ವಿಜಯ್ ಹಝಾರೆ ಟ್ರೋಫಿಗೂ ಮುನ್ನ ಅವರು ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ,' ಎಂದು ಯುಪಿಸಿಎ ಕಾರ್ಯದರ್ಶಿ ಯದುವೀರ್ ಸಿಂಗ್ ಅವರು ಪಿಟಿಐ ಜೊತೆ ಹೇಳಿದ್ದಾರೆ. ವಿಶ್ವಕಪ್ 2019ರ ಅಂತ್ಯದ ವರೆಗೂ ಜೋಷಿ, ಬಾಂಗ್ಲಾ ತಂಡದ ಸ್ಪಿನ್ ಸಲಹೆಗಾರ ಆಗಿದ್ದರು.

ಕರ್ನಾಟಕದ ಎಡಗೈ ಸ್ಪಿನ್ನರ್ ಆದ ಜೋಷಿ, ಸೆಪ್ಟೆಂಬರ್ 20ರಂದು ಉತ್ತರ ಪ್ರದೇಶ ತಂಡದ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. 2019ರ ವಿಜಯ್ ಹಝಾರೆ ಟ್ರೋಫಿ ಸೆಪ್ಟೆಂಬರ್ 24ರಿಂದ ಅಕ್ಟೋಬರ್ 10ರ ವರೆಗೆ ನಡೆಯಲಿದೆ. ಅಂದ್ಹಾಗೆ ಸುನಿಲ್ ಜೋಷಿ ಈ ಬಾರಿ ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಹುದ್ದೆಗೂ ಅರ್ಜಿ ಸಲ್ಲಿಸಿದ್ದರು. ಆದರೆ ಅಲ್ಲಿ ಆಯ್ಕೆಯಾಗಿರಲಿಲ್ಲ.

ಕಳೆದ ಸೀಸನ್‌ನಲ್ಲಿ ಉತ್ತರ ಪ್ರದೇಶ ರಣಜಿ ತಂಡಕ್ಕೆ ಮನ್ಸೂರ್ ಆಲಿ ಖಾನ್ ಕೋಚ್ ಆಗಿದ್ದರು. ರಣಜಿ ತಂಡಕ್ಕೆ ನಾಯಕನನ್ನು ಯುಪಿಸಿಎ ಇನ್ನಷ್ಟೇ ನಿರ್ಧರಿಸಬೇಕಿದೆ. 2005-06ರಲ್ಲಿ ಚೊಚ್ಚಲ ಬಾರಿಗೆ ರಣಜಿ ಟ್ರೋಫಿ ಗೆದ್ದಿದ್ದ ಯುಪಿ ತಂಡ, ಒಟ್ಟು 5 ಸಾರಿ ರನ್ನರ್ಸ್ ಅಪ್ ಪ್ರಶಸ್ತಿ ಜಯಿಸಿದೆ.

Story first published: Tuesday, September 3, 2019, 22:41 [IST]
Other articles published on Sep 3, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+